ಪವರ್ ಸ್ಟಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ಪುನೀತ್ ರಾಜಕುಮಾರ ಸರ್ಕಲ್ ನಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಮಧ್ಯಸ್ಥಳದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ನಿತ್ಯಾನಂದ ಜಿ ಕುಂದಾಪುರ ನೇತೃತ್ವದಲ್ಲಿ ಆಚರಿಸಲಾಯಿತು .

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾದವ್ ಪುನೀತ್ ರಾಜಕುಮಾರ್ ತಮ್ಮ ಜೀವನದಲ್ಲಿ ಅನೇಕ ಸೇವೆಗಳನ್ನು ಮಾಡಿ ಸಾಮಾಜಿಕ ಕಾರ್ಯಗಳು ಇವತ್ತಿಗೂ ನೆನಪಿನಲ್ಲಿಡುವ ಕಾರ್ಯ ಆಗಿದೆ ಎಂದು ತಿಳಿಸಿದರು

ನಂತರ ಸಂಸ್ಥಾಪಕ ಅಧ್ಯಕ್ಷರಾದ ನಿತ್ಯಾನಂದ ಜಿ ಕುಂದಾಪುರ ಅವರು ಮಾತನಾಡಿ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರಪತಿ ಪ್ರಶಸ್ತಿಗಳು ಗಳಿಸಿಕೊಂಡು ತಂದೆಯ ಹಾದಿಯಲ್ಲಿ ಮಗನು ಕೂಡ ಅತಿ ಹೆಚ್ಚು ಸಾಮಾಜಿಕ ಸೇವೆ ಮಾಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಕರ್ನಾಟಕ ಸರ್ಕಾರವು ಯಾವುದೇ ಜಾಹಿರಾತು ನೀಡಿದರು ಕೂಡ ಒಂದು ರೂಪಾಯಿ ದೇಣಿಗೆ ಅಥವಾ ಹಣವನ್ನು ಪಡೆಯದೆ ಉಚಿತವಾಗಿ ಜಾಹಿರಾತುಗಳು ನಡೆಯುತ್ತಿರುವ ಏಕೈಕ ವ್ಯಕ್ತಿ ಎಂದರೆ ಅದು ಪುನೀತರಾಜಕುಮಾರ ಅವರು ಮೈಸೂರಿನಲ್ಲಿ ಮಹಿಳೆಯರಿಗೋಸ್ಕರ ಸುಮಾರು 40 ವರ್ಷಗಳಿಂದ ಮಹಿಳೆಯರಿಗೆ ಉಚಿತವಾಗಿ ತರಬೇತಿಗಳನ್ನು ಕೊಡುತ್ತಿರುವದು ಇವತ್ತಿಗೂ ಕೂಡ ಮಾದರಿಯಾಗಿದೆ ಈ ರೀತಿ ಹತ್ತು ಹಲವಾರು ಕಾರ್ಯಗಳು ಪುನೀತ್ ರಾಜಕುಮಾರ್ ಅವರು ಮಾಡುತ್ತಿರುವುದು ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ ಈ ದಿವಸ ಕನ್ನಡ ತಾಯಿ ಭುವನೇಶ್ವರಿ ದೇವಿಯ ಕನ್ನಡ ಬಾವುಟ ಆರಿಸುವದರ ಮುಖಾಂತರ 51ನೇ ವರ್ಷದ ಹುಟ್ಟುಹಬ್ಬವನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳೊಂದಿಗೆ ಆಚರಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಕರಾವಳಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಜಯರಾಮ ಶೆಟ್ಟಿ , ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷರಾದ ಶಿವಣ್ಣ ಬಣಕಾರ್ ಹಾವೇರಿ ಜಿಲ್ಲಾ ಗೌರವ ಅಧ್ಯಕ್ಷರಾದ ಕೊಟ್ರೇಶಪ್ಪ ಎಮ್ಮಿ ತಾಲೂಕ ಅಧ್ಯಕ್ಷರಾದ ಚಂದ್ರಪ್ಪ ಬಣಕಾರ್ ಹಾವೇರಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರಾದ ಪರಶುರಾಮ ಕುರುವತ್ತಿ ಹಾವೇರಿ ಜಿಲ್ಲಾ ಸಹ ಕಾರ್ಯದರ್ಶಿಯಾದ ಶಂಕರ ಹಳ್ಳಪ್ಪನವರ ಆನಂದ್ ಲಂಬಾಣಿ ಭಾಷಾ ಹಂಪಪಟ್ಟಣ ಗೋಪಿ ಕುಂದಾಪುರ ರಿಯಾಜ್ ದೊಡ್ಮನಿ ನಾಗರಾಜ್ ಯೊಳಕುರಿ ಕೃಷ್ಣ ವೇಶಗಾರೆ ನಿಂಗಪ್ಪ ಬೀರಣ್ಣನವರ ಮತ್ತಿತರರು ಉಪಸ್ಥಿತರಿದ್ದರು