ಅರೋಗ್ಯವೇ ಸಂಪತ್ತು, ಆರೋಗ್ಯವೇ ಸರ್ವಸ್ವ, ಆರೋಗ್ಯವೇ ಭಾಗ್ಯ. ಹೀಗೆ ಆರೋಗ್ಯದ ಮಹಿಮೆ ಅಪಾರವಾಗಿದೆ.
ವೀರಮಾರ್ಗ ನ್ಯೂಸ್ : ಏಪ್ರಿಲ್ 7 ವಿಶ್ವ ಆರೋಗ್ಯದ ದಿನ
ಅರೋಗ್ಯವೇ ಸಂಪತ್ತು, ಆರೋಗ್ಯವೇ ಸರ್ವಸ್ವ, ಆರೋಗ್ಯವೇ ಭಾಗ್ಯ. ಹೀಗೆ ಆರೋಗ್ಯದ ಮಹಿಮೆ ಅಪಾರವಾಗಿದೆ. ‘ಸಂಪೂರ್ಣ ಆರೋಗ್ಯ ಎಂದರೆ ಶಾರೀರಿಕ, ಮಾನಸಿಕ, ಸಾಮಾಜಿಕ ಆರೋಗ್ಯವಾಗಿದೆ. ಕೇವಲ ರೋಗಗಳಿಲ್ಲದಿರುವಿಕೆ ಪರಿಪೂರ್ಣ ಆರೋಗ್ಯವಲ್ಲ ಎಂದು ವ್ಯಾಖ್ಯಾನಿಸಿದೆ. ಈ ವರ್ಷ 2026 ರ ವಿಶ್ವ ಆರೋಗ್ಯ ದಿನದ ಧ್ಯೆಯ ‘ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲಿರಿ.’ ಈ ವಿಷಯದ ಅಡಿಯಲ್ಲಿ ವರ್ಷದ ಆಚರಣೆಯು ಜನರು ಪ್ರಾಣಿಗಳು ಸಸ್ಯಗಳು ಮತ್ತು ಗ್ರಹದ ಆರೋಗ್ಯವನ್ನು ರಕ್ಷಿಸಲು ವೈಜ್ಞಾನಿಕ ಸಹಯೋಗ ಶಕ್ತಿಯನ್ನು ಆಚರಿಸುವ ಒಂದು ವರ್ಷವಿಡಿ ಅಭಿಯಾನವನ್ನು ಪ್ರಾರಂಭಿಸುತ್ತದೆ. ಇದರಲ್ಲಿ ವೈಜ್ಞಾನಿಕ ಸಾಧನೆಗಳು ಮತ್ತು ಒಂದು ಆರೋಗ್ಯ ವಿಧಾನದ ಮೇಲೆ ಬಲವಾದ ಗಮನದ ಮೂಲಕ ಪುರಾವೆಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ಬಹುಪಕ್ಷಿಯ ಸಹಕಾರ ಎರಡನ್ನು ಎತ್ತಿ ತೋರಿಸುತ್ತದೆ.
