ವಿಶ್ವ ಮೆದುಳು ದಿನ,,,ಸದಾ ಚಟುವಟಿಕೆಯಿಂದಿದ್ದು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ : ಡಾ. ಚನ್ನಬಸಯ್ಯ ವಿರಕ್ತಮಠ
ವೀರಮಾರ್ಗ ನ್ಯೂಸ್ : ಹಾವೇರಿ : ಸದಾ ಚಟುವಟಿಕೆಯಿಂದ ಇರುವುದರಿಂದ ನಮ್ಮ ಮೆದುಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ. ಚನ್ನಬಸಯ್ಯ ವಿರಕ್ತಮಠ ಹೇಳಿದರು. ತಾಲೂಕಿನ ದೇವಗಿರಿ ಗ್ರಾಮದಲ್ಲಿರುವ ಬಾಪೂಜಿ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮೆದುಳು ದಿನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೆದುಳಿನ ಸಮಸ್ಯೆ ಎದುರಿಸುತ್ತಿರುವವರಿಗೆ ಹಾಗೂ ಪಾರ್ಶ್ವವಾಯು ರೋಗಿಗಳಿಗೆ ಸೂಕ್ತ ಕೌನ್ಸೆಲಿಂಗ್ ಹಾಗೂ ಅಗತ್ಯ ಫಿಜಿಯೋಥೆರಪಿ ನೀಡುತ್ತಿರುವ ಕಭಿ ತಂಡ ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿದೆ, ಅಗತ್ಯವಿರುವ ಜನರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು.
ಫಿಜಿಷಿಯನ್ ಅಕ್ಕಮಹಾದೇವಿ ನಿಪನಾಳ ಮಾತನಾಡಿ, ಮೆದುಳು ನಮ್ಮ ದೇಹದ ಪ್ರಮುಖವಾದ ಅಂಗ. ನಮ್ಮ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಕಾರ್ಯವನ್ನು ಮೆದುಳು ಮಾಡುತ್ತದೆ. ಹಾಗಾಗಿ ನಮ್ಮ ಮೆದುಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಅತಿ ಅವಶ್ಯಕ. ಪ್ರತಿದಿನ ಧ್ಯಾನ ಮಾಡುವುದು, ಮೆದುಳಿಗೆ ಸಂಬಂಧಿಸಿದ ಚಟುವಟಿಕೆಗಳು, ಪೌಷ್ಠಿಕ ಆಹಾರ ಹಾಗೂ ದೇಹಕ್ಕೆ ಅವಶ್ಯವಿರುವ ನೀರನ್ನು ತೆಗೆದುಕೊಳ್ಳುವುದರಿಂದ ಚೈತನ್ಯಯುತವಾಗಿ ಇರಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಧ್ಯಾಯರಾದ ಪ್ರಕಾಶ ಬಡಮಲ್ಲಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಉಮೇಶ ಮುಡಿ, ಮೆದುಳು ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಕವಿತಾ ಕೋರಿ, ವೈಭವ್ ದುಂಡನಕೊಪ್ಪ, ಜಗನ್ನಾಥ್ ಪಟೇಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ದೀಪಿಕಾ. ಬಿ ನಿರೂಪಿಸಿ ವಂದಿಸಿದರು.
ಭಾರತ ವಿದ್ಯಾರ್ಥಿ ಪಡ್ರೇಷನ್ (SFI) ಹಾಗೂ ಭಾರತ ಪ್ರಜಾಸಸ್ತಾತ್ಮಕ ಯುವಜನ ಫೆಡರೇಷನ್(DYFI) ವತಿಯಿಂದ
ನೀಟ್ ಹಗರಣದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸಿದ ವಿದ್ಯಾರ್ಥಿ ಯುವಜನರ ಮೇಲಿನ ಅಮಾನುಷ ದಾಳಿಯನ್ನು ಖಂಡಿಸಿ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಹಗರಣವನ್ನು ನ್ಯಾಯಾಂಗಕ್ಕೆ ತನಿಖೆಗೆ ಒಪ್ಪಿಸಬೇಕೆಂದು ಇಂದು ಹಾವೇರಿಯಲ್ಲಿ ಪ್ರತಿಭಟನೆ ಮಾಡಲಾಯಿತು.
22 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ಯುವಜನರ ಕಠಿಣ ವಿಷಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವವರೊಂದಿಗೆ ಮಾತುಕತೆ ನಡೆಸುವ ಸೌಜನ್ಯ ತೋರದೆ ಅಸಡ್ಡೆ ಮಾಡಿದೆ. 21 ಜನವಿದ್ಯಾರ್ಥಿಗಳ ಪ್ರಾಣಾಹುತಿ ನಡೆದಿದೆ.ವಿಷಯಕ್ಕಾಗಿ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಜಿವ ಸಂಪುಟದಿಂದ ವಜಾಗೊಳಿಸಬೇಕೆಂದು, ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ನೀಟ್ ಹಗರದಲ್ಲಿ ಕೈವಾಡ ಇದೆ ಎಂದು ಗೋಸಿದರು, ಶಾಂತಿಯುತವಾಗಿ ಉಪವಾಸ ಧರಣೆ ನಡೆಸುತ್ತಿದ್ದ ಸೋನಾ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ಮತ್ತು ದೇಶಕ್ಕೆ ಕ್ಷಮೆಯಾಚಿಸಿ ಕೂಡಲೇ ಅವರ ಕುಟುಂಬಕ್ಕೆ ವಹಿಸಬೇಕು. ಮತ್ತು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆಕನಿಷ್ಠ ಐದು ಕೋಟಿ ಪರಿಹಾರ ನೀಡಬೇಕೆಂದು ಹೇಳಲಾಯಿತು.ಸುದ್ದಿ ಘೋಷ್ಟಿಯಲ್ಲಿ,(DYFI) ಜಿಲ್ಲಾ ಅದ್ಯಕ್ಷರು ಬಸವರಾಜ ಪೂಜಾರ,(SFI) ಜಿಲ್ಲಾ ಅಧ್ಯಕ್ಷರು ಬಸವರಾಜ ಎಸ್, ಮತ್ತು ಇಡಾರಿನ ಸಂಸ್ಥೆ ಮುಖ್ಯಸ್ಥರು ಪರಿಮಳ ಜೈನ್,(SFI ) ನ ಜಿಲ್ಲಾ ಮುಖಂಡರು ಅರಣು ನಾಗವಾಲ್ ಮತ್ತು ಜೈತ್ರಾ ಕೊರವರ ಮತ್ತು(DYFI) ನ ಜಿಲ್ಲಾ ಮುಖಂಡರು ಖಲಂದರ ಅಲ್ಲಿಗೌಡ್ರ ಲಿಂಗರಾಜ ಪೂಜಾರ . ಮತ್ತು ಸಾಮಾಜಕ ಸೇವಕರ ಅಬ್ದುಲ್ ಖಾದರ ಧಾರವಾಡ, ಸಂಜಯ್ಯ ಗಾಂಧಿ ಸಂಜೀವನವರ ರಹಮತ್ತಲ್ಲಾ , ಇನ್ನೂ ಮುಂತಾದ ಸಾಮಾಜ ಸೇವಕರು ಪ್ರತಿಭಟನೆಯಲ್ಲಿ ಸೇರಿದರು.
ವರದಿ : ಹನುಮಂತಪ್ಪ ಭಜಂತ್ರಿ.