‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!!
ರಾಣೇಬೆನ್ನೂರಿನ ಗ್ರಾಮನಾಮದ ಪ್ರಾಚೀನ ಇತಿಹಾಸದಲ್ಲಿ ‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!! ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಈಗಿನ ರಾಣೇಬೆನ್ನೂರು ಎಂಬ ಹೆಸರಿನ ಹಿಂದೆ ದೀರ್ಘ ಇತಿಹಾಸವಿದೆ. 12ನೆಯ ಶತಮಾನದಲ್ಲಿ ಈ ಪ್ರದೇಶವನ್ನು ‘ಬಿಂನವೂರು’ ಎಂದು ಕರೆಯಲಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಇದು” ಬೆನ್ನೂರು” (ಹದಿನೈದನೆಯ ಶತಮಾನದಲ್ಲಿ)ಎಂಬ ರೂಪದಲ್ಲಿ ಉಲ್ಲೇಖಿತವಾಯಿತು. ಕ್ರಮೇಣ, ಇದು ರಾಣೆದಬೆನ್ನೂರು ಅಥವಾ ರಾಣೇಬೆನ್ನೂರು ಎಂಬ ರೂಪವನ್ನು ಪಡೆದುಕೊಂಡಿತು. ಈ ಹೆಸರು ಪರಿವರ್ತನೆಯ ಹಿಂದಿರುವ ಪ್ರಮುಖ ಕಾರಣವಾಗಿರುವುದು ಒಬ್ಬ ಪ್ರಮುಖ…