SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್‌ನಲ್ಲಿ 11 ಅಂಕ.

Haveri: SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್‌ನಲ್ಲಿ ಬಂದಿದ್ದು 11 ಅಂಕ


ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ನೀಟ್‌ ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದರು, ಆದರೆ ಅವರಿಗೆ -11 ಅಂಕ ಬಂದಿದೆ. ತಮ್ಮ ಓಎಂಆರ್‌ ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಹಾವೇರಿ: ನೀಟ್‌ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲ ವಿದ್ಯಾರ್ಥಿನಿಗೆ ಓಎಂಆರ್‌ ಸೀಟ್‌ನಲ್ಲಿ ಬರೀ -11 ಅಂಕ ಬಂದಿದ್ದು, ಹೆಬ್ಬಟ್ಟಿನ ಗುರುತು ಕೂಡಾ ಓವರ್ ಲ್ಯಾಪ್‌ ಆಗಿದೆ ಎಂದು ವಿದ್ಯಾರ್ಥಿನಿ ದೂರಿದ್ದಾರೆ.

ವಿದ್ಯಾರ್ಥಿನಿ ಬಿಂದು ಶ್ರೀ ಜಗದೀಶ ಪವಾರ ಅವರಿಗೆ ಅನ್ಯಾಯವಾಗಿದ್ದು, ಅವರು ಈ ಕುರಿತು ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿಗೆ ಮೇಲ್‌ನಲ್ಲಿ ದೂರಿದ್ದಾರೆ. ವಿದ್ಯಾರ್ಥಿನಿ ಹಾವೇರಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾರೆ.

720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು
ನೀಟ್‌ ಪರೀಕ್ಷೆಯಲ್ಲಿ ನಾನು ತುಂಬಿದ ಓಎಂಆರ್‌ ಸೀಟ್‌ ಅಂಕ ನನಗೆ ಬಂದಿಲ್ಲ. ನಾನು ವೆಬ್‌ಸೈಟ್‌ನಲ್ಲಿ ತರಿಸಿಕೊಂಡ ಓಎಂಆರ್‌ ಸೀಟ್‌ ನನ್ನದಲ್ಲವೇ ಅಲ್ಲ, ನಾನು ಪರೀಕ್ಷೆಗೆ ಹಾಜರಾದ ಸಮಯ, ಹೊರಬಂದ ಸಮಯ, ಓಎಂಆರ್‌ ಸೀಟ್‌ನಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೇ ನನ್ನ ಹೆಬ್ಬೆಟ್ಟಿನ ಗುರುತು ಕೂಡಾ ಓವರ್‌ ಲ್ಯಾಪ್‌ ಆಗಿದೆ. ನನಗೆ 720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು, ಆದರೆ ಬಂದದ್ದು -11 ಅಂಕ ಇದು ನನ್ನ ಫಲಿತಾಂಶದ ಮೇಲೆ ಮಾಡಿದೆ ಎಂದಿದ್ದಾರೆ.

