ವೀರಮಾರ್ಗ ನ್ಯೂಸ್ : ಬೆಂಗಳೂರಿನ ವಿಜಯನಗರದಲ್ಲಿ ದಾರುಣ ಘಟನೆಯೊಂದು ನಡೆದು ಹೋಗಿದೆ. ಆಟೋ ಚಾಲಕ 53 ವರ್ಷದ ಶಿವಬೋರಯ್ಯ ಎಂಬುವರು ಕಾಂಪೌಂಡ್ ಕುಸಿದು … ಇಹಲೋಕ ತ್ಯಜಿಸಿದ್ದಾರೆ.
ಪತ್ನಿ, ಮಕ್ಕಳನ್ನು ಆಸ್ಪತ್ರೆಗೆ ಬಿಟ್ಟು ಹೊರಕ್ಕೆ ಬಂದ ಶಿವಬೋರಯ್ಯ ಆಟೋ ತೆಗೆದುಕೊಂಡು ಹೊರಟಾಗ, ಮೂತ್ರಕ್ಕೆ ಅವಸರ ಆಗಿದೆ. ಮಳೆ ಬಂದು ನಿಂತಿತ್ತು. ಚಳಿ ಬೇರೆ.. ಸೂಸು ಮಾಡಲು ಕಾಂಪೌಂಡ್ ಪಕ್ಕಕ್ಕೆ ಹೋಗಿದ್ದಾರೆ. ದುರಾದೃಷ್ಟವಶಾತ್ ಕಾಂಪೌಂಡ್ ಕುಸಿದಿದೆ.
ಇತ್ತೀಚೆಗೆ ಮಗಳನ್ನ ಕಳೆದುಕೊಂಡಿದ್ದ ಶಿವಬೋರಯ್ಯಗೆ ಒಬ್ಬ ಮಗ, ಹೆಂಡತಿ ಮತ್ತು ವಯಸ್ಸಾದ ತಾಯಿ ಇದ್ದಾರೆ. ಪ್ರತೀ ದಿನ ಆಟೋ ಓಡಿಸಿ ಕುಟುಂಬ ಸಾಕ್ತಿದ್ದ ಶಿವಬೋರಯ್ಯ, ಇದೀಗ ಬದುಕು ತೊರೆದು ಹೋಗಿದ್ದಾರೆ. ಕುಟುಂಬಸ್ಥ ಜೀವನ ಹೇಗೆ ಸಾಗಬೇಕು ಅಂತಾ ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುವ ಜನರಿಗೆ ಮಳೆಗಾಲದಲ್ಲಿ ಸಾವು ಎಲ್ಲಿ..? ಯಾವಾಗ..? ಬರುತ್ತೆ ಅಂತಾ ಹೇಳೋದಲ್ಲೆ ಸಾಧ್ಯವಿಲ್ಲ. ಸಾಧ್ಯವಾದಷ್ಟೂ ಮರಗಳು, ಕಾಂಪೌಂಡ್, ಹಳೇ ಗೋಡೆಗಳ ಪಕ್ಕದಲ್ಲಿ ನಿಲ್ಲುವುದು ಮಾಡಬೇಡಿ. GBA ಅಧಿಕಾರಿಗಳು ಅವರ ಕೆಲಸ ಮಾಡ್ಬೇಕು. ಆದರೆ ಮಾಡ್ತಿಲ್ಲ. ಮಾಡಿಸುವಂತಹ ಸರ್ಕಾರವೂ ಇಲ್ಲ.
ವರದಿ : ಚನ್ನೇಶ್. K M ಬೆಂಗಳೂರು.