ನಾರಾಯಣಗೌಡರು ತಮ್ಮ SSLC,ಅಂಕಪಟ್ಟಿ ಬಿಡುಗಡೆ ಮಾಡಿ.

ನಾರಾಯಣಗೌಡರು ತಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಬಿಡುಗಡೆ ಮಾಡಲಿ ಸಾಹಿತಿ ಜೆ ಎಮ್ ರಾಜಶೇಖರ ಸವಾಲು

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ನಾನು 10ನೇ ತರಗತಿ ಪಾಸ್ ಆದಾಗ ಕನ್ನಡ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿತಿದ್ದೇನೆ. ಎಸ್ ಎಸ್ ಎಲ್ ಸಿ ಪಾಸ್ ಆದಾಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು ಎಂದು ಸಾಹಿತಿ ಮಾಹಿತಿ ಹಕ್ಕು ತಜ್ಞ ಜೆ ಎಮ್ ರಾಜಶೇಖರ ತಮ್ಮ 10ನೇ ತರಗತಿ ಅಂಕಪಟ್ಟಿ ಬಹಿರಂಗಗೊಳಿಸುವ ಮೂಲಕ ಹಿಂದಿ ಕಡ್ಡಾಯ ವಿರೋಧಿ ವ್ಯಕ್ತಿತ್ವಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಟಿ ಎ ನಾರಾಯಣಗೌಡ ಅವರು ಕನ್ನಡಪರ ಹೋರಾಟ ಮಾಡುವುದು ಸ್ವಾಗತ ಅರ್ಹ… ಅಂತೆಯೇ ಕನ್ನಡದ ಸಂಘಟನೆ ಹೆಸರಿನಲ್ಲಿ ರಾಜಕೀಯ ಪ್ರವೇಶಿಸುವ ಕನಸು ಕಾಣುತ್ತಿರುವುದು ಸರಿಯಲ್ಲ ಎಂದು ನೇರವಾಗಿ ಆಕ್ಷೇಪಣೆ ಮಾಡಿದ್ದಾರೆ. ಕನ್ನಡ ಇಂಗ್ಲಿಷ್ ಹಿಂದಿ ಸೇರಿದಂತೆ ವಿವಿಧ ಭಾಷೆಗಳನ್ನು ಕಲಿಯಲು ಕನ್ನಡಿಗರಿಗೆ ಅವಕಾಶ ಕಲ್ಪಿಸಿಕೊಡಬೇಕು ಕನ್ನಡವನ್ನು ಪ್ರಧಾನವಾಗಿ ಇಟ್ಟುಕೊಳ್ಳಬೇಕೆಂದು ಹೇಳುವುದು ಇಂದಿನ ಜಾಗತೀಕರಣದ ವೇಗದ ಓಟದ ಬದುಕಿನಲ್ಲಿ ಅತ್ಯವಶ್ಯವಾಗಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಪರ ಸಂಘಟನೆಗಳು ಕನ್ನಡ ನಾಡನ್ನು ಕನ್ನಡಿಗರ ರಕ್ಷಣೆಗೆ ಬೇಕಾದಂತಹ ಚಟುವಟಿಕೆಗಳನ್ನು ಮಾಡಬೇಕು. ಜೊತೆಗೆ ಭಾಷಾ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಲು ಬೇಕಾದಂತಹ ವಾತಾವರಣವನ್ನು ಸೃಷ್ಟಿಸಬೇಕು ಎಂಬುದು ತಮ್ಮ ನಿಲುವು ಎಂದು ರಾಜಶೇಖರವರು ಹೇಳಿದ್ದಾರೆ. ಪಿ ಎ ನಾರಾಯಣಗೌಡ ಅವರು ತಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡ ಹೊರತುಪಡಿಸಿ ಇಂಗ್ಲಿಷ್ ಹಿಂದಿ ಮುಂತಾದ ಇತರೆ ಭಾಷೆಗಳನ್ನು ಕನ್ನಡಿಗರು ಕಲಿಯುವುದರಿಂದ ಕನ್ನಡಕ್ಕೆ ಅಪಾಯ ಎಂದು ಯಾವ ವೈಜ್ಞಾನಿಕ ಆಧಾರದಲ್ಲಿ ಕನ್ನಡ ಪರ ಸಂಘಟನೆಗಳವರು ಹೇಳುತ್ತಾರೆ ಎಂದು ಪ್ರಶ್ನಿಸಲಾಗಿದೆ.

