ಹಾಲುಮತಕ್ಕೆ ಕುರಿಕಾಯುವುದು ವೃತ್ತಿ ಜೊತೆಗೆ ಸಮಾಜ ತಿದ್ದುವ ಕತ್ತಿ.

ವೀರಮಾರ್ಗ ನ್ಯೂಸ್ : ಅನೇಕ ಪತ್ರಕರ್ತರನ್ನು ನಿದ್ರೆ ಕೆಡಿಸಿದಂತ ಮರೆಯಲಾರದಂಥ ಘಟನೆ,2014 ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ನನಗೆ ನೀಡಿರುವ ಮಾಧ್ಯಮ ಅಕಾಡೆಮಿ ರಾಜ್ಯ ಪ್ರಶಸ್ತಿ ಕುರಿತಂತೆ ಚಿಂತನ ಮಂಥನ ತಮ್ಮೊಂದಿಗೆ :- ಕುರಿ ಕಾಯುವ ಕುರುಬ ಸರಿಯಾಗಿ ತಿಕಾ ತೊಳೆದುಕೊಳ್ಳುವುದಕ್ಕೂ ಬಾರದಂಥನು ಎಂದು ಮೂದಲಿಸುತ್ತಿದ್ದ ಕೆಲ ಪತ್ರಿಕಾ ಮಾಧ್ಯಮದವರು ನೋಡ ನೋಡುತ್ತಲೇ ಮಾಧ್ಯಮ ರಂಗದಲ್ಲಿ ಬೆಳೆಯುತ್ತಿರುವ ಪರಿಯನ್ನು ಕಂಡು ದಂಗಾಗಿದಲ್ಲದೇ ಪ್ರತಿ ವರ್ಷ ನಮ್ಮ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ 101 ಜೋಡಿಗಳ ಬಡ ಜನತೆಗೆ ಸಾಮೂಹಿಕ ವಿವಾಹಗಳು ಜೊತೆಗೆ ತೆರೆಮರೆ ಸಾಧಕರ ಸನ್ಮಾನದ ಜೊತೆಗೆ ಅತಿ ಹೆಚ್ಚು ಅಂಕಗಳನ್ನು ಪಡೆದ SSLC ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಗದು ಸಮೇತ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮಗಳು ಇಡೀ ಬಳ್ಳಾರಿ‌ ಜಿಲ್ಲೆಯ ಜನತೆಯ ಮನಸೂರೆಗೊಂಡವು. ಅನ್ಯಾಯ ಅಕ್ರಮಗಳ ವಿರುದ್ಧ ಜನತೆಯ ಧ್ವನಿಯಾಗಿ ಮಾಧ್ಯಮ ಸೇವೆಯ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಾದ ಸಾಮೂಹಿಕ ವಿವಾಹಗಳು ಪ್ರತಿಭಾ ಪುರಸ್ಕಾರದಂಥ ಕಾರ್ಯಕ್ರಮಗಳ ಸೇವೆಯನ್ನು ಪರಿಗಣಿಸಿ‌ ಕರ್ನಾಟಕ ಮಾಧ್ಯಮ ಅಕಾಡೆಮಿಯು 2014 ರಲ್ಲಿ ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ನನಗೆ ಮಾಧ್ಯಮದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಫಲಕದ ಜೊತೆಗೆ 25 ಸಾವಿರ ರೂಗಳ ಚೆಕ್ ಅನ್ನು ನೀಡಿ ಉತ್ತರ ಕರ್ನಾಟಕ ಗ್ರಾಮಾಂತರ ಭಾಗದ ಪ್ರತಿಭೆಗೆ ಮನ್ನಣೆ ನೀಡುವಂತ ಸಂದರ್ಭದಲ್ಲಿ

