ಗೊಂದಲಗೂಡಾದ ಅಧಿಕಾರಿಗಳ ಹಾಗೂ ರೈತ ಸಂಘಟನೆಗಳ ಜಂಟಿ ಸಭೆ.
ಹಾವೇರಿ ಜಿಲ್ಲಾ : ಹಾನಗಲ್ : ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಯಿಂದ ರಾಜ್ಯದ ರೈತರಿಗೆ ಬೆಳೆ ವಿಮೆ ತುಂಬಲು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದರು ಈ ಹಿಂದೆ ರೈತರು ಸ್ವತಂತ್ರವಾಗಿ ತಮಗೆ ಅನುಕೂಲವಾದಲ್ಲಿ ಬೆಳೆಯಮೆಯನ್ನು ಗ್ರಾಮ ಓನ್ ಸಿಎಸ್‌ಸಿ ಸೆಂಟರ್ ಗಳಲ್ಲಿ ತುಂಬುತ್ತಿದ್ದರು 2026 27 ನೇ ಸಾಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಮಾ ತುಂಬಲು ಸಾಲಗಾರರಿಗೆ ಅವಕಾಶ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಲ್ಲಿಕಾರ್ಜುನ್ ಬಳ್ಳಾರಿ ತಿಳಿಸಿದರು ಈ ವಿಷಯ ಕುರಿತು ಹಾನಗಲ್ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕೃಷಿ ಅಧಿಕಾರಿಗಳು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲೀಡ್ ಬ್ಯಾಂಕ್ ಮ್ಯಾನೇಜರ್ ತಾಲೂಕಿನ ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳೆವಿಮೆ ತುಂಬುವ ವಿಚಾರದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಗಳಾಗಲಿ , ಕೃಷಿ ಇಲಾಖೆ ಅಧಿಕಾರಿಗಳಾಗಲಿ , ತೋಟಗಾರಿಕೆ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಸ್ಪಷ್ಟೀಕರಣ ನೀಡುವಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು 30/7/ 2026 ಬೆಳೆವಿಮೆ ತುಂಬಲು ಕೊನೆಯ ದಿನವಾಗಿದ್ದು ಸಮಯದ ಕೊರತೆಇದೆ ಎಂದು ಕೇಂದ್ರ ರಾಜ್ಯ ಸರ್ಕಾರದ ನಿಲುವುಗಳ ಬಗ್ಗೆ ರೈತರು ಅಸಮಧಾನ ವ್ಯಕ್ತಪಡಿಸಿದರು ವಿಮಾ ಕಂಪನಿಯವರು ಸ್ಪಷ್ಟವಾಗಿ ಉತ್ತರ ನೀಡಲು ಅಸಹಾಯಕತೆ ವ್ಯಕ್ತಪಡಿಸಿರುತ್ತಾರೆ ತಾಲೂಕಿನ ಎಲ್ಲ ಬ್ಯಾಂಕ್ ವ್ಯವಸ್ಥಾಪಕರುಗಳು ಸಹ ಅವರು ಸ್ಪಷ್ಟ ನಿಲುವು ತಿಳಿಸುವುದಿಲ್ಲ ಹಾಜರಿದ್ದ ರೈತ ಮುಖಂಡರು ಬೆಳೆ ವಿಮೆ ತುಂಬಲು ಹಿಂದಿನ ರೀತಿಯಲ್ಲಿ ಮುಂದುವರಿಸಲು ಹಕ್ಕೊ ಒತ್ತಾಯ ಮಾಡಿರುತ್ತಾರೆ ಕಟಬಾಗಿದಾರರು ಬೆಳೆವಿಮೆ ತುಂಬಲು ಅವಕಾಶ ಕಲ್ಪಿಸಲು ಕಾನೂನು ತೊಡಕನ್ನು ಬಗೆಹರಿಸಲು ಅವರ ಗಮನ ಸೆಳೆಯಲಾಯಿತು ಸಹಕಾರ ಸಂಘಗಳಲ್ಲಿ ಕಡಿಮೆ ಸಾಲ ನೀಡಿರುತ್ತಾರೆ . ಒಟ್ಟು ಆಸ್ತಿಯ ಮೇಲೆ ಸಾಲದ ಭೋಜಾ ಕೂಡಿಸಿರುತ್ತಾರೆ ಒಂದು ಎಕ್ರೆಗೆ ಸಾಲ ಕೊಟ್ಟು