2026 ರ ಅಭಿಯಾನವನ್ನು ಎರಡು ಪ್ರಮುಖ ಜಾಗತಿಕ ಕ್ಷಣಗಳು ಬೆಂಬಲಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಫ್ರಾನ್ಸ ಸರ್ಕಾರವು ಫ್ರೆಂಚ್ ಜಿ 7 ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಒಂದು ಆರೋಗ್ಯ ಶೃಂಗಸಭೆ (ಏಪ್ರಿಲ್7) ಮತ್ತು 80 ಕ್ಕೂ ಹೆಚ್ಚ ದೇಶಗಳಿಂದ ಸುಮಾರು 800 ವೈಜ್ಞಾನಿಕ ಸಂಸ್ಥೆಳನ್ನು ಒಟ್ಟಿಗೂಡಿಸುವ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗ ಕೇಂದ್ರಗಳ ಉದ್ಘಾಟನಾ ಜಾಗತಿಕ ವೇದಿಕೆ (ಏಪ್ರಿಲ್7-9). ಒಟ್ಟಾಗಿ ಈ ಕಾರ್ಯಕ್ರಮಗಳು ವಿಶ್ವಸಂಸ್ಥೆಯ ಸುತ್ತಲು ನಡೆದ ಅತಿದೋಡ್ಡ ವೈಜ್ಞಾನಿಕ ಜಾಲವನ್ನು ರೂಪಿಸುತ್ತವೆ. ಇದು ವಿಜ್ಞಾನ ಚಾಲಿತ ಪಾಲುದಾರಿಕೆಗಳು ಎಲ್ಲರಿಗೂ ಆರೋಗ್ಯಕರ ಸುರಕ್ಷಿತ ಭವಿಷ್ಯವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಒತ್ತಿ ಹೇಳುತ್ತದೆ.
ವಿಶ್ವ ಆರೋಗ್ಯ ದಿನವನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ಸಂಬಂಧಿಸಿದ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಈ ದಿನವನ್ನು ಜಾಗತಿಕ ಆರೋಗ್ಯ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. 1948 ರಲ್ಲಿ ಮೊದಲ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಆರೋಗ್ಯ ಸಭೆಯನ್ನು ನಡೆಸಿತು. ಜುಲೈ 22, 1949 ರಂದು ಮೊದಲ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಯುವಕರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ದಿನಾಂಕವನ್ನು 7 ನೇ ಏಪ್ರಿಲ್ಗೆ ಬದಲಾಯಿಸಲಾಯಿತು. 1950 ರಿಂದ ಜಾರಿಗೆ ಬರುವಂತೆ ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲು ಸಭೆಯು ನಿರ್ಧರಿಸಿತು. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯನ್ನು ಗುರುತಿಸಲು ಮತ್ತು ಪ್ರತಿ ವರ್ಷ ಜಾಗತಿಕ ಆರೋಗ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಲು ಹಾಗೂ ವಿಶ್ವಾದ್ಯಂತ ಗಮನ ಸೆಳೆಯಲು ಈ ದಿನವನ್ನು ಸಂಸ್ಥೆಯು ಒಂದು ಅವಕಾಶವನ್ನಾಗಿ ಪರಿಗಣಿಸುತ್ತದೆ. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ, ಪ್ರ್ರಾದೇಶಿಕ ಮತ್ತು ಸ್ಥಳೀಯ ಕಾರ್ಯಕ್ರಮಗಳನ್ನು ಈ ದಿನವೇ ಆಯೋಜಿಸಲಾಗುತ್ತದೆ. ವಿಶ್ವ ಆರೋಗ್ಯ ದಿನವನ್ನು ವಿವಿಧ ಸರ್ಕಾರಗಳು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ಸರ್ಕಾರೇತರ ಸಂಸ್ಥೆಗಳು ಆಚರಿಸುತ್ತವೆ. ಆಯೋಜಿಸಿದ ಕಾರ್ಯಕ್ರಮಗಳ ವರದಿಯನ್ನು ಗ್ಲೋಬಲ್ ಹೆಲ್ತ್ ಕೌನ್ಸಿಲ್ ಪ್ರಸಾರ ಮಾಡುತ್ತದೆ.
