ತಮ್ಮನ ಹೆಂಡತಿಯೇ ಚಟ್ಟ ಕಟ್ಟಿದಳು…

ಕಣ್ಣಿಗೆ ಕಾಮದ ಪೊರೆ ಮುಚ್ಚಿದರೆ ಮನುಷ್ಯ ಎಂತೆಂಥಾ ದ್ರೋಹಕ್ಕೆ ಮುಂದಾಗುತ್ತಾನೆ ಎಂಬುದಕ್ಕೆ ಚಿತ್ರದುರ್ಗದಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ!

ರಕ್ತಸಂಬಂಧ, ನಂಬಿಕೆ, ವಿಶ್ವಾಸ ಎಲ್ಲವನ್ನೂ ಗಾಳಿಗೆ ತೂರಿ ಪರಪುರುಷನ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ತನ್ನ ಕಳ್ಳಾಟಕ್ಕೆ ಅಡ್ಡಿಯಾದ ಸ್ವಂತ ಬಾವನನ್ನೇ ಮುಗಿಸಿ ಇಂದು ಜೈಲು ಕಂಬಿ ಎಣಿಸುತ್ತಿದ್ದಾಳೆ.

ವೀರಮಾರ್ಗ ನ್ಯೂಸ್ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ನಡೆದ ಈ ಘಟನೆ ಈಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ,,,

ಬುದ್ಧಿ ಮಾತು ಹೇಳಿದ್ದೇ ಶಿವಮೂರ್ತಿ ಪಾಲಿಗೆ ಯಮನಾಗಿ ಬಂತೆ!

ಆರೋಪಿ ಸುಮತಿಗೆ ಮದುವೆಯಾಗಿ ಸುಂದರವಾದ ಸಂಸಾರವಿತ್ತು. ಆದರೆ ಈಕೆ ಚಿತ್ರದುರ್ಗದ ನೂರ್ ಅಹ್ಮದ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದ ಸುಮತಿಯ ಬಾವ (ಗಂಡನ ಅಣ್ಣ) ಶಿವಮೂರ್ತಿಗೆ ಈ ವಿಷಯ ತಿಳಿದುಬಂದಿತ್ತು.

ತಮ್ಮನ ಸಂಸಾರ ಹಾಳಾಗಬಾರದು ಎಂಬ ಒಂದೇ ಒಂದು ಒಳ್ಳೆಯ ಉದ್ದೇಶದಿಂದ ಶಿವಮೂರ್ತಿ ನಾದಿನಿಗೆ ಬೈದು ಬುದ್ಧಿ ಹೇಳಿದ್ದಲ್ಲದೆ, ಆಕೆಯ ಪ್ರಿಯಕರ ನೂರ್ ಅಹ್ಮದ್‌ಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದ.”

ಆದರೆ, ಇದೇ ಒಳ್ಳೆಯತನ ಶಿವಮೂರ್ತಿ ಪಾಲಿಗೆ ಮೃತ್ಯುವಾಗಿ ಕಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ!

ಬಾಡಿಗೆ ಕಾರಿನ ನೆಪದಲ್ಲಿ ಸ್ಕೆಚ್ ಹಾಕಿದ ಕಳ್ಳಜೋಡಿ!
ಯಾವಾಗ ಬಾವ ಶಿವಮೂರ್ತಿ ತಮ್ಮ ಅಕ್ರಮ ಪ್ರೀತಿಯ ಮಧ್ಯೆ ಕಂಟಕನಾಗಿ ನಿಂತನೋ, ಆತನನ್ನು ಜಗತ್ತಿನಿಂದಲೇ ಮುಗಿಸಲು ಈ ಪಾಪಿ ಜೋಡಿ ಭೀಕರ ಸಂಚು ರೂಪಿಸಿತು.

ಸಂಚು ಹೂಡಿದ್ದು ಹೀಗೆ: ಶಿವಮೂರ್ತಿ ಅವರು ಬಿಡುವಿನ ವೇಳೆಯಲ್ಲಿ ತಮಗಿದ್ದ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದರು.
ಅಪಹರಣ: ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಬಾಡಿಗೆ ಕಾರು ಬೇಕೆಂದು ಸುಳ್ಳು ಹೇಳಿ ಶಿವಮೂರ್ತಿಯನ್ನು ಕರೆಸಿಕೊಂಡಿದ್ದಾರೆ.

ಕ್ರೂರ ಕೊಲೆ,,, ತದನಂತರ ಹಾದಿಮಧ್ಯೆ ಅವರನ್ನು ಅಪಹರಿಸಿ ಕ್ರೂರವಾಗಿ ಹತ್ಯೆಗೈದಿದ್ದಾರೆ!
ಸಾಕ್ಷ್ಯ ನಾಶ: ಕೊಲೆಯ ನಂತರ ಯಾವುದೇ ಸಾಕ್ಷ್ಯ ಸಿಗಬಾರದೆಂದು ಶವವನ್ನು ಇಂಗಳದಾಳ್ ಲಂಬಾಣಿಹಟ್ಟಿ ಬಳಿ ಎಸೆದು ಪರಾರಿಯಾಗಿದ್ದರು.

ಪೊಲೀಸರ ಎಂಟ್ರಿ,,
ಸುಪನಾತಿಯ ಅಸಲಿ ಮುಖವಾಡ ಬಯಲು,,,!

ಶಿವಮೂರ್ತಿ ದಿಢೀರನೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಮೊದಲು ಸಿಕ್ಕಿಬಿದ್ದಿದ್ದೇ ಪ್ರಿಯಕರ ನೂರ್ ಅಹ್ಮದ್. ಖಾಕಿ ಪಡೆ ತನ್ನದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ, ಕೊಲೆಯ ಹಿಂದಿದ್ದ ಮಾಸ್ಟರ್ ಮೈಂಡ್ ಸುಮತಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ!

ಸದ್ಯಕ್ಕೆ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಬಂಗಾರದಂತಹ ಸಂಸಾರವನ್ನು ತಾನೇ ಕೈಯಾರೆ ಹಾಳುಮಾಡಿಕೊಂಡು, ಪರಪುರುಷನ ತಬ್ಬುಗೆಗೆ ಬಿದ್ದ ಈ ಸುಪನಾತಿ ಸುಮತಿ, ಇವತ್ತು ಅಮಾಯಕ ಬಾವನ ಸಾವಿಗೆ ಕಾರಣವಾಗಿ ಕಟಕಟೆಯಲ್ಲಿ ನಿಂತಿದ್ದಾಳೆ.