ಮಣ್ಣುಜೀವಿಗಳು,ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ.

ಸಾಮಾನ್ಯವಾಗಿ ” ಮಣ್ಣುಜೀವಿಗಳು ” ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ.

ವೀರಮಾರ್ಗ ನ್ಯೂಸ್ : ಸಾಮಾನ್ಯವಾಗಿ ” ಮಣ್ಣುಜೀವಿಗಳು ” ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ.

ವಾಸ್ತವವಾಗಿ, ಇದರೊಂದಿಗೆ, ಇಲಿ – ಹೆಗ್ಗಣಗಳಿಂದ ಹಿಡಿದು ಕಣ್ಣಿಗೆ ಕಾಣುವ ಚಿಕ್ಕಪುಟ್ಟ ಇರುವೆ – ಶತಪಾದಿ – ಸಹಸ್ರಪಾದಿ ಇತ್ಯಾದಿಗಳೊಂದಿಗೆ ಬರಿಗಣ್ಣಿಗೆ ಕಾಣದೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ಗೋಚರಿಸುವ ಬ್ಯಾಕ್ಟೀರಿಯಾ – ಘಂಗೈ ಹಾಗೂ ಪ್ರೋಟೋಝೋವಾ ಇತ್ಯಾದಿ ಜೀವಿಗಳೂ ಸಹ ಉತ್ತಮವಾದ ಫಲವತ್ತು ಮಣ್ಣಲ್ಲಿರುತ್ತವೆ.

ಇಂತಹ ಸಣ್ಣಪುಟ್ಟ ಜೀವಿಗಳು ಇರದೇಹೋಗಿದ್ದಲ್ಲಿ, ಮಣ್ಣೇ ಇರುತ್ತಿರಲಿಲ್ಲವೇನೋ.

ಈ ಜೀವಿಗಳೆಲ್ಲಕ್ಕೂ ಸಾವಯವ ವಸ್ತುವೇ ಆಹಾರ. ಅದನ್ನೇ ತಿಂದು – ಹುಡಿಮಾಡಿ ಗಿಡಗಳು ಬದುಕಲು ಬೆಳೆಯಲು ಅಗತ್ಯವಾದ ಪೋಷಕಾಂಶಕಗಾಗಿ ಪರಿವರ್ತಿಸುತ್ತವೆ.

ನಮ್ಮ ಹೊಲದಲ್ಲಿದ ಮಣ್ಣಿಗೆ ತಾಕತ್ತು ತುಂಬಲು ನಾವು ಮಾಡಬೇಕಾದ ಮೊದಲ ಕೆಲಸವೇ ಮಣ್ಣುಜೀವಿಗಳು ಉಳಿಯಲು ಬದುಕಲು ಬಾಳಲು ಅಗತ್ಯ ವಾತಾವರಣವನ್ನು ಮಣ್ಣಲ್ಲಿ ಸೃಷ್ಟಿಸುವುದು. ಇದೇ ನಮ್ಮ ಮೂಲಗುರಿಯಾಗಬೇಕು.

ಇದನ್ನು ಮಾಡುವ ಮುನ್ಡ ಮಣ್ಣಿನ ನಾಲ್ಕು ಪ್ರಮುಖ ಆಂಶಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ನಾಲ್ಕು ಅಂಶಗಳು ಯಾವುವೆಂದರೆ,

  1. ಸಾವಯವ ಅಂಶ
    ಮಣ್ಣಿಗೆ ಸಾವಯವ ಅಂಶವಿರುವ ಗೊಬ್ಬರವನ್ನು ಕೊಡುವುದು ಅತೀ ಮುಖ್ಯ. ಮಣ್ಣುಜೀವಿಗಳಿಗೆ ಸಾವಯವ ಅಂಶವೇ ಮೂಲಾಹಾರ ಹಾಗೂ ಆಧಾರ.

ನಮ್ಮ ಹೊಲ-ತೋಟಗಳ್ಲಿನ ಮೇಲಿನ 6 ಇಂಚು ಮಣ್ಣಲ್ಲಿ ಕಾಂಪೋಸ್ಟೆ ಅಥವಾ ಚೆನ್ನಾಗಿ ಕಳಿತ ಸಾವಯವ ಗೊಬ್ಬರ ಇರಬೇಕು. ಒಂದು ಗಿಡದ ಬೆಳವಣಿಗೆಗೆ ಅತ್ಯಗತ್ಯವಾಗಿ ಬೇಕಾದ ಸಕಲ ಪೋಷಕಾಂಶಗಳೆಲ್ಲವೂ ಸಮೃದ್ಧವಾಗಿ ಕಾಂಪೋಸ್ಟ್ ನಲ್ಲಿರುತ್ತವೆ.

