ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆ

ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆ
ವೀರಮಾರ್ಗ ನ್ಯೂಸ್ ಗದಗ :
ನರಗುಂದ ಪುರಸಭೆ ವ್ಯಾಪ್ತಿಯ ಆಸ್ತಿಗಳ ಮಾಲೀಕರುಗಳಿಗೆ / ಅನುಭೋಗದಾರರಿಗೆ ತಿಳಿಸುವುದೇನೆಂದರೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ಸುತ್ತೋಲೆಯಂತೆ 2025-26 ನೇ ಸಾಲಿಗೆ ಈ ಕೆಳಗಿನಂತೆ ಆಸ್ತಿ ತೆರಿಗೆ ದರಗಳನ್ನು ಖಾಲಿ ನಿವೇಶನ-ಶೇ 3, ವಸತಿ ಕಟ್ಟಡಗಳು-ಶೇ 3, ವಾಣಿಜ್ಯ & ಕೈಗಾರಿಕೆ ಕಟ್ಟಡಗಳು-ಶೇ.4 ರಂತೆ ಪರಿಷ್ಕರಣೆ ಮಾಡಿದೆ.

ದಿನಾಂಕ : 01-04-2025 ರಿಂದ 30-04-2025 ವರೆಗೆ ಶೇ.5 ರಿಯಾಯಿತಿ, ದಂಡ ರಹಿತ ಪಾವತಿ ದಿನಾಂಕ : 01-05-2025 ರಿಂದ 30-06-2025ವರೆಗೆ, ದಿನಾಂಕ : 01-07-2025ರಿಂದ ಆಸ್ತಿ ತೆರಿಗೆ ಮೇಲೆ ಪ್ರತಿ ತಿಂಗಳು ಶೇ.೨ ರಷ್ಟು ವಿಧಿಸಲಾಗುವುದು.
ಸಾರ್ವಜನಿಕರು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿ ನರಗುಂದ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ನರಗುಂದ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *