ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ತಾಲೂಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮಾನ್ಯ ತಾಲೂಕ ಆಡಳಿತ ಕಚೇರಿ ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಗ್ರೇಟು ತಹಸೀಲ್ದಾರ್ ಶ್ರೀ ಅರುಣ್ ಕಾರಗಿ ಅವರಿಗೆ ಐರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 120 ಎಕರೆ ಹುಲ್ಲುಗಾವಲು ಕ್ಷೇತ್ರದಲ್ಲಿ ಐರಣಿ ಗ್ರಾಮದಲ್ಲಿರುವ ಬಡ ಕುಟುಂಬಗಳಿಗೆ ಮನೆ ಮತ್ತು ನಿವೇಶನ ಮಂಜೂರು ಮಾಡುವ ಕುರಿತು ವಿವಿಧ ಸಂಘ ಸಂಸ್ಥೆಯವರಿಂದ ಗ್ರಾಮಸ್ಥರಿಂದ ಮನವಿ ಪತ್ರ ಸಲ್ಲಿಸಲಾಯಿತು
ಗ್ರಾಮದ ಯುವ ಮುಖಂಡರಾದ ಶ್ರೀ ಮರಡೆಪ್ಪ ಚಳಗೇರಿ ಮಾತನಾಡಿ ಐರಣಿ ಗ್ರಾಮದ ಸಾರ್ವಜನಿಕರು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಐರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ರಿ.ಸ.ನಂ. 54 ರಲ್ಲಿ 120 ಎಕರೆ ಹುಲ್ಲಗಾವಲು ಪ್ರದೇಶ ಇರುತ್ತದೆ.
ಆದರೆ ಗ್ರಾಮ ಪಂಚಾಯಿತಿಂದ ಹುಲ್ಲುಗಾವಲು ಪ್ರದೇಶ ಎಂದು 120 ಎಕರೆ ಜಮೀನನ್ನು ಮೀಸಲಿಟ್ಟಿದ್ದರೂ. ನಮ್ಮ ಊರಿನ ಕೆಲವರು ಈ ಹುಲ್ಲುಗಾವಲು ಪ್ರದೇಶನ್ನು ಒತ್ತುವರಿ ಮಾಡಿಕೊಂಡು ಬೆಳೆಗಳನ್ನು ಬೆಳೆದುಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದಾರೆ. ಇತ್ತ ಹುಲ್ಲಾಗಾವಲು ಪ್ರದೇಶವೂ ಕಣ್ಮರೆಯಾಗುತ್ತಿದ್ದು ಅದೇ ರೀತಿ ಗ್ರಾಮದ ಯಾವಬ್ಬ ಕಡು ಬಡವರಿಗೂ ಒಂದೇ ಒಂದು ನಿವೇಶನವನ್ನು ಕೊಡದಂತಾಗಿದೆ.
ನಮ್ಮ ಗ್ರಾಮ ಅತ್ಯಂತ ದೊಡ್ಡದಾಗಿದ್ದು ಸಾಕಷ್ಟು ಕುಟುಂಬಗಳು ಇಂದಿಗೂ ಮನೆ ಇಲ್ಲದೆ ವಾಸವಾಗಿರುತ್ತೇವೆ. ಸದರಿ ಗ್ರಾಮದಲ್ಲಿ ಅತೀ ಜನಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಅನೇಕ ಕುಟುಂಬಗಳು ಅತ್ಯಂತ ಕಡುಬಡವರು ಸಹ ಆಗಿರುವುದರಿಂದ ಅನೇಕ ಕುಟುಂಬಗಳು ಇಂದಿಗೂ ಗುಡಿಸಲಿನಲ್ಲಿಯೇ ವಾಸವಾಗುತ್ತಾ ಬಂದಿರುತ್ತೇವೆ.
ನಮ್ಮ ರಾಜ್ಯದಲ್ಲಿ ಅನೇಕ ಗ್ರಾಮಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹುಲ್ಲುಗಾವಲು ಪ್ರದೇಶಗಳನ್ನು ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಅವರಿಗೆ ಮನೆ ಮತ್ತು ನಿವೇಶನನ್ನು ಪಂಚಾಯಿತಿಯಿಂದ ನೀಡಿದ್ದು ಇದ್ದರೂ ಕೂಡಾ ನಮ್ಮ ಐರಣಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಹುಲುಗಾವಲು ಪ್ರದೇಶದಲ್ಲಿ ಯಾವುದೇ ಕುಟುಂಬಕ್ಕೂ ಇದುವರೆಗೂ ಯಾರಿಗೂ ಒಂದೇ ಒಂದು ಮನೆ ನಿವೇಶನವನ್ನು ನೀಡಿರುವುದಿಲ್ಲ. ಐರಣಿ ಗ್ರಾಮಕ್ಕೆ ಒಂದು ಕಾನೂನು ಬೇರೆ ಗ್ರಾಮಗಳಿಗೆ ಒಂದು ಕಾನೂನು ಏನಾದರೂ ಇದೆಯೆ?
ಆದ್ದರಿಂದ ತಾವುಗಳು ಈ ಮೇಲಿನ ವಿಷಯವನ್ನು ಪರಿಶೀಲಿಸಿ ಐರಣಿ ಗ್ರಾಮ ಪಂಚಾಯಿತಿಯವರಿಗೆ ಹುಲ್ಲುಗಾವಲು ಪ್ರದೇಶವನ್ನು ಒತ್ತೋರಿ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರಗಿಸಬೇಕೆಂದು ಕೇಳಿಕೊಳ್ಳುತ್ತೇವೆ ಹಾಗೂ ತಮ್ಮ ಮಾರ್ಗದರ್ಶನದ ಮೂಲಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡಲು ನೆರವಾಗಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರು ದಿಳ್ಳೆಪ್ಪ ಸತ್ಯಪ್ಪನವರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ರಮೇಶ ಕಟನಳ್ಳಿ ಮತ್ತಿತರರು ಉಪಸ್ಥಿತರಿದ್ದರು.