ಅಭಿಯಾನದ ಗುರಿಗಳು
ಈ ಅಭಿಯನವು ಸರ್ಕಾರಗಳು, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು, ಪಾಲುದಾರರು ಮತ್ತು ಸಾರ್ವಜನಿಕರಿಗೆ ಈ ಕೆಳಗಿನವುಗಳನ್ನು ಕರೆಯುತ್ತದೆ.:
ಆರೋಗ್ಯವನ್ನು ರಕ್ಷಿಸಲು ಪುರಾವೆಗಳು, ಸತ್ಯಗಳು ಮುಂತಾದ ವಿಜ್ಞಾನ ಆಧಾರಿತ ಮಾರ್ಗದರ್ಶನದೊಂದಿಗೆ ತೋಡಗಿಸಿಕೊಳ್ಳುವ ಮೂಲಕ ವಿಜ್ಞಾನದೊಂದಿಗೆ ನಿಲ್ಲುವುದು;
ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ವಿಶ್ವಾಸವನ್ನು ಪುನರ್ ನಿರ್ಮಿಸಲು; ಮತ್ತು
ಆರೋಗ್ಯಕರ ಭವಿಷ್ಯಕ್ಕಾಗಿ ವಿಜ್ಞಾನ ನೇತೃತ್ವದ ಪರಿಹಾರಗಳನ್ನು ಬೆಂಬಲಿಸಲು.
ವಿಶ್ವ ಆರೋಗ್ಯ ದಿನವು ವಿಶ್ವ ಕ್ಷಯರೋಗ ದಿನ, ವಿಶ್ವರೋಗ ನಿರೋಧಕ ವಾರ, ವಿಶ್ವ ಮಲೇರಿಯಾ ದಿನ, ವಿಶ್ವ ತಂಬಾಕು ರಹಿತ ದಿನ, ವಿಶ್ವ ಏಡ್ಸ್ ದಿನ, ವಿಶ್ವ ರಕ್ತದಾನಿಗಳ ದಿನ, ವಿಶ್ವ ಚಾಗಸ್ ರೋಗ ದಿನ, ವಿಶ್ವ ರೋಗಿ ಸುರಕ್ಷತಾ ದಿನ, ವಿಶ್ವ ಆ್ಯಂಟಿ ಮೈಕ್ರೊಬಿಯಲ್ ಜಾಗೃತಿ ದಿನ, ಹೆಪಟೈಟಿಸ್ ದಿನ ಈ 11 ರಲ್ಲಿ ಒಂದಾಗಿದೆ.
ಈ ದಿನಕ್ಕೆ ಸಂಬಂಧಿಸಿದ ಪ್ರಸಿದ್ಧ ಆರೋಗ್ಯ ಸೂಕ್ತಿಗಳು :
- ನಿಜವಾದ ಮೌನವು ಮನಸ್ಸಿನ ವಿಶ್ರಾಂತಿಯಾಗಿದೆ. ಆತ್ಮಕ್ಕೆ ನಿದ್ರೆ ಎಂದರೆ ದೇಹದ ಪೋಷಣೆ ಮತ್ತು ಉಲ್ಲಾಸವಾಗಿದೆ – ವಿಲಿಯಂ ಪೆನ್
- ಆರೋಗ್ಯವೇ ನಿಜವಾದ ಸಂಪತ್ತೇ ಹೊರತು ಚಿನ್ನ ಬೆಳ್ಳಿಯ ತುಂಡುಗಳಲ್ಲ – -ಮಹಾತ್ಮ ಗಾಂಧಿ
- ನಿಜವಾದ ಸ್ನೇಹವು ಉತ್ತಮ ಆರೋಗ್ಯದಂತಿರುತ್ತದೆ. ಅದರ ಬೆಲೆ ಕಳೆದುಕೊಂಡಾಗ ಮಾತ್ರ ತಿಳಿಯುತ್ತದೆ – -ಚಾಲ್ರ್ಸ ಕಾಲೇಬ್ ಕೊಲ್ಟನ್.
- ಸಂತೋಷವು ಆರೋಗ್ಯದ ಅತ್ಯುನ್ನತ ರೂಪವಾಗಿದೆ – -ದಲೈಲಾಮಾ.
- ಅನಾರೋಗ್ಯ ಬರುವವರೆಗೂ ಆರೋಗ್ಯಕ್ಕೆ ಬೆಲೆ ಇಲ್ಲ – ಥಾಮಸ್ ಫುಲ್ಲರ್.
