ಸಾರ್ವಜನಿಕರ,ಪ್ರತಿಭಟನೆಯಿಂದ, ದುರಸ್ತಿ ಕಾಮಗಾರಿ ಆರಂಭ.
ವೀರಮಾರ್ಗ ನ್ಯೂಸ್ : ಹಾನಗಲ್ಲ : ಹಾನಗಲ್ಲ- ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ಕಡೆಗಳಲ್ಲಿ ದುರಸ್ತಿಗಾಗಿ ಅಗೆದ ರಸ್ತೆ ಭಾಗಗಳು ಹಾಗೂ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಸಾರ್ವಜನಿಕರ ಪ್ರತಿಭಟನೆ, ಅಧಿಕಾರಿಗಳ ಮೇಲೆ ಒತ್ತಡ, ಜಿಪಂ ತಾಪಂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚೆಯ ಬಳಿಕ ದುರಸ್ತಿ ಕಾಮಗಾರಿ ಆರಂಭವಾಗಿದೆ. ಹಾನಗಲ್ಲ ಹಾವೇರಿ ರಾಜ್ಯ ರಸ್ತೆಯಲ್ಲಿ ವಿವಿಧ ವಾಹನಗಳಲ್ಲಿ ಓಡಾಡುವವರು ಮೈಯಲ್ಲ ಕಣ್ಣಾಗಿ ಸಂಚರಿಸುವಂತಾಗಿತ್ತು. ರಸ್ತೆಯಲ್ಲಿ ಬಿದ್ದ ತಗ್ಗುಗಳು, ಇದರೊಂದಿಗೆ ರಸ್ತೆ ತಗ್ಗುಗಳನ್ನು ಮುಚ್ಚುವುದಕ್ಕಾಗಿಯೇ ಅಗೆದ ಡಾಂಬರ್‌ಭಾಗಗಳು…