ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಸಮ್ಮುಖದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ರಾಣೇಬೆನ್ನೂರು ನಗರದ ಮಾಗೋಡ ರಸ್ತೆಯಲ್ಲಿ ಇರುವ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮ್ಯಾನೇಜರ ಆರ್ ಸಿ ಪಾಟೀಲ ಅವರಿಗೆ ಗುತ್ತಲ ಮಾರ್ಗವಾಗಿ ಚಲಾಯಿಸುವ ಪ್ರತಿಯೊಂದು ಬಸ್ ದೇವರಗುಡ್ಡ ಗ್ರಾಮದ ಮಾರ್ಗವಾಗಿ ಬಸ್ ಸಂಚಾರ ಆರಂಭಿಸುವ ಕುರಿತು ಮನವಿ ಸಲ್ಲಿಸಲಾಯಿತು.
ಹಾವೇರಿ ಜಿಲ್ಲಾ ಉಪಾಧ್ಯಕ್ಷರು ನಿಂಗಪ್ಪ ಬೀರಪ್ಪನವರ ಮಾತನಾಡಿ ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಗ್ರಾಮಸ್ಥರ ಪರವಾಗಿ ಭಕ್ತಾದಿಗಳ ಪರವಾಗಿ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಪರವಾಗಿ ತಮ್ಮಲ್ಲಿ ಕೇಳಿಕೊಳ್ಳುವದೇನಂದರೆ ಕರ್ನಾಟಕ ರಾಜ್ಯದಲ್ಲಿಯೇ ಪ್ರಸಿದ್ಧವಾದ ಕ್ಷೇತ್ರ ಶ್ರೀ ದೇವರಗುಡ್ಡ ಗ್ರಾಮದಲ್ಲಿ ಶ್ರೀ ಮಾಲತೇಶ ಸ್ವಾಮಿ ದೇವಾಲಯ ಪುಣ್ಯ ಕ್ಷೇತ್ರವಿದೆ. ಕರ್ನಾಟಕದಾದ್ಯಂತ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆಯಲು ಬರುತ್ತಾರೆ ಭಕ್ತಾದಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ಗುತ್ತಲ ಬಳ್ಳಾರಿ ಹೂವಿನಹಡಗಲಿ ಇನ್ನೂ ಹಲವಾರು ಗ್ರಾಮಗಳಿಗೆ ಈ ಮಾರ್ಗವಾಗಿ ಹೋಗುವ ಹಾಗೂ ತೆರಳುವ ತೆರಳುವ ಬಸ್ ಗಳನ್ನು ಹತ್ತಿ ನ್ಯಾಷನಲ್ ಹೈವೇ ದೇವರಗುಡ್ಡದ ಕ್ರಾಸ್ ಗೆ ಇಳಿದು ದೇವರ ದರ್ಶನಕ್ಕೆ ಬರಲು ಭಕ್ತಾದಿಗಳಿಗೆ ತುಂಬಾ ತೊಂದರೆ ಯಾಗುತ್ತದೆ ಆದ ಕಾರಣ ನ್ಯಾಷನಲ್ ಹೈವೇ ಮೂಲಕ ಚಲಾಯಿಸುವ ಬಸ್ ಗಳನ್ನು ದೇವರಗುಡ್ಡದ ಗ್ರಾಮದ ಒಳ ಭಾಗದ ಮೂಲಕ ಬಸ್ ಚಲಾಯಿಸುವಂತೆ ಅನುಕೂಲ ಮಾಡಿಕೊಡಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ನೀಡುವದರೊಂದಿಗೆ ವಿನಂತಿಸಿಕೊಳ್ಳಲಾಯಿತು.
ಮನವಿಯ ಕಾರಣಗಳು:-
- ಭಕ್ತರ ಸಂಖ್ಯೆ ಹೆಚ್ಚಳ: ಪ್ರತಿ ಹಬ್ಬ, ಹುಣ್ಣಿಮೆ ಮತ್ತು ವಾರದ ದಿನಗಳಲ್ಲಿ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಾರೆ.
- ಶ್ರಾವಣ ಮಾಸದ ವಿಶೇಷ: ವಿಶೇಷವಾಗಿ ಶ್ರಾವಣ ಮಾಸದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮತ್ತು ಬಸ್ ಮೂಲಕ ಆಗಮಿಸುತ್ತಾರೆ. ಪ್ರಸ್ತುತ ಗುತ್ತಲ ಮಾರ್ಗದ ಬಸ್‌ಗಳು ದೇವರಗುಡ್ಡ ಮಾರ್ಗವಾಗಿ ಹೋಗದ ಕಾರಣ ಭಕ್ತರಿಗೆ 3-4 ಕಿ.ಮೀ ನಡೆದುಕೊಂಡು ಹೋಗುವ ತೊಂದರೆಯಾಗುತ್ತಿದೆ. ವೃದ್ಧರು, ವಯಸ್ಕರು ವಿಶೇಷ ಚೇತನರು ಮಕ್ಕಳು, ಮಹಿಳೆಯರಿಗೆ ಬಹಳ ಕಷ್ಟಕರವಾಗಿದೆ.
- ಸಾರ್ವಜನಿಕ ಅನುಕೂಲ: ಬಸ್ ಸಂಚಾರ ಆರಂಭವಾದಲ್ಲಿ ವಿದ್ಯಾರ್ಥಿಗಳು, ರೋಗಿಗಳು ಮತ್ತು ವ್ಯಾಪಾರಸ್ಥರಿಗೂ ಅನುಕೂಲವಾಗುತ್ತದೆ.
ಆದ್ದರಿಂದ ಮಾನ್ಯರು ದಯಮಾಡಿ ಗುತ್ತಲ ಮಾರ್ಗವಾಗಿ ಸಂಚರಿಸುವ ಪ್ರತಿಯೊಂದು ಬಸ್‌ಗಳನ್ನು ದೇವರಗುಡ್ಡ ಗ್ರಾಮದ ಮಾರ್ಗವಾಗಿ ತೆರಳುವಂತೆ ಆದೇಶ ನೀಡಬೇಕೆಂದು ಕೇಳಿಕೊಳ್ಳುತ್ತೇವೆ, ವಿಶೇಷವಾಗಿ ಶ್ರಾವಣ ಮಾಸ ಹುಣ್ಣಿಮೆ ಮತ್ತು ಹಬ್ಬದ ದಿನಗಳಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಭಕ್ತಾದಿಗಳಿಗೆ ಬಹಳ ಅನುಕೂಲವಾಗುತ್ತದೆ ತಾವು ಈ ನಮ್ಮ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ಶೀಘ್ರವೇ ಬಸ್ ಸಂಚಾರಕ್ಕೆ ಅನುಮತಿ ನೀಡುವಿರಿ ಎಂದು ಈ ಮನವಿ ನೀಡುವದರ ಮೂಲಕ ತಮ್ಮನ್ನು ವಿನಂತಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಚಂದ್ರಪ್ಪ ಬಣಕಾರ ಪರಶುರಾಮ ಕುರುವತ್ತಿ ಆನಂದ ಲಮಾಣಿ ರಮೇಶ ಮೈಲಾರ ಕೃಷ್ಣ ವೇಷಗಾರ ಮತ್ತಿತರರು ಉಪಸ್ಥಿತರಿದ್ದರು.