ಕಾನೂನು ವಿದ್ಯಾರ್ಥಿನಿ ಇತಿಹಾಸ ಪ್ರಸಿದ್ಧ ಶುಭಾ ಕೇಸ್

ವೀರಮಾರ್ಗ ನ್ಯೂಸ್ : ಬೆಂಗಳೂರು : ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಮುಗಿಸಿದ ಕಾನೂನು ವಿದ್ಯಾರ್ಥಿನಿ! ಇತಿಹಾಸ ಪ್ರಸಿದ್ಧ “ಶುಭಾ ಕೇಸ್”

ನಿಶ್ಚಿತಾರ್ಥವಾಗಿ ಕೇವಲ 3 ದಿನಕ್ಕೆ ಭಾವಿ ಪತಿಯನ್ನು ಭೀಕರವಾಗಿ ಕೊ# ಮಾಡಿಸಿದ ಬೆಂಗಳೂರಿನ ಶುಭಾ ಶಂಕರನಾರಾಯಣ್ ಪ್ರಕರಣದ ಕರಾಳ ಸತ್ಯ ಇಲ್ಲಿದೆ.

ಯಾರು ಈ ಶುಭಾ? 21 ವರ್ಷದ ಲಾ ಸ್ಟೂಡೆಂಟ್. ತನಗಿಂತ ಕಿರಿಯ ಅರುಣ್ ವರ್ಮಾ ಜೊತೆ ಲವ್ ಇತ್ತು.

ಸಂಚು ಏನಿತ್ತು? ತಂದೆ ನಿಗದಿಪಡಿಸಿದ ಸಾಫ್ಟ್‌ವೇರ್ ಇಂಜಿನಿಯರ್ ಗಿರೀಶ್ ಜೊತೆ ನಿಶ್ಚಿತಾರ್ಥವಾದ ಬಳಿಕ, ಮದುವೆ ಬೇಡವೆಂದು ಗಿರೀಶ್‌ನನ್ನು ಮುಗಿಸಲು ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿದಳು.

ಕೊ# ನಡೆದಿದ್ದು ಹೇಗೆ? 2003ರಲ್ಲಿ ವಿಮಾನ ನೋಡುವ ನೆಪದಲ್ಲಿ ಗಿರೀಶ್‌ನನ್ನು HAL ಏರ್‌ಪೋರ್ಟ್ ರಸ್ತೆಗೆ ಕರೆತಂದು, ಪ್ರಿಯಕರ ಮತ್ತು ಗ್ಯಾಂಗ್‌ನಿಂದ ಶಾಕ್ ಅಬ್ಸಾರ್ಬರ್‌ನಿಂದ ಹೊಡೆದು ಕೊಲ್ಲಿಸಿದಳು.

ಕ# ದಿನ ಪ್ರಿಯಕರನಿಗೆ 73 ಬಾರಿ ಫೋನ್ ಮಾಡಿದ್ದೇ ಪೊಲೀಸರಿಗೆ ಕ್ಲೂ ಸಿಗಲು ಕಾರಣವಾಯಿತು!

ಅಂತಿಮ ತೀರ್ಪು: 2010ರ ಜೀವಾವಧಿ ಶಿಕ್ಷೆಯನ್ನು 2025ರಲ್ಲಿ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ ಹೇಳುವಂತೆ, “ಒಬ್ಬಾಕೆಯ ಸ್ವಾರ್ಥ ಮತ್ತು ತಪ್ಪು ನಿರ್ಧಾರಕ್ಕೆ ನಿರಪರಾಧಿ ಯುವಕನ ಪ್ರಾಣ ಹೋಯಿತು.”

ಕ್ಷಣಿಕ ಆವೇಶ, ತಪ್ಪು ನಿರ್ಧಾರಗಳು ಹೇಗೆ ಜೀವನವನ್ನೇ ನಾಶ ಮಾಡುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಬರಹ : ಕಾನೂನು ವಿದ್ಯಾರ್ಥಿ ಬೆಂಗಳೂರು.