“ನನ್ನ ಸಾವಿಗೆ ಪತ್ನಿಯೇ ಕಾರಣ, ನನ್ನನ್ನು ಕ್ಷಮಿಸಿ,,,

ನನ್ನ ಸಾವಿಗೆ ಪತ್ನಿಯೇ ಕಾರಣ, ನನ್ನನ್ನು ಕ್ಷಮಿಸಿಬಿಡಿ..”!: ಮದುವೆಯಾದ 7ನೇ ತಿಂಗಳಿಗೇ ಪತಿಯ ಘೋರ ಅಂತ್ಯ – ಕಣ್ಣೀರು ತರಿಸುತ್ತೆ ಆ ಕೊನೆಯ ವಾಟ್ಸಾಪ್ ಮೆಸೇಜ್!

ವೀರಮಾರ್ಗ ನ್ಯೂಸ್ : “ನನ್ನ ಸಾವಿಗೆ ನನ್ನ ಪತ್ನಿಯೇ ಸಂಪೂರ್ಣ ಕಾರಣ.. ನನ್ನ ಕುಟುಂಬಸ್ಥರೇ, ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ..” ಎಂದು ಡೆತ್‌ನೋಟ್ ಬರೆದಿಟ್ಟು, ಚಲಿಸುವ ರೈಲಿನ ಮುಂದೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಪತ್ನಿಯ ಅನೈತಿಕ ಸಂಬಂಧ ಹಾಗೂ ಆಕೆ ಮಾಡಿದ ನಂಬಿಕೆ ದ್ರೋಹಕ್ಕೆ 26 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ.

ಏಳು ತಿಂಗಳ ಹಿಂದಷ್ಟೇ ಆಗಿತ್ತು ಸಂಭ್ರಮದ ಮದುವೆ!

ಬಿಹಾರ ಮೂಲದ ಅಭಯ್ ಕುಮಾರ್ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ 2025ರ ಡಿಸೆಂಬರ್ 1ರಂದು ಅಭಯ್ ಕುಮಾರ್‌ಗೆ ಅತ್ಯಂತ ಸಡಗರದಿಂದ ಮದುವೆಯಾಗಿತ್ತು. ಮದುವೆಯಾದ ಬಳಿಕ ಆತ ತನ್ನ ಪತ್ನಿಯನ್ನು ಜೈಪುರಕ್ಕೆ ಕರೆದುಕೊಂಡು ಹೋಗಿ ಸಂಸಾರ ಹೂಡಿದ್ದ. ಆದರೆ, ಅಲ್ಲಿ ಹೊಸ ಬಾಳು ಆರಂಭಿಸುವಷ್ಟರಲ್ಲೇ ವಿಧಿಯ ಆಟ ಬೇರೆಯದೇ ಆಗಿತ್ತು.

ವಾಟ್ಸಾಪ್‌ಗೆ ಬಂದ ಫೋಟೋಗಳು: ಪತಿಯ ಬದುಕನ್ನೇ ನರಕ ಮಾಡಿದ್ಲು!

ಜೈಪುರದಲ್ಲಿದ್ದಾಗ ಪತ್ನಿಗೆ ಬೇರೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಇರುವುದು ಅಭಯ್‌ಗೆ ಗೊತ್ತಾಗಿತ್ತು. ಆದರೆ ಆಕೆ, “ಅವನು ನನ್ನ ರಕ್ತಸಂಬಂಧಿ” ಎಂದು ಸುಳ್ಳು ಹೇಳಿ ಪತಿಯನ್ನು ನಂಬಿಸುತ್ತಾ ಬಂದಿದ್ದಳು. ಕಳೆದ ವಾರ ಆಕೆ ತನ್ನ ತವರಿಗೆ ಹೋಗಿದ್ದಳು. ಇದೇ ವೇಳೆ ಅಭಯ್ ಮೊಬೈಲ್ ಫೋನ್‌ಗೆ ಪತ್ನಿ ಹಾಗೂ ಆಕೆಯ ಪ್ರಿಯಕರ ಅತ್ಯಂತ ಆಪ್ತವಾಗಿದ್ದ ಕೆಲವು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು ವಾಟ್ಸಾಪ್ ಮೂಲಕ ಬಂದಿವೆ. ಇದನ್ನು ನೋಡಿ ಅಭಯ್ ತೀವ್ರ ದಿಗ್ಭ್ರಾಂತಿಗೆ ಒಳಗಾಗಿದ್ದಾನೆ.

