
ಶಿಗ್ಗಾಂವಿ ಪುರಸಭೆ 2025-26ನೇ ಸಾಲಿನ 22.50 ಲಕ್ಷಗಳ ಉಳಿತಾಯ ಬಜೆಟ್
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಪಟ್ಟಣದ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ರವರು 2025-26ನೇ ಸಾಲಿನ 22.50 ಲಕ್ಷಗಳ ಉಳಿತಾಯ ಬಜೆಟ್‌ನ್ನು ಗುರುವಾರ ಮಂಡಿಸಿದರು.2,677.25 ಲಕ್ಷಗಳ ಆದಾಯವನ್ನು ನಿರೀಕ್ಷಿಸಿ, 2654.75 ಲಕ್ಷ ವೆಚ್ಚವನ್ನು ಅಂದಾಜಿಸಿ, 22.50 ಲಕ್ಷಗಳ ಉಳಿತಾಯ ಬಜೆಟ್‌ನ್ನು ಪುರಸಭೆಯಲ್ಲಿ ಮಂಡಿಸಿದರು. ರಾಜಸ್ವ ಖಾತೆಯಲ್ಲಿ 1,053.35 ಲಕ್ಷಗಳನ್ನು, ಬಂಡವಾಳ ಖಾತೆಯಲ್ಲಿ 2,303 ಹಾಗೂ ಅಸಾಧಾರಣ ಖಾತೆಯಲ್ಲಿ 321.90 ಲಕ್ಷಗಳೊಂದಿಗೆ 2677.25 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ. ಅದೇ ರೀತಿ ರಾಜಸ್ವ ಖಾತೆಯಲ್ಲಿ 924.65 ಲಕ್ಷ ವೆಚ್ಚ. ಬಂಡವಾಳ…