ಕನ್ನಡ ಪರ ಸಂಘಟನೆಗಳು ರಾಜಕೀಯ ಪಕ್ಷಗಳೊಂದಿಗೆ ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಭಾಷೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಾಹಿತಿ ಮಾಹಿತಿ ಹಕ್ಕು ತಜ್ಞ ಜೆ ಎಮ್ ರಾಜಶೇಖರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಇಂಗ್ಲಿಷ್ ಹಿಂದಿ ಸೇರಿದಂತೆ ಸುತ್ತ ಮುತ್ತಲ ರಾಜ್ಯಗಳ ಭಾರತ ದೇಶದ ಎಲ್ಲಾ ಭಾಷೆಗಳನ್ನು ಮಕ್ಕಳು ಕಲಿಯಬೇಕು. ಬೇರೆ ಬೇರೆ ಭಾಷೆಗಳಲ್ಲಿರುವ ಸತ್ವವನ್ನು ಕನ್ನಡಕ್ಕೆ ಕನ್ನಡದ ಘನತೆಯ ಸತ್ವವನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಿಕೊಳ್ಳುವ ಪರಸ್ಪರ ಕೆಲಸವಾಗಬೇಕಾಗಿದೆ.
ಐವತ್ತು ವರ್ಷಗಳ ಹಿಂದೆ ನಾನು ನನ್ನ ಸಮಕಾಲೀನರು ಕನ್ನಡ ಇಂಗ್ಲಿಷ್ ಹಿಂದಿ ಭಾಷೆಗಳನ್ನು ಕಡ್ಡಾಯವಾಗಿ ಕಲಿತಿದ್ದೇವೆ. ಇಂದಿನ ಮಕ್ಕಳಿಗೆ ಕನ್ನಡವೂ ಬರುವುದಿಲ್ಲ ಹಿಂದಿ ಬರುವುದಿಲ್ಲ ಕೇವಲ ಇಂಗ್ಲೀಷಿನ ಒತ್ತಡಕ್ಕೆ ಜೀವನೋತ್ಸಾಹ ಕಳೆದುಕೊಂಡು ಕುಳಿತಿದ್ದಾರೆ.

ಬೇರೆ ರಾಜ್ಯಗಳ ಮಂದಿ ಕರ್ನಾಟಕ ರಾಜ್ಯದಲ್ಲಿ ಅವರದೇ ಭಾಷೆ ಮಾತನಾಡಿಕೊಂಡು ಬಿಜಿನೆಸ್ ಮಾಡುತ್ತಿದ್ದಾರೆ. ಕೇವಲ ತಮಿಳುನಾಡಿಗೆ ಹೋಗಿ ಕನ್ನಡಿಗರು ಎಷ್ಟು ಜನ ಬ್ಯುಸಿನೆಸ್ ಮಾಡುತ್ತಿದ್ದಾರೆ ಲೆಕ್ಕ ಇದ್ದರೆ ಬಹಿರಂಗ ಮಾಡಿ ನಾರಾಯಣಗೌಡರೆ. ಕನ್ನಡವನ್ನು ಇಟ್ಟುಕೊಂಡು ಬಿಜಿನೆಸ್ ಮಾಡುವುದು ಸರಿಯಲ್ಲ. ಕನ್ನಡದ ಬಗ್ಗೆ ಅಭಿಮಾನ ಇರಬೇಕು ಪ್ರೀತಿ ಇರಬೇಕು ಅಂತೆಯೇ ಬೇರೆ ಭಾಷೆಗಳನ್ನು ಬದುಕಿಗಾಗಿ ಕಲಿಯಲೇಬೇಕು. ಭಾಷೆಯ ಕುರಿತು ರಾಜಕೀಯ ಮಾಡಿಕೊಂಡು ಸಂಘಟನೆಯನ್ನು ಉದ್ಧಾರ ಮಾಡಿಕೊಳ್ಳುತ್ತೇನೆ ಎಂದರೆ ಅದರಿಂದ ಆಗುವ ನಷ್ಟ ನಮ್ಮ ಮಕ್ಕಳಿಗೆ.

