ಮದುವೆ ಹೆಸರಿನಲ್ಲಿ ಯುವಕನಿಗೆ ಮಹಾಮೋಸ.

ಮಗಳ ಮದುವೆ ಮಾಡಿಸಿ, ಆಕೆಯನ್ನೇ ಮತ್ತೊಂದು ಸರಿ ಮದುವೆ ಆದ ಚಿಕ್ಕಪ್ಪ…!
ರಾಣೆಬೆನ್ನೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮೋಸ ಹೋದ ಯುವಕನಿಂದ 9 ಜನರ ಮೇಲೆ ಕೇಸ್.

ಹಾವೇರಿ ಜಿಲ್ಲಾ ರಾಣೇಬೆನ್ನೂರ ನಗರ :- ಮಗಳು… ಮಗಳು… ಎಂದು ಕರೆಯುತ್ತಲೇ ಆಕೆಯ ಮದುವೆ ಮಾಡಿಸಿ, ಆಕೆಯ ಬದುಕಿಗೆ ಹೊಸ ದಾರಿ ತೋರಿಸಿದ್ದ ಚಿಕ್ಕಪ್ಪನೇ ಕೊನೆಗೆ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ, ಮದುವೆಯನ್ನೂ ಮಾಡಿಕೊಂಡಿದ್ದಾನೆ…! ಇದು ಅಚ್ಚರಿ ಎನಿಸಿದರೂ ಕಹಿ ಸತ್ಯ.
ಮೋಸ ಹೋಗಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಸೈಕಲ್ಗಾರ ಓಣಿಯ ದಾದಾಪೀರ್ ಅನ್ಸರ್ಅಲಿ ಮುಲ್ಲಾ ಎಂಬುವರು ನ್ಯಾಯಾಕ್ಕಾಗಿ ಪತ್ನಿ ಹಾಗೂ ಆಕೆಯೊಂದಿಗೆ ಸಂಬಂಧ ಹೊಂದಿರುವ ಚಿಕ್ಕಪ್ಪ ಜಾಕೀರ್ ಮತ್ತು ಇದಕ್ಕೆ ಸಹಕರಿಸಿದ 9 ಜನರ ವಿರುದ್ಧ ರಾಣೆಬೆನ್ನೂರು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಕೋಟ್…
ದಾದಾಪೀರ್ನಿಗೆ ಆತನ ಪತ್ನಿ ಮತ್ತು ಸಂಬಂಧದಲ್ಲಿ ಚಿಕ್ಕಪ್ಪನಾದ ಜಾಕೀರ್ ಎಂಬುವನು ಸೇರಿ ಮೋಸ ಮಾಡಿದ್ದಾರೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿ 9 ಜನರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇವೆ.


ನಾಗರಾಜ ಕುಡುಪಲಿ, ದಾದಾಪೀರ್ ಪರ ವಕೀಲರು, ರಾಣೆಬೆನ್ನೂರು.