- ತೀವ್ರ ಅನಾರೋಗ್ಯದ ಸಮಾಜಕ್ಕೆ ಹೊಂದಿಕೊಳ್ಳುವುದು ಆರೋಗ್ಯದ ಅಳತೆಯಲ್ಲ- ಜಿಡ್ಡು ಕೃಷ್ಣಮೂರ್ತಿ.
- ಜೀವನದುದ್ದಕ್ಕೂ ಉತ್ತಮ ಆರೋಗ್ಯದ ನಿಜವಾದ ರಹಸ್ಯವು ವಾಸ್ತವವಾಗಿ ವಿರುದ್ಧವಾಗಿದೆ. ನಿಮ್ಮ ದೇಹವು ನಿಮ್ಮನ್ನು ನೋಡಿಕೊಳ್ಳಲಿ – ದೀಪಕ ಚೋಪ್ರ
- ದೈಹಿಕ ವ್ಯಾಯಾಮಕ್ಕೆ ಸಮಯವಿಲ್ಲ ಎಂದು ಭಾವಿಸುವವರು ಬೇಗ ಅಥವಾ ನಂತರ ಅನಾರೋಗ್ಯಕ್ಕೆ ಸಮಯವನ್ನು ಕಂಡುಕೊಳ್ಳ ಬೇಕಾಗುತ್ತದೆ – ಎಡ್ವರ್ಡ ಸ್ಟಾನ್ಲಿ.
- ನಾನು ಇಷ್ಟು ದಿನ ಬದುಕುತ್ತೇನೆ ಎಂದು ನನಗೆ ತಿಳಿದಿದ್ದರೆ, ನಾನು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ ಅನ್ನುವುದು ಬೇಡ ಮುನ್ನೆಚ್ಚರಿಕೆ ಇರಲಿ.
- ಆರೋಗ್ಯವೇ ಶ್ರೇಷ್ಠ ಕೊಡುಗೆ, ನೆಮ್ಮದಿಯೇ ಶ್ರೇಷ್ಠ ಸಂಪತ್ತು, ನಿಷ್ಠೆಯೇ
ಉತ್ತಮ ಸಂಬಂಧ – ಬುದ್ಧ
ಧ್ಯಾನ ಮತ್ತು ರಾಜಯೋಗದಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ದಿನಕ್ಕೆ 40 ನಿಮಿಷಗಳ ಕಾಲ ಕಾಲು ನಡುಗೆ, ಲಘುವಾದ ವ್ಯಾಯಾಮ, ಆಸನಗಳು, ಕಪಾಲಭಾತಿ ಅನುಲೋಮ-ವಿಲೋಮ ಮುಂತಾದವುಗಳನ್ನು ನಿಮ್ಮ ಜೀವನಶೈಲಿಯಲ್ಲಿ ಸೇರಿಸಿಕೊಳ್ಳಿ.
8 ಘಂಟೆ ಚೆನ್ನಾಗಿ ನಿದ್ದೆ ಮಾಡಿ.
ಭೋಜನದಲ್ಲಿ 50% ತಾಜಾ ತರಕಾರಿ, ಹಣ್ಣುಗಳ ಸೇವನೆ ಮಾಡಿ. ರಾತ್ರಿಯ ಊಟ 8 ಘಂಟೆ ಒಳಗೆ ಮಾಡಿ.
ಸಕ್ಕರೆ, ಮೈದ, ಪ್ಯಾಕ್ ಮಾಡಲಾದ ಆಹಾರ, ಮಾದಕ ಪದಾರ್ಥ ಮತ್ತು ಪಾನೀಯ, ಮಾಂಸಾಹಾರದ ಸೇವನೆ ಬೇಡ.
ಹೆಚ್ಚು ನೀರು ಅಥವಾ ದ್ರವ ಪದಾರ್ಥಗಳು ಸೇವಿಸಿ.
ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ಥೆಯ ರಾಜಯೋಗ ಶಿಕ್ಷಣ ಹಾಗೂ ಸಂಶೋಧನ ಪ್ರತಿಷ್ಠಾನದ ಆರೋಗ್ಯ ವಿಭಾಗವು ಹಲವು ವರ್ಷಗಳಿಂದ ಅನೇಕ ಚಟುವಟಿಕೆಗಳಲ್ಲ್ಲಿ ಭಾಗವಹಿಸಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ. ಇಲ್ಲಿ ಕಲಿಸುವ ಸಹಜ ರಾಜಯೋಗ ಒಂದು ದಿವ್ಯ ಔಷಧಿಯಾಗಿದೆ. ರಾಜಯೋಗದಿಂದಾಗುವ ಆರೋಗ್ಯದ ಲಾಭಗಳು:
1) ಯೋಗಾವಸ್ಥೆಯಲ್ಲಿ ಶ್ವಾಸೋಚ್ಛ್ವಾಸ ನಿಧಾನವಾಗಿ ನಡೆಯುವುದರಿಂದ ಯೋಗಿಯು ವಿಶ್ರಾಂತಿ ಹಾಗೂ ನೆಮ್ಮದಿಯ ಅನುಭವ ಪಡೆಯುವನು.
2) ಯೋಗಾವಸ್ಥೆಯಲ್ಲ್ಲಿ ಹೃದಯದಲ್ಲಿ ರಕ್ತ ಸಂಚಾರ ನಿಯಮಿತವಾಗಿ ನಿರ್ದಿಷ್ಟವಾಗಿ ಕಡಿಮೆಯಾಗುವುದರಿಂದ ಹೃದಯಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ.
3) ಯೋಗಾವಸ್ಥೆಯಲ್ಲಿ ಯೋಗಿಯ ಶರೀರದಲ್ಲಿ ಸಂಚರಿಸುವ ರಕ್ತದಲ್ಲಿ ಲ್ಯಾಕ್ಟಿಕ್ ಆಮ್ಲದ ಅಂಶವು ಶೀಘ್ರವಾಗಿ ಕೆಳಮಟ್ಟಕ್ಕೆ ಬರುವುದರಿಂದ ಸಂಪೂರ್ಣ ಶಾಂತಿಯ ಅನುಭವವಾಗುವುದಲ್ಲದೇ ಎಲ್ಲಾ ಪ್ರಕಾರದ ಉದ್ವೇಗ ಹಾಗೂ ನಿರುತ್ಸಾಹದಿಂದ ಮುಕ್ತಿ ಲಭಿಸಿ, ನರಮಂಡಲಕ್ಕೆ ಶಕ್ತಿಯು ದೊರೆಯುವುದಲ್ಲದೇ ನರಗಳಿಗೆ ಸಂಬಂಧಿಸಿದ ರೋಗವು ನಿವಾರಣೆಯಾಗುತ್ತದೆ.
4) ಯೋಗಾವಸ್ಥೆಯಲ್ಲಿ ಮಾನಸಿಕ ಉದ್ವೇಗ ದೂರವಾಗುವುದರಿಂದ ಮಾನವನ ತ್ವಚೆಯಲ್ಲಿ ಅಸಾಧಾರಣ ರೋಗ ನಿರೋಧಕಶಕ್ತಿಯು ಪ್ರಫುಲ್ಲಿತವಾಗುವುದರಿಂದ ಯೋಗಿಯು ಉಲ್ಲಾಸಭರಿತನಾಗುವನ.
5) ಹೃದಯ ರೋಗ, ರಕ್ತದೊತ್ತಡ. ಮಾನಸಿಕ ಅಶಾಂತಿ, ಅರೆಹುಚ್ಚು, ಕ್ರೋಧ, ಕಾಮ, ಮಾನಸಿಕ ಭಯದಿಂದ ಉಂಟಾದ ರೋಗಗಳೂ ಸಹ ಯೋಗದಿಂದ ಓಡಿ ಹೋಗುತ್ತವೆ.
