ರಂಗುರಂಗಿನ ಬಣ್ಣ ದಾಟದಲ್ಲಿ ಮಿಂದೆದ್ದ ಪತ್ರಕರ್ತರು
ವೀರಮಾರ್ಗ ನ್ಯೂಸ್ ಗದಗ : ದಿನ ಬೆಳಗಾದರೆ ಸಾಕು ಒಂದಿಲ್ಲೊಂದು ಸುದ್ದಿ ಹುಡುಕುತ್ತ ಪಟ್ಟಣ. ಹಾಗೂ ಗ್ರಾಮಗಳಿಗೆ ತೆರಳಿ ಸುದ್ದಿ ಹುಡುಕುವ ಪತ್ರಕರ್ತರು ಒತ್ತಡ ಜೀವನ ನಡೆಸುತ್ತಾರೆ.ಅಂತಹ ಒತ್ತಡದಲ್ಲು ತಾಲೂಕಿನ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಮಂಗಳವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಒಂದಾಗಿ ಸೇರಿ ಹೋಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಪರಸ್ಪರ ಬಣ್ಣ ಹಚ್ಚುವ ಮೂಲಕ ರಂಗಪಂಚಮಿಗೆ ಮೆರಗು ತಂದರು.ಈ ಸಂತಸದ ಸಮಯವನ್ನು ಕಳೆದು ಎಲ್ಲಾ ಒತ್ತಡಗಳನ್ನು ಮರೆತು ರಂಗುರಂಗಿನ ಬಣ್ಣ ದಾಟದಲ್ಲಿ ಮಿಂದೆದ್ದು ಸಾರ್ವಜನಿಕರ ಗಮನ ಸೆಳೆದರು…