ತತ್ವ-ಸಂದೇಶಗಳನ್ನು ಜಗಕೆ ನೀಡಿದ ಶ್ರೀ ರೇಣುಕರು :

ತತ್ವ, ಸಂದೇಶಗಳನ್ನು ಜಗಕೆ ನೀಡಿದ ಶ್ರೀ ರೇಣುಕರು : ರುದ್ರಮುನಿ ಹಿರೇಮಠ

ವೀರಮಾರ್ಗ ನ್ಯೂಸ್ : ಹಾವೇರಿ : ಜಗದ್ಗುರು ರೇಣುಕಾಚಾರ್ಯರ ತತ್ವಗಳಾದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ನೀಡಿ ಮಾನವರ ಎಲ್ಲರೂ ಒಂದು ಎಂಬ ಭಾವನೆಯನ್ನು ಅಂದಿನ ಕಾಲದಲ್ಲಿಯೆ ರೇಣುಕರು ಹೇಳಿಕೊಟ್ಟಿದ್ದಾರೆ ಎಂದು ಬೇಡ ಜಂಗಮ ಸಮಾಜದ ಸವಣೂರ ತಾಲೂಕು ಕಾರ್ಯದರ್ಶಿ, ರುದ್ರಮುನಿ ಹಿರೇಮಠ ಹೇಳಿದರು.

ತಾಲೂಕಿನ ಯಲವಿಗಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಜಗದ್ಗುರು ಆದಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ರೇಣುಕಾಚಾರ್ಯ ಜಯಂತೋತ್ಸವ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.

ಮಾನವ ಕುಲ ಒಂದೆ ಸಮಾಜದಲ್ಲಿ ಎನ್ನುವಂತ ಸಂದೇಶವನ್ನು ರೇಣುಕಾಚಾರ್ಯ ಅಂದಿನ ಕಾಲದಲ್ಲಿ ಶಾಂತಿಯನ್ನು ಕೋರಿದ್ದಾರೆ ಅಂತಹ ಮಹಾಮಾನವತಾದಿಗಳನ್ನು ಸ್ಮರಿಸುವಂತ ಸುದಿನವಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಹಿರೇಮಠ, ಶಿವಲಿಂಗಯ್ಯ ಮರಲಿಂಗಯ್ಯನವರಮಠ, ಬಸವಣ್ಣಯ್ಯ ಬರಗುಂಡಿಮಠ, ಪಂಚಯ್ಯ ಬರಗುಂಡಿಮಠ, ಶಂಭು ಕಂಬಾಳಿಮಠ, ಸಿದ್ದಯ್ಯ ಹಿರೇಮಠ, ಮಹಾಂತಯ್ಯ ಹರ್ಲಾಪುರಮಠ, ನಿಂಗನಗೌಡ್ರು ” ಹೊಸಮನಿ, ಮಣ್ಣಣ್ಣವರ, ಶೇಖರ್ ಲಮಾಣ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಎಸ್.ಎಫ್. ಪಾಟೀಲ ಮಂಜುನಾಥ ಮಲ್ಲೂರ, ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.