Oplus_131072

ತಾವು ಕರ್ನಾಟಕ ಸರ್ಕಾರದಿಂದ ಕಳೆದ 20 ವರ್ಷಗಳಲ್ಲಿ ಪಡೆದುಕೊಂಡಿರುವ ಅನುದಾನದ ವಿವರವನ್ನು ದಯವಿಟ್ಟು ಬಹಿರಂಗ ಮಾಡಿ. ನನಗೆ ಗೊತ್ತು ನಿಮ್ಮ ಪರವಾಗಿ ನಿಮ್ಮ ಸಂಘಟನೆಯ ಸದಸ್ಯರ ಜೊತೆಗಿದ್ದಾರೆ ಎಂದು. ಅವರೆಲ್ಲರೂ ಎಷ್ಟು ಅನುದಾನವನ್ನು ಸದಸ್ಯತ್ವ ಶುಲ್ಕವಾಗಿ ಪಾವತಿಸಿದ್ದಾರೆ. ಕನ್ನಡಿಗರಿಗೆ ಬದುಕು ಕಟ್ಟಿಕೊಳ್ಳುವ ಸವಾಲು ಇದ್ದರೆ ಕನ್ನಡದ ಹೆಸರಿನಲ್ಲಿ ನೀವು ಬದುಕು ಕಟ್ಟಿಕೊಂಡಿದ್ದೀರಿ ಎಂಬುದು ನಿಮಗೆ ನೆನಪಿರಲಿ ಇದು ಸತ್ಯ ಕೂಡ ಹೌದು.

ಭಾಷೆ ವ್ಯಕ್ತಿಯ ವ್ಯಕ್ತಿತ್ವವನ್ನು ವಿಶಾಲ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಯಾವ ಭಾಷೆಯನ್ನು ನಮ್ಮ ಮಕ್ಕಳು ಕಲಿಯಬೇಕು ಎಂಬುದನ್ನು ನಿರ್ಧಾರ ಮಾಡುವ ಅಧಿಕಾರ ಹಕ್ಕು ಇರುವುದು ಪಾಲಕರಿಗೆ ಮಾತ್ರ. ಸಂಘಟನೆಯವರಿಗಲ್ಲ. ರಾಜಕೀಯ ಹಿತಾಸಕ್ತಿಗಾಗಿ ನಿಮ್ಮ ಹೋರಾಟಗಳನ್ನು ಕನ್ನಡದ ಹೆಸರು ಬಳಸಿಕೊಳ್ಳುವುದು ಸರಿಯಲ್ಲ. ನೀವು ಬಡವರ ಮಕ್ಕಳಿಗೆ ಏನು ಮಾಡಿದ್ದೀರಿ. ನಿಮ್ಮ ಸಂಘಟನೆ ಹೆಸರಿನಲ್ಲಿ ಕನ್ನಡದ ಶಾಲೆಗಳು ರಾಜ್ಯದಾದ್ಯಂತ ಎಷ್ಟು ಇವೆ ಹಾಗಿದ್ದರೆ. ಹಿಂದಿಯನ್ನು ವಿರೋಧಿಸುವ ನೀವು ಇಂಗ್ಲೀಷ್ ಏಕೆ ವಿರೋಧಿಸುವುದಿಲ್ಲ. ರಾಜಕೀಯ ಕಾರಣ ಅಲ್ಲವೇ?