6) ಯೋಗ ವಿಜ್ಞಾನವು ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸಿ, ಅವನ ವಿಚಾರಗಳನ್ನು ವ್ಯವಸ್ಥಿತವಾಗಿಡುತ್ತದೆ.
7) ಯೋಗದ ಫಲವಾಗಿ ನಾವು ಗಹನೆ ಶಾಂತಿಯ ಅನುಭವ ಮಾಡುತ್ತೇವೆ, ಆಗ ಕೊರ್ಟಿಕೋಸ್ಟಿರಾಯಿ ಗ್ರಂಥಿಯ ಅಂತಃಸ್ರಾವದ ಪ್ರಮಾಣ ಕಡಿಮೆಯಾಗಿ ಆರೋಗ್ಯಕ್ಕೆ ಅತ್ಯಂತ ಸಹಾಯಕಾರಿಯಾಗುತ್ತದೆ. ಅದು ನಮಗೆ ಪೆಪ್ಟಿಕ್ ಅಲ್ಸರ್, ರಕ್ತದೊತ್ತಡ. ಮಧುಮೇಹದಂತಹ ರೋಗಗಳಿಂದ ದೂರವಿಡುತ್ತದೆ. ಅಲ್ಲದೇ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.
8) ವೈಜ್ಞಾನಿಕವಾಗಿ ಹೇಳುವುದಾದರೆ ಯೋಗಿಯು ಏಕರಸ ಮತ್ತು ಅಂತರ್ಮುಖಿ ಸದಾ ಸುಖಿ ಹಾಗೂ ಹರ್ಷಿತಮುಖಿ ಆಗಿರುವುದರಿಂದ ಅವನ ಮಾನಸಿಕ ಹಾಗೂ ಶಾರೀರಿಕ ಕ್ರಿಯೆಗಳಲ್ಲಿ ಅಸಾಧಾರಣ ಬದಲಾವಣೆಗಳಾಗಿ ನಿರೋಗಿ, ದೀರ್ಘಾಯುವಾಗಿ ತೃಪ್ತಿಮಯ ಜೀವನವನ್ನು ಪಡೆಯುವನು.
9) ದುಃಖ, ರೋಗ, ಅಧೈರ್ಯ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದ ಎಲ್ಲಾ ಮನೋ ರೋಗಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿ, ಶುದ್ಧ ಸಂಕಲ್ಪದಿಂದ ಸದಾ ಇರಲು ಅತಿ ಸುಲಭವಾದ ಏಕೈಕ ಮಾರ್ಗವೇ ಸಹಜ ರಾಜಯೋಗವಾಗಿದೆ.
10) ಯೋಗದಿಂದ ಯೋಗಿಯು ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿ ದ್ವೇಷ, ಜಾತಿ, ಮತ, ಲಿಂಗಭೇದ, ವಯೋಭೇದಗಳನ್ನು ನಿರ್ಮೂಲನೆ ಮಾಡಿ ಪ್ರೇಮ, ದಯೆ, ಕರುಣೆ, ಪವಿತ್ರತೆಯಿಂದ ಕೂಡಿದ ಕಮಲಪುಷ್ಪದಂತೆ ಅನಾಸಕ್ತನಾಗಿ ಇರಬಲ್ಲನು.
11.ರಾಜಯೋಗ ಯೋಗ ನಡಿಗೆ, ಆಹಾರ ಪದ್ಧತಿ, ಜೀವನ ಶೈಲಿ ಮುಂತಾದ ತರಬೇತಿ ಗಳಿಂದ ಅನೇಕ ಹೃದಯದ ಸಂಬಂದಿ ಕಾಯಿಲೆಗಳು ಸಹ ದೂರ ಆಗಿ ದೀರ್ಘಯಸ್ಸು ಪಡೆದು ಅನೇಕರು ಸುಖಿ ಜೀವನ ನಡೆಸುತ್ತಿದ್ದಾರೆ. ತಾವು ಇಂದೇ ನಿಮ್ಮ ಹತ್ತಿರದ ಈಶ್ವರಿಯ ವಿದ್ಯಾಲಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಜನ್ಮಾoತರದವರೆಗೆ ಸಂಪೂರ್ಣ ಸುಖ ಶಾಂತಿ ಆನಂದ ಅರೋಗ್ಯಯುತ ಜೀವನ ಪಡೆದುಕೊಳ್ಳಿ
ಅನೇಕ ವೈರಸಗಳು, ಇನ್ನು ಅನೇಕ ಕಠಿಣ ಕಾಯಿಲೆಗಳ ಕಠಿಣ ಸಮಯದಲ್ಲಿ ಭವರೋಗ ವೈದ್ಯನಾದ ಶಿವ ಪರಮಾತ್ಮನ ರಕ್ಷಣೆ ಬಹಳ ಅವಶ್ಯಕವಾಗಿದೆ. ಆದರಿಂದ ಸರ್ವರ ರಕ್ಷಕ, ಆತ್ಮಿಕ ಸರ್ಜನ್, ಕರುಣಾಮಯಿ ದಯಾಸಾಗರನಾದ ಪರಮಾತ್ಮನ ಕೃಪೆಯು ನಮ್ಮ ಮೇಲೆ ಸದಾ ಇರಲಿ ಹಾಗೂ ಆರೋಗ್ಯದ ಭಾಗ್ಯ ದೊರೆಯಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ.
“ಓಂ ಸರ್ವೇ ಭವಂತು ಸುಖಿನ:
ಸರ್ವೇ ಸಂತು ನಿರಾಮಯ:”
“ಸರ್ವೇ ಭದ್ರಾಣಿ ಪಶ್ಯಂತು ಮಾ
ಕಶ್ಚಿತ ದು:ಖ ಭಾಗ್ಭವೇತ್
ಓಂ ಶಾಂತಿ ಶಾಂತಿ ಶಾಂತಿಹಿ
ಲೇಖನ -ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ಮನೋಬಲ ತರಬೇತುದಾರರು, ಸ್ವಾಮಿ ವಿವೇಕಾನಂದ ರಾಜ್ಯ ರಾಷ್ಟ್ರ ಸದ್ಭಾವನಾ ಪ್ರಶಸ್ತಿ ಪುರಸ್ಕೃತರು, ಪ್ರಕಾಶ ಭವನದ ಚಾಮರಾಜನಗರ
ಫೋನ್ ನಂಬರ್ 9141837082
ಜಯಲಕ್ಷ್ಮಿಪುರಂ ಬ್ರಹ್ಮಾಕುಮಾರಿ ಸೇವಾ ಕೇಂದ್ರದಲ್ಲಿ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ ಮೈಸೂರು- ಅಂತರಾಷ್ಟ್ರೀಯ ಅಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಯಲಕ್ಷ್ಮೀಪುರಂ ಸೇವಾ ಕೇಂದ್ರದಲ್ಲಿ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಸಿ.ಎ.ಶ್ರೀನಿವಾಸ್ ಮೂರ್ತಿಯವರು ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಮಕ್ಕಳಿಗೆ ಗುರುಕುಲ ಶಿಕ್ಷಣ ಪದ್ಧತಿ ಅವಶ್ಯಕ. ಇಂದಿನ ಶಿಕ್ಷಣವು ಮಕ್ಕಳಿಗೆ ನಾಲ್ಕು ಗೋಡೆಯ ಮದ್ಯೆ ಕೂಡಿಹಾಕಿ ಮಾಘ ಸ್ನಾನ ಮಾಡಿಸಿದಂತೆ ಆಗುತ್ತಿದೆ ಎಂದು ವಿಷಾದಿಸಿದರು. ಮೂರು ದಿನಗಳು ನಡೆಯುವ ಬೇಸಿಗೆ ಶಿಬಿರದಲ್ಲಿ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕರಗತ ಮಾಡಿಕೊಳ್ಳುವಂತೆ ಕರೆ ನೀಡಿದರು.
