ಸಿಹಿಕೊಡುವ ರೈತರಿಗೆ ಕಹಿಕೊಟ್ಟ ಕೇಂದ್ರ ಸರ್ಕಾರ : ಭುವನೇಶ್ವರ ಶಿಡ್ಲಾಪುರ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕೇಂದ್ರ ಸಚಿವ ಸಂಪುಟದಲ್ಲಿ ನಿನ್ನೆ ತೀರ್ಮಾನಿಸಿ ಘೋಷಣೆ ಮಾಡಿರುವ 2026-27 ನೇ ಸಾಲಿನ 10.25 ಸಕ್ಕರೆ ಇಳುವರಿ ಟನ್ ಕಬ್ಬಿಗೆ 3650. ನಿಗದಿ ಮಾಡಿದೆ ಇದು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ಹಾವೇರಿ ಜಿಲ್ಲಾ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಕಿಡಿ ಕಾರಿದ್ದಾರೆ
ಇನ್ನು ಕರ್ನಾಟಕ ಸರ್ಕಾರ 4450 ರೂ. ನಿಗದಿ ಮಾಡಬೇಕೆಂದು ವರದಿ ನೀಡಿದೆ ಇದನ್ನು ಗಮನಹರಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕಾಗಿತ್ತು . ಇದು ರೈತರನ್ನು ಕಬ್ಬು ಬೆಳೆಯಿಂದ ಒಕ್ಕಲೆಬ್ಬಿಸುವ ಕಾರ್ಯವಾಗಿದೆ ಕೂಡಲೇ ಕೇಂದ್ರ ಸರ್ಕಾರ ಎಫ್ ಆರ್ ಪಿ ದರವನ್ನು ಪುನರ್ ಪರಿಶೀಲಿಸಿ , ಒಂದು ಟನ್ ಕಬ್ಬಿಗೆ 4500 ರೂ ನಿಗದಿಗೊಳಿಸಬೇಕು ಎಂದು ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘ,ಆಗ್ರಹಿಸಿದೆ.
ಕಬ್ಬಿನಿಂದ ಸಕ್ಕರೆ ವಿದ್ಯುತ್ ಕಾಂಪೋಸ್ಟ್ ಗೊಬ್ಬರ ಇನ್ನೂ ಇತರ ಉತ್ಪನ್ನಗಳನ್ನು ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಿವೆ ಸರ್ಕಾರದ ಆದೇಶಗಳನ್ನು ವಾಮ ಮಾರ್ಗದಲ್ಲಿ ನಿರ್ಲಕ್ಷಿಸುತ್ತಿವೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆರೋಪಿಸಿದ್ದಾರೆ.