ಸಾಲಮನ್ನಾ, ಬರಗಾಲ ಘೋಷಣೆ ಮಾಡಿ ಕಬ್ಬು ಬೆಳೆಗಾರರ ಸಂಘ ಆಗ್ರಹ.

ಸಾಲ ಮನ್ನಾ, ಬರಗಾಲ ಘೋಷಣೆ ಮಾಡಿ ಕಬ್ಬು ಬೆಳೆಗಾರರ ಸಂಘ ಆಗ್ರಹ

ವೀರಮಾರ್ಗ ನ್ಯೂಸ್ : ಹಾವೇರಿ : ರಾಜ್ಯ ಹಾಗೂ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ರಾಜ್ಯ ಸರ್ಕಾರ ಸಾಲ ಮನ್ನಾ ಮತ್ತು ಬರಗಾಲ ಘೋಷಣೆ ಮಾಡಲು ಮೀನಾ ಮೇಷ ಎಣಿಸುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬರಗಾಲದಿಂದ ರೈತರು ಗೋಳಾಡುತ್ತಿದ್ದಾರೆ ರಾಜ್ಯ ಸರ್ಕಾರ ಬೆಳೆ ನಷ್ಟದ ಸರ್ವೆ ಕೂಡ ನಡೆಸುತ್ತಿಲ್ಲ ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ರಾಜ್ಯದಲ್ಲಿ ಕೃಷಿ ಮಂತ್ರಿ ಇಲ್ಲದ ಸರ್ಕಾರ ಇದಾಗಿದೆ ಮುಖ್ಯಮಂತ್ರಿಗಳು ಕೂಡಲೇ ಸಂಕಷ್ಟದಲ್ಲಿರುವ ರೈತರಿಗೆ ಒಂದು ಎಕರೆಗೆ 30 ಸಾವಿರ ರೂಪಾಯಿಗಳಂತೆ ಪರಿಹಾರ ನೀಡಬೆಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ರಾಜ್ಯದಲ್ಲಿ 50% ರಷ್ಟು ಮಳೆಯಾಗಿಲ್ಲ ಕುಡಿಯುವ ನೀರು ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಕಾಡುತ್ತಿದೆ ರೈತರು ಕೆಲವುಕಡೆ ಬಿತ್ತನೆ ಮಾಡಿದರು ಮೊಳಕೆಯಲ್ಲಿಯೇ ಕಮರಿ ಹೋಗಿವೆ ಇನ್ನು ಕೆಲವು ರೈತರು ಕಬ್ಬು , ಬಾಳೆ ಅಡಿಕೆ ಮೆಣಸಿನಕಾಯಿ ಮೆಕ್ಕೆಜೋಳ ಶೇಂಗಾ ಸೋಯಾಬಿನ್ ಹೆಸರು ಬೆಳೆಗಳು ಒಣಗುತ್ತಿವೆ ಬರ ಘೋಷಣೆ ವಿಳಂಬದಿಂದ ರೈತರಿಗೆ ಸಂಕಷ್ಟವಾಗಿದೆ ಎಂದು ಕಿಡಿಕಾರಿದರು.

ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಿರುವಂತೆ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಡಿ ಕೆ ಶಿವಕುಮಾರ್ ಅವರು ರಾಷ್ಟ್ರೀಕೃತ ಬ್ಯಾಂಕ ಸಹಕಾರಿ ಮತ್ತು ಖಾಸಗಿ ಬ್ಯಾಂಕುಗಳ ಬೆಳೆ ಸಾಲ ಮನ್ನಾ ಮಾಡಬೇಕು ರೈತರ ಸಾಲ ವಸೂಲಿಗೆ ತಡೆ ನೀಡಬೇಕು ಸಾಲ ನವೀಕರಣ ಮಾಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಬೆಳೆವಿಮೆ ತುಂಬಲು ಇನ್ನೂ ಒಂದು ತಿಂಗಳು ಕಾಲಾವಕಾಶ ಕೊಡಬೇಕು ಮತ್ತು ಸರಳ ರೀತಿಯಲ್ಲಿ ಅನುಕೂಲ ಮಾಡಿಕೊಡಬೇಕು ಹಿಂದಿನ ವರ್ಷ ತುಂಬಿದ ಬೆಳೆವಿಮೆಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದರ ಬೆಂಬಲ ” ದಿನಾಂಕ 21-07- 2026ರಂದು ಮಂಗಳವಾರ ದಿವಸ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳಿ ರವರ ನೇತೃತ್ವದಲ್ಲಿ ನಡೆಯುತ್ತದೆ ಆದ ಕಾರಣ ಜಿಲ್ಲೆಯ ಎಲ್ಲಾ ರೈತರು ಮನೆಗೆ ಒಬ್ಬರಂತೆ ತಪ್ಪದೆ ಬಂದು ಹೋರಾಟದಲ್ಲಿ ಭಾಗವಹಿಸಿ ಬಿಡದಿ ಹೋರಾಟಕ್ಕೆ ಬೆಂಬಲ ಕೊಡುವುದು, ಮಲಗಿದ್ದ ಸರ್ಕಾರವನ್ನು ಬಡಿದೆಬ್ಬಿಸುವ ಸಲುವಾಗಿ ಮತ್ತು ಬೆಳೆಸಾಲ ಮನ್ನಾ, ಬರಗಾಲ ಘೋಷಣೆ ಮಾಡಲು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕಬ್ಬು ಬೆಳೆಗಾರರ ಸಂಘ ವಿನಂತಿ ಮಾಡಿದೆ “