ಕೆಲ ಪಟ್ಟಭದ್ರ ಪತ್ರಕರ್ತರು ಇದನ್ನು ಸಹಿಸದೇ ಅಖಂಡ ಬಳ್ಳಾರಿ ಜಿಲ್ಲೆಯಾಧ್ಯಂತ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ನನ್ನ ಮೇಲೆ ಯಾವುದಾದರೂ ಕೇಸ್ ನಮೂದಾಗಿಯೋ ಎಂದು ಕಣ್ಣಿಗೆ ಎಣ್ಣೆ ಬಿಟ್ಡುಕೊಂಡು ಹಗಲಿರುಳು ಪ್ರಯತ್ನ ಪಟ್ಟರಾದರೂ ಯಾವ ಠಾಣೆಯಲ್ಲೂ ಅಂದು ನನ್ನ ಮೇಲೆ ಒಂದು ಸಣ್ಣ ಪಿಟ್ಟಿ ಕೇಸೂ ನಮೂದಾಗಿಲ್ಲದಿದ್ದದ್ದೂ ನನ್ನ ಅದೃಷ್ಟವೆಂದು ಭಾವಿಸುತ್ತಾ, ಒಂದು ವೇಳೆ ಒಂದು ಸಣ್ಣ ಕೇಸ್ ನಮೂದಾಗಿದ್ದರು ಕೂಡ ನನಗೆ ರಾಜ್ಯ ಪ್ರಶಸ್ತಿ ದಕ್ಕದಂತೆ ಮಾಡಲು ಕಂಕಣ ತೊಟ್ಟಂತೆ ಬದ್ದರಾಗಿದ್ದ ಒಂದು ಪೂರ್ವಗ್ರಹ ಪೀಡಿತ ಪತ್ರಕರ್ತರ ಪಡೆ. ಬಂದ ದಾರಿಗೆ ಸುಂಕವಿಲ್ಲ ಎನ್ನುವ ಗಾದೆಯಂತೆ ಪೆಚ್ಚು ಮೋರೆಯಿಂದ ಇಂದಿಗೂ ಹಲಬುತ್ತಿರುವುದನ್ನು ಕಂಡು ನಿಜಕ್ಕೂ ನನಗೆ ಖುಷಿಯ ವಿಚಾರ.ಓಣಿಗೊಂದು ಹಂದಿಯಂತೆ ನಿಂದಕರಿದ್ದಾಗ ಮಾತ್ರ ನಮ್ಮ ಬೆಳವಣಿಗೆ ಸಾಧ್ಯ ಎನ್ನುವಂತೆ ಸಂಘರ್ಷಗಳ ಮಧ್ಯ ಮನುಷ್ಯನ ಬೆಳವಣಿಗೆ ಪೂರಕ.
ಆದರೆ ಇಂದು 420 ಕೇಸ್ಗಳು ನಮೂದಾಗಿದ್ದರೂ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆಂದರೆ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಸಾಲಿನಲ್ಲಿ ರಾಜಕಾರಣಿಗಳನ್ನು ಮೀರಿಸಿ ಒಂದು ಹೆಜ್ಜೆ ಮುಂದೆ ಎನ್ನುವಂತೆ ನಮ್ಮ ಪತ್ರಕರ್ತರ ನಾಯಕರು ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಂತೂ ಖಂಡಿತ ಅಲ್ಲ ಎಂದು ಮನವರಿಕೆ‌ ಮಾಡಿ ಕೊಡುವುದರ ಜೊತೆಗೆ ಅಂದು ನನಗೆ ರಾಜ್ಯ ಪ್ರಶಸ್ತಿ ದಕ್ಕಲೇಬಾರದೆಂದು ಕ್ರಿಯಾಶೀಲರಾಗಿದ್ದ ಪತ್ರಕರ್ತರ ಪಡೆ ಇಂದು 420 ಕೇಸ್ ಆಗಿದೆ ಎಂದು ಸಾಕ್ಷಿ ಸಮೇತ ಬಿಡುಗಡೆ ಮಾಡಿದ್ದರು ಕೂಡ ಕಣ್ಣಿದ್ದು ಕುರುಡರು ಜೊತೆಗೆ ಕಿವಿಯಿದ್ದು ಕಿವುಡರ ತರ ಆದರೆ ಪ್ರಜಾಪ್ರಭುತ್ವವನ್ನು ಉಳಿಸುವವರ್ಯಾರು ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.

ಬಂಗ್ಲೆ ಮಲ್ಲಿಕಾರ್ಜುನ,ಹವ್ಯಾಸಿ ಪತ್ರಕರ್ತರು,ಬೆಂಗಳೂರು.ಮೊ:-9591630300