ಈ ಕಾರಣದಿಂದಲೇ ಕಾಂಪೋಸ್ಟ್ ಅನ್ನು ” ಮಣ್ಣಿಗೆ ಮೃಷ್ಟಾನ್ನ – ಗಿಡಗಳಿಗೆ ಪರಮಾನ್ನ ” ಎಂದು ಕರೆಯುವುದು.

  1. ತೇವಾಂಶ

ನಾವು ಬೆಳೆಸುವ ಗಿಡಗಳಿಗೂ ಹಾಗೂ ನಮ್ಮ ಮಣ್ಣಲ್ಲಿನ ಜೀವಾಣುಗಳಿಗೂ ತೇವಾಂಶ ಸಮತೂಕವಾಗಿರಬೇಕು.

ಗಿಡಗಳು ಬೆಳೆಯಲು ಮಣ್ಣು ತೇವಾಂಶದಿಂದ ಕೂಡಿದ್ದರೆ ಸಾಕು.

  1. ಗಾಳಿ

ಮಣ್ಣಮೇಲೆ ಭಾರವಾದ ವಸ್ತುಗಳನ್ನೋ ಅಥವಾ ಯಂತ್ರಗಳನ್ನೋ ಸಾಗಿಸಿದ್ದಲ್ಲಿ, ಮಣ್ಣು ಹೆಚ್ಚು ಒತ್ತಾಗಿಬಿಡುತ್ತದೆ. ಇದರಿಂದ ಮಣ್ಣಲ್ಲಿನ ಗಾಳಿ ಮಾಯವಾಗುತ್ತದೆ.

ಮಣ್ಣಲ್ಲಿ ಗಾಳಿಯಿಲ್ಲದಿದ್ದಲ್ಲಿ, ಮಣ್ಣುಜೀವಿಗಳಿಗೆ ಉಸಿರು ಕಟ್ಟಿದಂತಾಗುತ್ತದೆ. ಸಾಧಾರಣವಾಗಿ ಗಿಡಗಳು ಬೆಳೆಯುವ ಜಾಗದಲ್ಲಿ ರೈತರು ನಡೆಯುವುದಿಲ್ಲ.

  1. ಖನಿಜಾಂಶ

ನಮ್ಮ ಹೊಲತೋಟಗಳಲ್ಲಿನ ಮಣ್ಣಲ್ಲಿ ಮರಳಿನ ಅಂಶ ಹೆಚ್ಚೋ – ಗೋಡು ಅಂಶ ಹೆಚ್ಚೋ – ಜೀಡಿ ಅಂಶ ಹೆಚ್ಚೋ ಎಂಬುದು ಮಣ್ಣಲ್ಲಿನ ಖನಿಜಾಂಶಗಳ ಪ್ರಮಾಣ ಹಾಗೂ ಗಾತ್ರದ ಮೇಲೆ ತೀರ್ಮಾನವಾಗುತ್ತದೆ.

ಮಣ್ಣಿನ ಆರೋಗ್ಯ ಹೆಚ್ಗಿಸುವ ಉತ್ತಮ ವಿಧಾನವೆಂದರೆ, ಮಣ್ಣ ಮೇಲೆ ಮುಚ್ಚಿಗೆ ಬೆಳೆ ಬೆಳೆಸುವುದು. ಎರಡು ಬೆಳೆಗಳ ನಡುವಿನ ಅವಧಿಯಲ್ಲಿ ಮುಚ್ಚಿಕೆ ಬೆಳೆಯನ್ನು ಬೆಳೆಸುವುದರಿಂದ ಕಳೆ ಸಮಸ್ಯೆ ಕಡಿಮೆಯಾಗುತ್ತದೆ.

ಮಣ್ಣಮೇಲೆ ನೇರ ಬಿಸಿಲು ಬೀಳುವುದು ತಡೆಯುತ್ತದೆ. ಮಣ್ಣಿಗೆ ಪೋಷಕಾಂಶಗಳು ಪೂರೈಕೆಯಾಗುತ್ತವೆ.

Leave a Reply

Your email address will not be published. Required fields are marked *