ರಾಜಯೋಗಿನಿ ಬ್ರಹ್ಮಾಕುಮಾರಿ ರಶ್ಮೀಜೀ ಮಾತನಾಡಿ ಮನಸ್ಸಿನ ಏಕಾಗ್ರತೆಗಾಗಿ ಧ್ಯಾನ ಬಹಳ ಅವಶ್ಯಕ ಎಂದರು. ಅದಕ್ಕಾಗಿ ಸಕರಾತ್ಮಕ ಚಿಂತನೆಗಳ ಅಭ್ಯಾಸ ವನ್ನು ತಮ್ಮ ಜೀವನದ ಅಂಗವನ್ನಾಗಿ ಮಾಡಿಕೊಳ್ಳಬೇಕೆಂದರು. ಓಂ ಶಾಂತಿ ನ್ಯೂ ಸರ್ವಿಸ್ನ ಬಿಕೆ ಆರಾಧ್ಯ ಮಾತನಾಡಿ ಇಂದಿನ ಮಕ್ಕಳೇ ನಾಳಿನ ಪ್ರಭುಗಳು. ಅದಕ್ಕಾಗಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಕೇಶಿಯ, ರೂಪ, ಭಾರತಿ, ಮಂಜುಳ, ಚಂದ್ರಕಲಾ, ಪ್ರಜ್ವಲ್, ಧನುಷ್ ಹಾಜರಿದ್ದರು.
ಮೌಂಟ್ ಅಬುವಿನಲ್ಲಿ ರಾಜನೀತಿಜ್ಞರ ಸಮ್ಮೇಳನ- ಶಾಂತಿಪೂರ್ಣ ಸಮಾಜಕ್ಕಾಗಿ ರಾಜನೀತಿಯಲ್ಲಿ ಆಧ್ಯಾತ್ಮಿಕತೆ ಚಾಮರಾಜನಗರ – ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬೂ ರಾಜಸ್ಥಾನದಲ್ಲಿರುವ ಜ್ಞಾನ ಸರೋವರ ಪರಿಸರದ ಮಡಿಲಿನಲ್ಲಿ ಜುಲೈ 10 ರಿಂದ 13 ರವರೆಗೆ ರಾಜನೀತಿಜ್ಞರ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ರಾಜಕಾರಣಿಗಳ ರಾಷ್ಟ್ರೀಯ ಸೇವಾ ವಿಭಾಗದ ಸದಸ್ಯರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಶಾಂತಿ ಪೂರ್ಣ ಸಮಾಜಕ್ಕಾಗಿ ರಾಜನೀತಿಯಲ್ಲಿ ಅಧ್ಯಾತ್ಮಿಕತೆ” ಎಂಬ ಚರ್ಚಾ ವಿಷಯವಾಗಿರುತ್ತದೆ. ಈ ಕಾರ್ಯಾಗಾರದಲ್ಲಿ ನಗರ ಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್,ವಿಧಾನಸಭೆ, ಸಂಸತ್ ಲೋಕಸಭೆ, ಅಧ್ಯಕ್ಷರುಗಳು, ಸದಸ್ಯರುಗಳು ಎಂಎಲ್ಎಗಳು, ಎಂಪಿಗಳು ರಾಜಕೀಯ ತಜ್ಞರು ಗಳು,ಪದಾಧಿಕಾರಿಗಳು ಭಾಗವಹಿಸಬಹುದಾಗಿದೆ.ಹೆಚ್ಚಿನ ವಿವರಗಳಿಗೆ 7899820430,7483520495, 9880283752,7975785643ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.