ವಿತರಿಸಲಾಗುತ್ತದೆ. ಚೀಲದಲ್ಲಿ ನೀರಿನ ಬಾಟಲಿ ಇಟ್ಟುಕೊಂಡು ಹೆಗಲಿಗೆ ಹಾಕಿಕೊಂಡು1
ವೀರಮಾರ್ಗ ನ್ಯೂಸ್ : ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಆದೇಶದಂತೆ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಲು ಬಟ್ಟೆಯ ಚೀಲಗಳನ್ನು ಹೊಲಿದು ಉಚಿತವಾಗಿ ವಿತರಿಸಲಾಗುತ್ತದೆ. ಚೀಲದಲ್ಲಿ ನೀರಿನ ಬಾಟಲಿ ಇಟ್ಟುಕೊಂಡು ಹೆಗಲಿಗೆ ಹಾಕಿಕೊಂಡು ನಡೆದರೆ ಕೈಗಳಿಗೆ ತ್ರಾಸು ಆಗುವುದಿಲ್ಲ. ಕೈಗಳು ನೋಯುವುದಿಲ್ಲ. ಆಯಾಸವಾಗುವುದಿಲ್ಲ. ಇದರಿಂದ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಬಹುದಾಗಿದೆ.
ಚಡಚಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಪಾದಯಾತ್ರಿ ಭಕ್ತರು ನೀರಿನ ಬಾಟಲಿ ಇಡುವ ಬಟ್ಟೆಯ ಚೀಲಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ದೂರದ ಊರುಗಳ ಭಕ್ತರು ಮೊದಲು ತಿಳಿಸಿ, ನಂತರ ತಾವೇ ಬಂದು ಉಚಿತವಾಗಿ ಪಡೆದುಕೊಳ್ಳಬಹುದು.
ನೀರಿನ ಬಾಟಲಿ ಇಡುವ ಬಟ್ಟೆಯ ಚೀಲಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತ ವಿತರಣೆಯಾಗಿರುತ್ತದೆ. ನಿಮ್ಮ ಹಾರೈಕೆ ಮತ್ತು ಆಶೀರ್ವಾದಗಳನ್ನು ಮಾತ್ರ ನಿರೀಕ್ಷಿಸಲಾಗುತ್ತದೆ. ತಾವು ಮುಕ್ತಮನಸ್ಸಿನಿಂದ ಹರಸಿ ಆಶೀರ್ವದಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸಲಾಗುತ್ತದೆ.
ಇಂತಿ
ನಿಮ್ಮ ಮನೆಮಗ ಚಿದಾನಂದ
ಚಿದಾನಂದ್ ಗಿರಿಮಲ್ಲಪ್ಪ ಸಾಂಗೋಲಿ