SSLCಯಲ್ಲಿ ಶೇ.98 ಮತ್ತು ಪಿಯುಸಿಯಲ್ಲಿ ಶೇ.95
ಎಸ್ಸೆಸ್ಸೆಲ್ಸಿಯಲ್ಲಿ ಶೇ. 98 ಅಂಕ ಪಡೆದಿದ್ದೇನೆ. ಪಿಯುಸಿ ವಿಜ್ಞಾನದಲ್ಲಿ ಶೇ. 95 ಬಂದಿವೆ. ಇಷ್ಟೆದಲ್ಲರ ನಡುವೆ ನಾನು ಪರಿಶ್ರಮಪಟ್ಟು ಓದಿದ ಫಲಿತಾಂಶ ನನಗೆ ಸಿಗಲಿಲ್ಲ, ಎಲ್ಲೋ ನಡೆದ ಮೋಸ ನನ್ನ ಭವಿಷ್ಯದ ಮೇಲೆ ಆಟವಾಡಿದೆ. ಈ ಪರೀಕ್ಷೆ ವ್ಯವಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ. ಈ ವಿಷಯವನ್ನು ಸಮಗ್ರ ತನಿಖೆ ಮಾಡಿ ನನಗೆ ನ್ಯಾಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ ಅವರಿಗೆ ಜು. 22ರಂದು ಈ ಓಎಂಆರ್‌ ಸೀಟ್‌ ನನ್ನದಲ್ಲ ಹಾಗೂ ಫಲಿತಾಂಶವೂ ನನ್ನದಲ್ಲ ಎಂದು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೆಲ್ಪಲೈನ್‌ ನಂಬರ್‌ಗೆ 1 ಸಾವಿರ ಬಾರಿ ಫೋನಾಯಿದ್ದರೂ ನನ್ನ ಪೋನ್‌ ಕರೆ ಸ್ವೀಕರಿಸಿಲ್ಲ. ಪರೀಕ್ಷಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ, ಸತ್ಯವನ್ನು ಪರಿಶೀಲಿಸಿ ನನಗೆ ನ್ಯಾಯಕೊಡಿಸುತ್ತದೆ. ನನ್ನದೇ ಆದ ಓಎಂಆರ್‌ ಸೀಟ್‌ ನನಗೆ ಸಿಕ್ಕು 668 ಅಂಕ ಪಡೆದಿದ್ದು, ನನಗೆ ಬಯಸಿದ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ನಂಬಿಕೆಗೆ ಮೋಸವಾಗುದಿಲ್ಲ ಎಂಬ ಪೂರ್ಣವಿಶ್ವಾಸವಿದೆ. ಆದರೆ, ನ್ಯಾಯವೇ ಗೆಲ್ಲಬೇಕು ಎಂದು ಬಿಂದುಶ್ರೀ ಪವಾರ ಅವರು ಕನ್ನಡಪ್ರಭಕ್ಕೆ ಅಳಲು ತೋಡಿಕೊಂಡಿದ್ದಾರೆ.

ನನ್ನ ಮಗಳು ಪ್ರತಿಭಾವಂತೆ, ಹಿಂದಿನ ಯಾವ ಪರೀಕ್ಷೆಯಲ್ಲೂ ಆಕೆಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿಲ್ಲ. ಈ ಬಾರಿ ನೀಟ್‌ನಲ್ಲಿ ಯಶಸ್ವಿಯಾಗುತ್ತಾಳೆ ಎಂಬ ಪೂರ್ಣವಿಶ್ವಾಸ ಇನ್ನು ಇದೆ. ನ್ಯಾಯಕೊಡಿಸಬೇಕಾದ ಪರೀಕ್ಷಾ ಪ್ರಾಧಿಕಾರದ ಮೇಲೆ ಇನ್ನು ನಂಬಿಕೆ ಇಟ್ಟಿದ್ದೇನೆ. ಇದು ನನ್ನ ಮಗಳ ಓಎಂಆರ್‌ ಸೀಟ್ ಅಲ್ಲ. ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಬಿಂದುಶ್ರೀ ತಂದೆ ಜಗದೀಶ್ ಪವಾರ್ ಆಗ್ರಹಿಸಿದ್ದಾರೆ.

