ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಜೈ ಆಂಜನೇಯ ಗ್ರಾಮ ಸಮಿತಿ ಹುಲಿಕಟ್ಟಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಸಂಘಟನೆಯ ವಾರ್ಷಿಕೋತ್ಸವ ಸಮಾರಂಭವನ್ನು ಸಂಘಟನೆಯ ಜಿಲ್ಲಾ ಅಧ್ಯಕ್ಷರು ರಾಣೇಬೆನ್ನೂರು ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಘಟಕದ ಅಧ್ಯಕ್ಷರು ಗ್ರಾಮದ ಗುರುಗಳ ನೇತೃತ್ವದಲ್ಲಿ ಕಾರ್ಮಿಕರೊಂದಿಗೆ ವಿಶ್ವ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಈ ಒಂದು ಕಾರ್ಮಿಕರ ದಿನಾಚರಣೆಯ ನಿರೂಪಣೆಯನ್ನು ಜಿಲ್ಲಾ ಖಜಾಂಚಿ ಚಂದ್ರಪ್ಪ ಬಣಕಾರ ಅವರು ಯಶಸ್ವಿಯಾಗಿ ನೆರವೇರಿಸಿದರು
ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಭೀಮಪ್ಪ ಕುಡಪಲಿ ಮಾತನಾಡಿ ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ಮಾತಿನಂತೆ ದುಡಿಮೆಯನ್ನೇ ಬದುಕನ್ನಾಗಿಸಿಕೊಂಡ ಅಸಂಖ್ಯಾತ ಜೀವಗಳು ನಮ್ಮ ನಡುವೆ ಇವೆ. ಅವರ ಬೆವರಿನ ಹನಿಗಳಿಗೆ ತಕ್ಕ ಪ್ರತಿಫಲ ದೊರಕುವಂತಾಗಬೇಕು ಎನ್ನುವುದು ನಮ್ಮ ಆಶಯ ಪ್ರತಿಯೊಬ್ಬ ಕಾರ್ಮಿಕರು ಸರ್ಕಾರದಿಂದ ಬರುವ ಸೌಲಭ್ಯ ಪಡೆದುಕೊಳ್ಳುವಂತವರಾಗಿ ಎಂದು ಕಾರ್ಮಿಕರ ದಿನಾಚರಣೆಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.
ಜಿಲ್ಲಾ ಅಧ್ಯಕ್ಷರು ಮರಡೆಪ್ಪ ಚಳಗೇರಿ ಮಾತನಾಡಿ ದುಡಿಯುವ ಕೈಗಳಿಗೆ ಯೋಗ್ಯ ವೇತನ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ. ಕಾರ್ಮಿಕರ ಕೆಲಸದ ಯೋಜನೆಯಲ್ಲಿ ಗಂಡು-ಹೆಣ್ಣು, ವೃದ್ಧರು ಎಂಬ ಭೇದ-ಭಾವಗಳಿಲ್ಲದೆ ಎಲ್ಲಾ ಕಾರ್ಮಿಕರಿಗೂ ಸಮನಾಗಿ ಸೌಲಭ್ಯಗಳು ನೀಡುತ್ತಿರುವುದು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದೆ. ಇದು ಎಲ್ಲ ವಲಯಗಳಿಗೂ ವಿಸ್ತರಣೆಯಾಗಬೇಕು, ಕಾರ್ಮಿಕ ಬಂಧುಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಳ್ಳುವಂತಾಗಬೇಕು ಎಂದು ಆಶಿಸುತ್ತೇನೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಮುದೇನೂರು ಮಾತನಾಡಿ ನಮ್ಮ ಕಾರ್ಮಿಕರ ನಿಜವಾದ ಶಕ್ತಿ- ಕಾರ್ಮಿಕರ ಪರಿಶ್ರಮ, ನಿಷ್ಠೆ ಮತ್ತು ತ್ಯಾಗ. ಅವರ ಕೈಗಳ ಶ್ರಮದಿಂದಲೇ ದೇಶದ ಪ್ರಗತಿ ಸಾಧ್ಯವಾಗಿದೆ. ಇಂದು ಕಾರ್ಮಿಕರ ಹಕ್ಕು, ಗೌರವ ಮತ್ತು ಸಾಧನೆಗಳನ್ನು ಸ್ಮರಿಸುವ ದಿನ. ಅವರ ಪರಿಶ್ರಮಕ್ಕೆ ನಮಸ್ಕಾರ ಸಲ್ಲಿಸಿ, ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಹೆಜ್ಜೆ ಹಾಕೋಣ ಎಂದು ತಿಳಿಸಿದರು
ನಂತರ ಸಂಘದ ಸದಸ್ಯರು ಕರಿಯಪ್ಪ ಕೋಲಕಾರ ಕೂಲಿ ಕಾರ್ಮಿಕನ ಮಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬೀರಪ್ಪ ಕೋಲಕಾರ ತಾಲೂಕಿಗೆ ಪ್ರಥಮ ಸ್ಥಾನದ ಸಾಧನೆಗೆ ಮೆಚ್ಚಿ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿ ಶುಭ ಕೋರಿ ಅಭಿನಂದನೆಗಳನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷರು ಮಲ್ಲಿಕಾರ್ಜುನಯ್ಯ ಹನಗೋಡಿಮಠ ಜಿಲ್ಲಾ ಉಪಾಧ್ಯಕ್ಷರು ಆನಂದ ಲಮಾಣಿ ಚಿದಾನಂದ ಮಾಗೋಡ ಗ್ರಾಮ ಘಟಕದ ಅಧ್ಯಕ್ಷರಾದ ಕರಿಯಪ್ಪ ಮಸಲಾಡದ ಈರಯ್ಯ ಹನಗೋಡಿಮಠ ಅಣ್ಣಯ್ಯ ಹನಗೋಡಿಮಠ ಜೀವನಗೌಡ ದ್ಯಾವನಗೌಡ್ರು ರವಿ ಮುರುಡಪ್ಪನವರ ಶೇಕಪ್ಪ ಕಜ್ಜರಿ ಬಸವರಾಜ ಗೊಲ್ಲರ ವಿನಾಯಕ ತುವಾರ್ ರೇವಣಸಿದ್ದನಗೌಡ ಪಾಟೀಲ್ ಕರಿಯಪ್ಪ ಕೋಲಕಾರ ರಾಜಪ್ಪ ಕಂಬಳಿ ಕುಬೇರಪ್ಪ ಕೋಲ್ಕಾರ್ ದಿಳ್ಳೇಪ್ಪ ಕೋಲ್ಕಾರ್ ನವೀನ ಸಿರಿಗೇರಿ ಶೇಖಮ್ಮ ಕೆಂಚನಗೌಡ್ರು ಗೀತಾ ಕೋಲ್ಕಾರ್ ಕವಿತಾ ಬಣಕಾರ್ ಗೀತಾ ಬಣಕಾರ್ ನಾಗಮ್ಮ ಕೋಲ್ಕಾರ್ ಮಂಜವ್ವ ಹೊಸಳ್ಳಿ ನೇತ್ರಾ ಕಜ್ಜರಿ ಜಯಮ್ಮ ಕೋಲಕಾರ ಯಲ್ಲಮ್ಮ ದೋಣಗರ ದುರುಗಪ್ಪ ಮಸಲಾಡದ ಮಲ್ಲಿಕಾರ್ಜುನ್ ಮಡಿವಾಳರ ಭೀಮಪ್ಪ ಹೊಸಳ್ಳಿ ಸೋಮಪ್ಪ ಮೆಡ್ಲೇರಿ ಇನ್ನೂ ಹಲವಾರು ಕಾರ್ಮಿಕರ ಮತ್ತಿತರರು ಉಪಸ್ಥಿತರಿದ್ದರು.