ಐದು ಎಕರೆ ಜಮೀನಿನ ಮೇಲೆ ಬೋಜಾ ಕೂಡಿಸಿರುತ್ತಾರೆ ಇಂಥ ವ್ಯವಸ್ಥೆಗೆ ಏನು ಕ್ರಮ ಕೈಗೊಳ್ಳುತ್ತಿರಿ ಎಂಬ ರೈತರ ಪ್ರಶ್ನೆಗೆ ಕ್ಷೇತ್ರದ ಅನುಗುಣವಾಗಿ ಸಾಲದ ಮತ್ತುಸಾಲ ಹೊರತುಪಡಿಸಿ ಉಳಿದ ಕ್ಷೇತ್ರದ ವಿಮೆ ತುಂಬಲು ಅವಕಾಶ ಕಲ್ಪಿಸಿಕೊಡಲು ಬ್ಯಾಂಕ್ ಅಧಿಕಾರಿಗಳಿಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದರು ಮುಂದಿನ ತಾಂತ್ರಿಕ ತೊಂದರೆಗಳ ಬಗ್ಗೆ ರೈತರು ವಿಮ ತುಂಬು ಹಂತದಲ್ಲಿ ಕಂಡುಬರುತ್ತದೆ ಎಂದರು ಹಾಜರಿದ್ದ ಅಧಿಕಾರಿಗಳಲ್ಲಿ ಕಾನೂನಿನ ಅಡೆತಡೆಗಳನ್ನು ಸರಿಪಡಿಸಲು ಅವಕಾಶವಿಲ್ಲದೆ ಸೋಮವಾರ ತನಕ ಕಾಯಲು ಅಧಿಕಾರಿಗಳು ಹಾಗೂ ರೈತ ಮುಖಂಡರು ನಿರ್ಧರಿಸಿದರು ಈ ಸಭೆಯಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ ಭುವನೇಶ್ವರ ಶಿಡ್ಲಾಪುರ ಎಂ ಎಸ್ ಪಾಟೀಲ್ ಮಾರುದ್ರಪ್ಪ ಬಿದರಮಳ್ಳಿ ಮರಿಗೌಡ್ರ್ ಪಾಟೀಲ್ ಅವರಿಗೆ ಚನ್ನಬಸಪ್ಪ ಹಾವಣಗಿ ಅಡಿಯಪ್ಪ ಆಲದಕಟ್ಟಿ ಶಿವಯೋಗಿ ಹೊಸಗೌಡ್ರು ಮಾರುದ್ರಪ್ಪ ಕುಸುನೂರ್ ವೀರನಗೌಡ ಮಾಳಗಿ ಉಮೇಶ್ ಮುಡಿ ಸೋಮಣ್ಣ ದೊಡ್ಡಮನಿ ರುದ್ರಪ್ಪ ಹಣ್ಣಿ ಇನ್ನು ಅನೇಕ ರೈತರು ರೈತ ಮುಖಂಡರು ಇದ್ದರು.
ಅಧಿಕಾರಿಗಳಾದ ತಹಸಿಲ್ದಾರ್ ವಿಠ್ಠಲ್ ಚೌಗುಲಾ, ಲೀಡ್ ಬ್ಯಾಂಕ್ ಸ್ಥಾಪಕರಾದ ಪ್ರಭುದೇವ್, ತಾಲೂಕ್ ಪಂಚಾಯತಿ ಇಓ ಜಗದೀಶ್ ಕಮ್ಮಾರ್ ಕೃಷಿ ಅಧಿಕಾರಿಗಳಾದ ಸಿ ಟಿ ಸುರೇಶ್ ಸಂಗಮೇಶ್ ಹಕ್ಕಲಪ್ಪನವರ್ ತೋಟಗಾರಿಕೆ ಅಧಿಕಾರಿಗಳಾದ ವೀರಭದ್ರ ಸ್ವಾಮಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಬೆಳೆವಿಮೆ ಕಂಪನಿ ಪ್ರತಿನಿಧಿಗಳಾದ ವೀರೇಶ್ ಬಡಿಗೇರ್ ಬಸವರಾಜ್ ಹಿರೇಮಠ್ ಸಭೆಯಲ್ಲಿ ಇದ್ದರು.
ನಿನ್ನೆ ನಡೆದ ಹಾನಗಲ್ ತಾಲೂಕ ತಹಶೀಲ್ದಾರ್ ಸಭಾಂಗಣದಲ್ಲಿ ಬೆಳೆ ವಿಮೆ ತುಂಬುವ ಸಲುವಾಗಿ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ಮಾಧ್ಯಮದವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾರದ ತಾಲೂಕ ಆಡಳಿತಕ್ಕೆ ಏನೆಂದು ಕರೆಯಬೇಕು? ಮುಂದಿನ ದಿನಮಾನಗಳಲ್ಲಿ ತಾಲೂಕಿನ ಪತ್ರಕರ್ತರಿಗೆ ಮಾಧ್ಯಮದವರಿಗೆ ಮೊದಲು ಕುಳಿತುಕೊಳ್ಳಲು ವ್ಯವಸ್ಥೆಯನ್ನು ಮಾಡಿ ಅಧಿಕಾರಿಗಳು ಸಭೆಯನ್ನು ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಹಶೀಲ್ದಾರ್ ಅವರಿಗೆ ವಿನಂತಿಯನ್ನು ಮಾಡಿಕೊಂಡಿರುತ್ತಾರೆ.