ಹಾವೇರಿಗೆ ಶರಣ ಕೊಡುಗೆ ಬಹಳ ಇದೆ : ಸಂಜೀವಕುಮಾರ
ವೀರಮಾರ್ಗ ನ್ಯೂಸ್ ಹಾವೇರಿ : ಮಹಾನ್ ನಾಯಕರ, ಶರಣರ ತತ್ವ ಸಿದ್ದಾಂತಗಳ ಉಳಿಸಲು ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ಬೆಳೆಸಲು ಪ್ರಮುಖ ರಸ್ತೆಗಳಿಗೆ ಅವರ ನಾಮಕರಣ-ನಾಮಫಲಕ ಮಾಡುವ ಪ್ರಯತ್ನವಾಗಲಿ ಎಂದು ಹೊಸಮಠದ ಶ್ರೀ ಬಸವಶಾಂತಲಿಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಮುರುಘ ರಾಜೇಂದ್ರ ನಗರದ ನಾಮಫಲಕ ಅನಾವರಣ ಹಾಗೂ ಮಹಾದ್ವಾರ ಬಾಗಿಲು ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಯುಗಾದಿ ಹಬ್ಬದ ಶುಭ ಕೋರಿ ಅವರು ಆರ್ಶಿವಚನ ನೀಡಿದರು.
ಹಾವೇರಿಯಲ್ಲಿ ಶ್ರೀ ಮುರುಘರಾಜೇಂದ್ರ ಮಠದ ದಿವ್ಯಶಕ್ತಿ ಎಲ್ಲರ ಮನದಲ್ಲಿಯೂ ಇದೆ. ಜನರ ಸಮಸ್ಯೆ ಸವಾಲುಗಳನ್ನು ನಿವಾರಣೆಗೆ ಶ್ರೀ ಮುರುಘರಾಜೇಂದ್ರ ಶ್ರೀಗಳ ಆರ್ಶಿವಾದ ಸದಾ ಇರಲಿದೆ. ಈ ನಗರಕ್ಕೆ ಯುಗಾದಿಯ ಶುಭ ದಿನ ನಾಮಕರಣಗಳ ಅನಾವರಣ ಹಾಗೂ ಮಹಾದ್ವಾರ ಬಾಗಿಲಿನ ಅಡಿಗಲ್ಲು ಸಮಾರಂಭ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ.ಗಜಾನನ ಯುವಕ ಮಂಡಳಿ, ಪರಶುರಾಮ ಹರ್ಲಾಪುರ ಅಭಿಮಾನಿಗಳ ಬಳಗ ಹಾಗೂ ಶ್ರೀ ಮುರುಘ ರಾಜೇಂದ್ರ ನಗರದ ನಾಗರಿಕ ಬಳಗದವರ ಕಾರ್ಯ ಶ್ಲಾಘನೀಯವಾಗಿದೆ. ಈ ಕಾರ್ಯ ಬೇಗ ಪೂರ್ಣವಾಗಲು ಎಲ್ಲಾ ರೀತಿ ಸಹಕಾರ ನೀಡಲಾಗುವುದು ಎಂದು ಯುಗಾದಿ ಹಬ್ಬದ ಶುಭಾಶಯಗಳನ್ನು ಶ್ರೀಗಳು ಕೋರಿದರು.

ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ ಮಾತನಾಡಿ ಹಾವೇರಿಗೆ ಶರಣ ಕೊಡುಗೆ ಬಹಳ ಇದೆ. ಶ್ರೀ ಮುರುಘ ರಾಜೇಂದ್ರ ನಗರದ ರಸ್ತೆಗಳಿಗೆ ನಾಮಕರಣ ಮಹಾದ್ವಾರ ಬಾಗಿಲಿನ ಅಡಿಗಲ್ಲು ಸಮಾರಂಭ ಮಾಡುತ್ತಿದ್ದು, ಈ ಕಾರ್ಯ ಬೇಗನೆ ಪೂರ್ಣವಾಗಲು ಸಹಕಾರ ನೀಡಲಾಗುವುದು ಎಂದರು. ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಮು ಮಾಳಗಿ ಮಾತನಾಡಿ ನಗರದ ವಿವಿಧ ನಗರಗಳನ್ನು ಗುರುತಿಸಲು ನಾಮಫಲಕಗಳು ಸಹಕಾರಿ.ಎಲ್ಲಾ ವಾರ್ಡ್‌ಗಳಲ್ಲಿ ಮಾಡಲಾಗುವುದು.ಇದೊಂದು ಉತ್ತಮ ಕಾರ್ಯ ಎಂದರು.

ಶ್ರೀಗಳನ್ನು,ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌ಎಫ್‌ಎನ್ ಗಾಜೀಗೌಡ್ರ, ನಗರಸಭೆ ಸದಸ್ಯರಾದ ಶ್ರೀಮತಿ ಕವಿತಾ ಯಲವಿಗಿಮಠ, ಮಾಜಿ ಸದಸ್ಯರಾದ ಷಣ್ಮುಖಪ್ಪ ಚೂರಿ, ಯುವ ಮುಖಂಡರಾದ ಪರಶುರಾಮ ಹರ್ಲಾಪುರ, ರಾಮು ಮಾಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾದ ಜಮೀರಅಹ್ಮದ್ ಜಿಗರಿ, ಅಡಿವೆಪ್ಪ ಯಲವಿಗಿಮಠ, ಮುರಗೇಶ ಮಠದ, ಕರಬಸಪ್ಪ ಬಳ್ಳಳ್ಳಿ,ಮಲ್ಲನಗೌಡ್ರ, ಈರಣ್ಣ ಬಳ್ಳಳ್ಳಿ, ಶಶಿಧರ ಹರ್ಲಾಪುರ, ಪರಸಪ್ಪ ನೆಲೋಗಲ್ಲ, ರುದ್ರಪ್ಪ ಹಾವೇರಿ, ಈರಣ್ಣ ಪಾವಲಿ, ನಾಗಪ್ಪ ಗೌಳಿ, ಮುತ್ತಣ್ಣ ಮಠದ, ಯಂಕಣ ಕುಲಕರ್ಣಿ, ಶಿವಯೋಗಿ ನೆಲ್ಲೂಗಲ್, ಪ್ರವೀಣಕುಮಾರ ಪಾಟೀಲ, ಕೆಇಬಿ ಈರಣ್ಣ, ಹಜರತಲಿ ತಹಶಿಲ್ದಾರ, ದಾದಾಪೀರ್ ಮುಲ್ಕಿ,ಶಬ್ಬಿರ ಮುಲ್ಕಿ,ಮೈತಾಬ ಕಳ್ಳಿಹಾಳ, ತರುಣ ಚೂರಿ, ಈರಮ್ಮ ಅರಳಿ, ರಾಜು ಚೂರಿ,ನಾಗಪ್ಪ ಮ್ಯಾದರ, ಜೀತೇಂದ್ರ ಮ್ಯಾದರ, ಶ್ರೀಮತಿ ಸಾವಿತ್ರವ್ವ ನೆಲೋಗಲ್ಲ, ಮಧು, ಗಣೇಶ, ಅನುಪಮ ಸೇರಿದಂತೆ ನಗರದ ಗಣ್ಯರು, ನಾಗರಿಕರು, ಮಹಿಳೆಯರು ಪಾಲ್ಗೊಂಡಿದ್ದರು.