ರೈಲಿಗೆ ಶರಣಾದ ನೊಂದ ಪತಿ

ನಂಬಿದ ಪತ್ನಿಯ ಅಸಲಿ ಮುಖವಾಡ ಕಣ್ಣೆದುರೇ ಬಯಲಾದಾಗ ಅಭಯ್ ಮಾನಸಿಕವಾಗಿ ಸಂಪೂರ್ಣ ಕುಸಿದು ಹೋಗಿದ್ದಾನೆ. ತೀವ್ರ ಮಾನಸಿಕ ಒತ್ತಡ ಹಾಗೂ ಅವಮಾನ ತಡೆಯಲಾರದೆ ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟ ಆತ, ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಡೆತ್‌ನೋಟ್‌ನಲ್ಲಿ ಏನಿದೆ?:

ನನ್ನ ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಇದರಿಂದ ನಾನು ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ. ನನ್ನ ಸಾವಿಗೆ ಆಕೆಯೇ ಸಂಪೂರ್ಣ ಜವಾಬ್ದಾರಿ. ನನ್ನ ಕುಟುಂಬದವರೇ, ನನ್ನನ್ನು ಕ್ಷಮಿಸಿಬಿಡಿ…” ಎಂದು ಅಭಯ್ ಕಣ್ಣೀರು ತರಿಸುವ ಸಾಲುಗಳನ್ನು ಬರೆದಿಟ್ಟಿದ್ದಾನೆ.

ತನಿಖೆ ಕೈಗೆತ್ತಿಕೊಂಡ ಪೊಲೀಸರು

ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ಸ್ಥಳೀಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಅಭಯ್ ಬರೆದಿಟ್ಟಿದ್ದ ಆತ್ಮಾಹುತಿ ಪತ್ರ (Suicide Note) ಹಾಗೂ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಲಾಗಿದೆ. ಈ ಘೋರ ದುರಂತದ ಕುರಿತು ಗಾಂಧಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಕವಲೆತ್ತು: ಎಂ.ಎಸ್. ಪಾಟೀಲ್ ಶಾಲೆಯಲ್ಲಿ ಪೊಲೀಸರಿಂದ ‘ತೆರೆದ ಮನೆ’ ಜಾಗೃತಿ ಕಾರ್ಯಕ್ರಮ

ಕುಮಾರಪಟ್ಟಣಂ, ಜೂನ್ 20: ಸತತ 37 ವರ್ಷಗಳಿಂದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕವಲೆತ್ತಿನ ದಿ!! ಎಂ.ಎಸ್. ಪಾಟೀಲ್ ಪ್ರೌಢಶಾಲೆ ಮತ್ತು ಕುಮಾರಪಟ್ಟಣಂ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ತೆರೆದ ಮನೆ – ಜನಸ್ನೇಹಿ ಹಾಗೂ ಭಯಮುಕ್ತ ಪೊಲೀಸ್ ಠಾಣೆ” ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಕುಮಾರಪಟ್ಟಣಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಸ್.ಎಸ್. ಕಬ್ಬಿಣಕಂತಿಮಠ ಹಾಗೂ ಶ್ರೀಮತಿ ವೀಣಾ ಆಗಮಿಸಿದ್ದರು. ಪೊಲೀಸ್ ಅಧಿಕಾರಿಗಳು ಮಾತನಾಡಿ, ಪೊಲೀಸ್ ಠಾಣೆ ಎಂದರೆ ಭಯಪಡುವ ಸ್ಥಳವಲ್ಲ. “ಮನೆ-ಮನೆಗೆ ಪೊಲೀಸ್ ಠಾಣೆ” ಎಂಬಂತೆ ಜನರ ಸಮಸ್ಯೆಗೆ ಸ್ಪಂದಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು. 18 ವರ್ಷದ ಒಳಗಿನ ಮಕ್ಕಳು ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನುಬಾಹಿರ ಹಾಗೂ ಅಪಾಯಕಾರಿ ಎಂದು ಎಚ್ಚರಿಸಿದರು. ರಸ್ತೆ ಅಪಘಾತವಾದಾಗ 1033, ಮನೆ ಕಳ್ಳತನ ಅಥವಾ ಸಂಶಯಾಸ್ಪದ ಕಾನೂನುಬಾಹಿರ ಚಟುವಟಿಕೆಗಳು ಕಂಡಲ್ಲಿ 112, 1930, ಬೆಂಕಿ ಅವಘಡ ಸಂಭವಿಸಿದಾಗ 101, ಯಾವುದೇ ತುರ್ತು ಸಂದರ್ಭದಲ್ಲಿ 112 ಟೋಲ್ ಫ್ರೀ ಸಂಖ್ಯೆಗೆ ತಕ್ಷಣ ಕರೆ ಮಾಡಬೇಕು ಎಂದು ಮಕ್ಕಳಿಗೆ ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ಜಿ.ಆರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಿರಿಯ ಶಿಕ್ಷಕರಾದ ವೆಂಕಟೇಶ ಲಮಾಣಿ ಮತ್ತು ಕನ್ನಡ, ಇಂಗ್ಲಿಷ್ ಶಿಕ್ಷಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣಿತ ಶಿಕ್ಷಕರಾದ ಕೃಷ್ಣಪ್ಪ ಎಲ್. ಚವ್ಹಾಣ ನಿರೂಪಿಸಿದರು. ವಿಜ್ಞಾನ ಶಿಕ್ಷಕರಾದ ಮುತ್ತಪ್ಪ ತಳವಾರ* ವಂದನಾರ್ಪಣೆ ಮಾಡಿದರು.
8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.