ಹಣದಾಸೆಗೆ 22 ವರ್ಷದ ಯುವತಿಗೇ 65 ವರ್ಷದ ವೃದ್ಧನಿಗೆ ಮದುವೆಗೇ ಯತ್ನಿ,

ಹಣದಾಸೆಗೆ 22 ವರ್ಷದ ಯುವತಿಯನ್ನು 65 ವರ್ಷದ ವೃದ್ಧನಿಗೆ ಮದುವೆ ಮಾಡಿಕೊಡಲು ಯತ್ನಿಸಿ, ಅದನ್ನು ವಿರೋಧಿಸಿದ ಕಾರಣಕ್ಕೆ ಆಕೆಯ ಮೇಲೆ ಕುದಿಯುವ ನೀರು ಸುರಿದು ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

​₹3 ಲಕ್ಷಕ್ಕೆ ವೃದ್ಧನಿಗೆ ಮಾರಾಟ ಮಾಡಲು ಯತ್ನ…

22 ವರ್ಷದ ಪ್ರೀತಿ ಎಂಬ ಯುವತಿಗೆ ₹3 ಲಕ್ಷ ರೂಪಾಯಿ ಹಣ ಪಡೆದು 65 ವರ್ಷದ ವೃದ್ಧನೊಂದಿಗೆ ಬಲವಂತವಾಗಿ ಮದುವೆ ಮಾಡಲು ಮನೆಯವರು ಸಿದ್ಧತೆ ನಡೆಸಿದ್ದರು. ಆದರೆ, ಈ ಅಸಹಜ ಮದುವೆಗೆ ಯುವತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು, ಆಕೆ ರಾತ್ರಿ ಮಲಗಿದ್ದ ವೇಳೆ ಖಾಸಗಿ ಅಂಗಗಳ ಮೇಲೆ ಕುದಿಯುವ ನೀರು ಸುರಿದು ವಿಕೃತಿ ಮೆರೆದಿದ್ದಾರೆ.

3 ದಿನ ಚಿಕಿತ್ಸೆ ನೀಡದೆ ಕೂಡಿಹಾಕಿದ ಕ್ರೂರಿಗಳು…

ಯುವತಿಯ ಮೇಲೆ ಇಷ್ಟೊಂದು ಕ್ರೌರ್ಯ ಎಸಗಿದ್ದಲ್ಲದೆ, ಆಕೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಕೊಡಿಸದೆ 16ನೇ ತಾರೀಖಿನಿಂದ 19ನೇ ತಾರೀಖಿನವರೆಗೆ ಬರೋಬ್ಬರಿ 3 ದಿನಗಳ ಕಾಲ ಮನೆಯಲ್ಲೇ ಬೀಗ ಹಾಕಿ ಕೂಡಿಹಾಕಲಾಗಿತ್ತು. ನರಳಾಡುತ್ತಿದ್ದ ಯುವತಿಯ ಸ್ಥಿತಿಯನ್ನು ಗಮನಿಸಿದ ನೆರೆಹೊರೆಯ ಮಹಿಳೆಯೊಬ್ಬರು, ತಕ್ಷಣ ಆಕೆಯ ಚಿಕ್ಕಪ್ಪನಿಗೆ (ಮೌಸಾ) ಕರೆ ಮಾಡಿ ವಿಷಯ ತಿಳಿಸಿದ್ದಾರೆ.

​ಬೀಗ ಮುರಿದು ಯುವತಿಯ ರಕ್ಷಣೆ…

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಪೊಲೀಸರ ಸಹಾಯದಿಂದ ಮನೆಯ ಬೀಗ ಮುರಿದು ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ರಕ್ಷಿಸಿದ್ದಾರೆ. ಸದ್ಯ ಆಕೆಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.