ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು ನಗರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಈ ದಿವಸ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಡಾ” ಪುನೀತ್ ರಾಜಕುಮಾರ್ ಇವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಕುಂದಾಪುರ ಅವರು ಭಾರತ ದೇಶದಲ್ಲಿ ಅತಿ ಹೆಚ್ಚು ಚಲನಚಿತ್ರ ನಟರಾಗಿ ಪ್ರಶಸ್ತಿಗಳನ್ನು ಪಡೆದಿರುವ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಕಣ್ಣಿನ ಬಗ್ಗೆ ಅರಿವು ಮೂಡಿಸಿದ್ದಾರೆ ಕರ್ನಾಟಕ ಉತ್ಪನ್ನಗಳ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಉಚಿತವಾಗಿ ಪ್ರಯೋಜಕ ನೀಡಿ ದೇಶದಲ್ಲಿ ಮಾದರಿಯಾಗಿದ್ದಾರೆ ಅವರ ನಿಧನದ ನಂತರ ಅತಿ ಹೆಚ್ಚು ರಕ್ತದಾನ ಶಿಬಿರ ಕಣ್ಣು ದಾನ ಹೃದಯದ ಬಗ್ಗೆ ಅತಿ ಹೆಚ್ಚು ಜಾಲತಾಣದಲ್ಲಿ ಪ್ರಚಾರ ಆಗಿರುವುದು ಕಾಣುತ್ತದೆ ಅದೇ ರೀತಿಯಾಗಿ ಕನ್ನಡ ಶಾಲೆಗಳ ಅಭಿವೃದ್ಧಿ ಬಗ್ಗೆ ಅತಿ ಹೆಚ್ಚು ಸಹಾಯ ಮಾಡಿದ್ದಾರೆ ಹೆಣ್ಣುಮಕ್ಕಳ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ ಇಂಥ ಒಬ್ಬ ಮಹಾನಾಯಕನ ಪುಣ್ಯ ಸ್ಮರಣೆಯನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಾಗೂ ಪುನೀತರಾಜಕುಮಾರ ಅಭಿಮಾನಿಗಳು ಡಾ. ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆಯಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು ಹಾಗೂ ಅವರ ಪುಣ್ಯ ಸ್ಮರಣೆಯಂದು ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಕುಮಾರ್ ಜಾಧವ್ ಸಿದ್ದಾರೋಡ ಗುರು0 ಕೊಟ್ರೇಶಪ್ಪ ಎಮ್ಮೆ ಮಲ್ಲಿಕಾರ್ಜುನ್ ಸಾವಕ್ಕಳವರ್ ಚಂದ್ರಪ್ಪ ಬಣಕಾರ್ ಗೋಪಿ ಕುಂದಾಪುರ ಪ್ರಭಾಕರ್ ಶಿಗ್ಲಿ ಪರಶುರಾಮ್ ಕುರುವತ್ತಿ ರಿಯಾಜ್ ದೊಡ್ಡಮನಿ ಪರಶುರಾಮ್ ಕೋಲಕಾರ ಆನಂದ ಲಮಾಣಿ ಶ್ರೀಧರ್ ಛಲವಾದಿ ಭಾಷಾ ಹಂಪಾಪಟ್ಟಣ ಅಣ್ಣಪ್ಪ ಜೆ ಸಿ ಮಂಜುನಾಥ್ ಚಲವಾದಿ ಹಾಲೇಶ್ ಚಲವಾದಿ ಶಂಕರ್ ಹಳ್ಳಪ್ಪನವರ ಅಶೋಕಪ್ಪ ಮುರಡಪ್ಪನವರ ಮತ್ತಿತರರು ಉಪಸ್ಥಿತರಿದ್ದರು