
ಅವಕಾಶ ಕಲ್ಪಿಸಿದ ಜನರ ಸೇವೆಗಾಗಿ ನಾನು ಸದಾಸಿದ್ಧ: ಶಾಸಕ ಪಠಾಣ
ವೀರಮಾರ್ಗ ನ್ಯೂಜ್ ಶಿಗ್ಗಾವಿ : ಸಣ್ಣ, ಸಣ್ಣ ಸಮಾಜವನ್ನು ಮುಖ್ಯ ವಾಹಿನಿಗೆ ತರುವುದೇ ಕಾಂಗ್ರೆಸ್ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಯಾಸೀರಹಮ್ಮದ ಖಾನ ಪಠಾಣ ಹೇಳಿದರು.ಪಟ್ಟಣದ ದೈವಜ್ಞ ಸಮಾಜವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಣ್ಣ, ಸಣ್ಣ ಸಮಾಜದ ಜನರ ಆಶೀರ್ವಾದದಿಂದ ನನಗೆ ಈ ಬಾರಿ ಶಾಸಕನಾಗುವ ಅವಕಾಶ ಸಿಕ್ಕಿದೆ. ಅವಕಾಶ ಕಲ್ಪಿಸಿದ ಜನರ ಸೇವೆಗಾಗಿ ನಾನು ಸದಾಸಿದ್ಧನಿರುವೆ. ತಮ್ಮ ಸಮಾಜದ ಬೇಡಿಕೆಗಳಾದ ಗಣಪತಿ ದೇವಸ್ಥಾನದ ನಿರ್ಮಾಣ, ಸಭಾಭವನ, ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲು ಶ್ರಮಿಸುವುದಾಗಿ ಹೇಳಿದರು….