SIR ಕರ್ತವ್ಯದ ವೇಳೆ ಪಾರ್ಟಿ ಮಾಡಿದ್ರಾ ಪಿಡಿಒಗಳು?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಸಮೀಪದ ಸಿದ್ದರಬೆಟ್ಟದಲ್ಲಿ SIR (Special Intensive Revision) ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ನಡುವೆಯೇ ಕೆಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಪಾರ್ಟಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯರ ಆರೋಪದ ಪ್ರಕಾರ, ಸರ್ಕಾರಿ ಕರ್ತವ್ಯದ ಸಮಯದಲ್ಲೇ ಅಧಿಕಾರಿಗಳು ಗುಂಡು-ತುಂಡಿನ ಪಾರ್ಟಿಯಲ್ಲಿ ಭಾಗವಹಿಸಿದ್ದು, ಜನರ ಕೆಲಸಗಳನ್ನು ಬಿಟ್ಟು ಮೋಜು-ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಪಾರ್ಟಿ ನಡೆಯುತ್ತಿದ್ದ ವೇಳೆ ಸ್ಥಳೀಯರು ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದು, ಅದರ ವಿಡಿಯೋಗಳು ಮೊಬೈಲ್‌ನಲ್ಲಿ ಸೆರೆ ಆಗಿವೆ.
ಇನ್ನೂ, ಸಿದ್ದೇಶ್ವರಸ್ವಾಮಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡಿ ಮಾಂಸದೂಟ ಆಯೋಜಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ಆರೋಪದಲ್ಲಿ ಹೆಸರು ಕೇಳಿಬಂದಿರುವವರಲ್ಲಿ ಕುಲುವನಹಳ್ಳಿ ಪಿಡಿಒ ಮೋಹನ್, ಕಣೇಗೌಡನಹಳ್ಳಿ ಪಿಡಿಒ ಮಂಜುನಾಥ್, ದಾಬಸ್‌ಪೇಟೆ ಪಿಡಿಒ ರವಿಶಂಕರ್, ಗೊಲ್ಲಹಳ್ಳಿ ಪಿಡಿಒ ಪ್ರಶಾಂತ್, ಬೂದಿಹಾಳ್ ಪಿಡಿಒ ಚಿರಂಜೀವಿ, ಶಿವಗಂಗೆ ಪಿಡಿಒ ಗಿರೀಶ್, ಶ್ರೀನಿವಾಸಪುರ ಪಿಡಿಒ ಧರಣೇಶ್, ದೇವನಹಳ್ಳಿ ಪಿಡಿಒ ದಿನೇಶ್, ಹಸಿರುವಳ್ಳಿ ಪಿಡಿಒ ಮುತ್ತಪ್ಪ ಸೇರಿದಂತೆ ಬಿಲ್ ಕಲೆಕ್ಟರ್‌ಗಳಾದ ಹನುಮಂತರಾಜು, ಶ್ರೀನಿವಾಸ್ ಹಾಗೂ ನಟರಾಜ್ ಹೆಸರುಗಳು ಉಲ್ಲೇಖವಾಗಿವೆ.

ನೋಟಿಸ್ ನೀಡಲು ಬಂದ ಪೊಲೀಸರೊಂದಿಗೆ ಸಿ.ಟಿ.ರವಿ ವಾಗ್ವಾದ, ಮನೆಯ ಗೋಡೆಗೆ ಅಂಟಿಸಿ ಮರಳಿದ ಖಾಕಿ!

ಚಿಕ್ಕಮಗಳೂರು: ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ (CT Ravi) ಮತ್ತು ನಗರ ಠಾಣಾ ಪೊಲೀಸರ ನಡುವೆ ಹೈಡ್ರಾಮಾ ನಡೆದಿದ್ದು, ತನಿಖೆಗೆ ಹಾಜರಾಗುವಂತೆ ನೀಡಲು ಬಂದಿದ್ದ ಪೊಲೀಸ್ ನೋಟಿಸ್ ಪಡೆಯಲು ಸಿ.ಟಿ.ರವಿ ನಿರಾಕರಿಸಿದ್ದಾರೆ. ಕೊನೆಗೆ ಪೊಲೀಸರು ನೋಟಿಸ್ ಅನ್ನು ಅವರ ಮನೆಯ ಗೋಡೆಗೆ ಅಂಟಿಸಿ ವಾಪಸ್ ಹೋಗಿದ್ದು, ಅದನ್ನು ಸಿ.ಟಿ.ರವಿ ಬೆಂಬಲಿಗರು ತಕ್ಷಣವೇ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪೊಲೀಸರನ್ನೇ ಪ್ರಶ್ನಿಸಿದ ಸಿಟಿ ರವಿ
ಸಿ.ಟಿ.ರವಿ ವಿರುದ್ಧ ಇತ್ತೀಚೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಕೇಸಿನ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ನಗರ ಠಾಣೆಯ ಪೊಲೀಸರು ಚಿಕ್ಕಮಗಳೂರಿನಲ್ಲಿರುವ ಸಿ.ಟಿ.ರವಿ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಈ ವೇಳೆ ಪೊಲೀಸರನ್ನು ಪ್ರಶ್ನಿಸಿದ ಸಿ.ಟಿ.ರವಿ, “ನನ್ನ ವಿರುದ್ಧ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೀರಾ? ಮೊದಲು ನನಗೆ ಎಫ್.ಐ.ಆರ್. (FIR) ಪ್ರತಿ ಕೊಡಿ, ಆಮೇಲೆ ನೋಟಿಸ್ ಪಡೆದುಕೊಳ್ಳುತ್ತೇನೆ. ತನಿಖಾಧಿಕಾರಿಯನ್ನು ಬಿಟ್ಟು ಬೇರೆ ಪೊಲೀಸರನ್ನು ನೋಟಿಸ್ ಕೊಡಲು ಯಾಕೆ ಕಳುಹಿಸಿದ್ದೀರಾ? ಎಲ್ಲರ ಮನೆಗೂ ಪೊಲೀಸರು ಇದೇ ರೀತಿ ಹೋಗುತ್ತಾರಾ?” ಎಂದು ಖಾರವಾಗಿ ಪ್ರಶ್ನಿಸಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದರು.

