ಪಟ್ಟಣ ಪಂಚಾಯಿತಿಗೇ ಮನವಿ.


ಮಾನ್ಯ ಮುಖ್ಯಾಧಿಕಾರಿಗಳು,
ಪಟ್ಟಣ ಪಂಚಾಯಿತಿ, ದೋರನಹಳ್ಳಿ.

ವೀರಮಾರ್ಗ ನ್ಯೂಸ್ : ದೋರನಹಳ್ಳಿ ಗ್ರಾಮದ ಎಲ್ಲಾ ವಾರ್ಡ್‌ಗಳ ಕುಡಿಯುವ ನೀರಿನ ಬೋರ್‌ವೆಲ್‌ಗಳನ್ನು ಪರಿಶೀಲಿಸಿ, ತುಕ್ಕು ಹಿಡಿದಿರುವ ಕಬ್ಬಿಣದ ಬಿಡಿಭಾಗಗಳನ್ನು ಬದಲಾಯಿಸುವ ಕುರಿತು ಮನವಿ.

ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ, ದೋರನಹಳ್ಳಿ ಗ್ರಾಮದ ಪ್ರತಿ ವಾರ್ಡ್‌ನಲ್ಲಿರುವ ಕುಡಿಯುವ ನೀರಿನ ಬೋರ್‌ವೆಲ್‌ಗಳನ್ನು ಸಮಗ್ರವಾಗಿ ಸರ್ವೆ ಮಾಡಿ ಪರಿಶೀಲಿಸುವುದು ಅತ್ಯವಶ್ಯಕವಾಗಿದೆ.
ಗ್ರಾಮದ ವಿವಿಧ ವಾರ್ಡ್‌ಗಳಲ್ಲಿರುವ ಬೋರ್‌ವೆಲ್‌ಗಳಿಗೆ ಹಲವು ವರ್ಷಗಳ ಹಿಂದೆ ಅಳವಡಿಸಲಾಗಿರುವ ಕಬ್ಬಿಣದ ಪೈಪ್‌ಗಳು, ಚೈನ್‌ಗಳು, ರಾಡ್‌ಗಳು, ಹ್ಯಾಂಡಲ್‌ಗೆ ಜೋಡಿಸಲಾದ ಬಿಡಿಭಾಗಗಳು ಹಾಗೂ ಇತರ ಕಬ್ಬಿಣದ ಉಪಕರಣಗಳು ದೀರ್ಘಕಾಲದ ಬಳಕೆಯಿಂದ ತುಕ್ಕು ಹಿಡಿದಿವೆ. ಇದರಿಂದ ಕೆಲವು ಭಾಗಗಳು ಸವಕಳಿಗೊಂಡು ತುಂಡಾಗಿ ಬೋರ್‌ವೆಲ್‌ನೊಳಗೆ ಬೀಳುವ ಸಾಧ್ಯತೆಯಿದ್ದು, ತುಕ್ಕು ಮತ್ತು ಇತರ ಕಲ್ಮಶಗಳು ಕುಡಿಯುವ ನೀರಿನಲ್ಲಿ ಮಿಶ್ರಣವಾಗುವ ಅಪಾಯವಿದೆ. ಇದರಿಂದ ನೀರಿನ ಗುಣಮಟ್ಟ ಹದಗೆಟ್ಟು ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.


ಆದ್ದರಿಂದ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ದೋರನಹಳ್ಳಿ ಗ್ರಾಮದ ಎಲ್ಲಾ ವಾರ್ಡ್‌ಗಳಲ್ಲಿರುವ ಕುಡಿಯುವ ನೀರಿನ ಬೋರ್‌ವೆಲ್‌ಗಳನ್ನು ತಕ್ಷಣ ಸರ್ವೆ ಮಾಡಿ, ಅವುಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು. ತುಕ್ಕು ಹಿಡಿದಿರುವ ಹಾಗೂ ಹಾನಿಗೊಳಗಾದ ಕಬ್ಬಿಣದ ಪೈಪ್‌ಗಳು, ಚೈನ್‌ಗಳು, ರಾಡ್‌ಗಳು, ಹ್ಯಾಂಡಲ್‌ನ ಬಿಡಿಭಾಗಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ವಿಳಂಬವಿಲ್ಲದೆ ಹೊಸ ಉಪಕರಣಗಳಿಂದ ಬದಲಾಯಿಸಬೇಕು.
ಅಲ್ಲದೆ, ಸಾರ್ವಜನಿಕರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ದೊರೆಯುವಂತೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಅಗತ್ಯ ದುರಸ್ತಿ ಮತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ಹೃತ್ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ,
ಮನವಿ ಸಲ್ಲಿಸುವವರು,
ಭೀಮು ಸಾವೂರ
ಸಾಮಾಜಿಕ ಯುವ ಹೋರಾಟಗಾರರು
ದೋರನಹಳ್ಳಿ.