ಈ ನೋಟೀಸ್‌ ನೀಡಲು ನಗರ ಠಾಣಾ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಅವರೇ ಖುದ್ದಾಗಿ ಸಿ.ಟಿ.ರವಿ ಮನೆಗೆ ಭೇಟಿ ನೀಡಿದ್ದರು, ಆದರೆ ತನಿಖಾಧಿಕಾರಿ ಬಂದರೂ ಸಹ ಸಿ.ಟಿ.ರವಿ ನೋಟಿಸ್ ಪಡೆದುಕೊಳ್ಳಲು ಒಪ್ಪಲಿಲ್ಲ. “ಅವರಿಗೆ ನೋಟಿಸ್ ಬೇಡವಂತೆ” ಎಂದು ಹೇಳಿದ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ನೇತೃತ್ವದ ತಂಡ, ಬೇರೆ ದಾರಿ ಕಾಣದೆ ಸಿ.ಟಿ.ರವಿ ಅವರ ಮನೆಯ ಮುಂಭಾಗದ ಗೋಡೆಗೆ ನೋಟಿಸ್ ಪ್ರತಿಯನ್ನು ಅಂಟಿಸಿ ಅಲ್ಲಿಂದ ನಿರ್ಗಮಿಸಿತು.

ಸರ್ಕಾರದ ವಿರುದ್ಧ ಆಕ್ರೋಶ

ಪೊಲೀಸರು ಜಾಗ ಖಾಲಿ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಸಿ.ಟಿ.ರವಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು, ಮನೆಯ ಮುಂಭಾಗ ಅಂಟಿಸಲಾಗಿದ್ದ ನೋಟಿಸ್ ಅನ್ನು ತಕ್ಷಣವೇ ಕಿತ್ತು ಹಾಕಿ ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭಾಷಣದಲ್ಲಿ ಸಿ.ಟಿ. ರವಿ ಹೇಳಿದ್ದೇನು?
“ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಅವರ ಎದೆ ಸೀಳಿದರೆ ಮೂರು ಅಕ್ಷರವೂ ಇಲ್ಲ, ಅಂತಹವರು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕಂತೆ, ‘ಮೋದಿ ಹಠಾವೋ’ ಅಂತಾರಂತೆ. ಅವರಿಗೂ ನೀಟ್ ಪೇಪರ್ ಲೀಕ್ ಆಗಿದ್ದಕ್ಕೂ ಏನು ಸಂಬಂಧ? ಭಾರತ ವಿರೋಧಿಗಳು ಮತ್ತು ‘ತುಕ್ಡೆ ಗ್ಯಾಂಗ್’ಗಳು ಅಲ್ಲಿ ಬಂದು ಮಾತನಾಡುತ್ತಿವೆ. ‘ಭಾರತ್ ತೇರೇ ತುಕ್ಡೆ ಹೋಂಗೆ, ಇನ್ ಶಾ ಅಲ್ಲಾ’ ಎಂದು ಘೋಷಣೆ ಕೂಗಿದ ತುಕ್ಡೆ ಗ್ಯಾಂಗ್‌ಗಳೇ ಈ ಹೋರಾಟದಲ್ಲಿ ಭಾಗವಹಿಸುತ್ತಿವೆ,” ಎಂದು ವಾಗ್ದಾಳಿ ನಡೆಸಿದ್ದರು.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು