ಉತ್ತಮ ಮಳೆ ಬೆಳೆಗಾಗಿ ಶ್ರೀ ಉಡಚಮ್ಮದೇವಿಯ ವಿಶೇಷ ಪೂಜೆ.

ಉತ್ತಮ ಮಳೆ ಬೆಳೆಗಾಗಿ ಶ್ರೀ ಉಡಚಮ್ಮದೇವಿಯ ವಿಶೇಷ ಪೂಜೆ

ವೀರಮಾರ್ಗ ನ್ಯೂಸ್ : ಹಾವೇರಿ : ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಉಡಚಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಮಳೆಗಾಗಿ. ಐದು ವಾರ ಶ್ರೀ ಉಡಚಮ್ಮದೇವಿಯ ಪೂಜೆ ರೈತರು ಸಲ್ಲಿಸಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ . ಬೆಳಿಗ್ಗೆ ದೇವಿಗೆ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಅನ್ನ ಪ್ರಸಾದನ ಸ್ವೀಕರಿಸಿದರು ಈ ಸಂದರ್ಭದಲ್ಲಿ ಉಡುಚಪ್ಪ ದೊಡ್ಡಉಡಚಪ್ಪನವರ ನಾಗಪ್ಪ ತಿಪ್ಪಕ್ಕನವರ ಹೊನ್ನಪ್ಪ ಕೊಳ್ಳವರ. ಶಂಕ್ರಪ್ಪ ಕಲಕೋಟಿ ನಿಂಗಪ್ಪ ದೊಡ್ಡಮನಿ ಮಲ್ಲೇಶ ಹರಿಜನ ಪ್ರಕಾಶ್ ಬಾರ್ಕಿ ನಿಂಗಪ್ಪ ಎರೇಸೀಮಿ ಪರಮೇಶಪ್ಪ ಎರೆಮನಿ ಫಕ್ಕಿರೇಶ ಪೂಜಾರ ವೀರಯ್ಯ ಶಂಕಿನಮಠ ನೀಲಪ್ಪ ನೀಲಪ್ಪನವರ ಗಣೇಶ್ ಕುಲಕರ್ಣಿ ಗ್ರಾಮ ಪಂಚಾಯತಿ ಪಿ.ಡಿ.ಒ ಶಿವಲೀಲಾ ಭಜಂತ್ರಿ ಕಾರ್ಯದರ್ಶಿಯಾದ ಬಿ ಎಸ್ ಬಾಣದ ರಾಜೇಶ್ವರಿ ಗೋನಾಳ ಈರಣ್ಣ ಎಲಿಗಾರ ಹೆಗ್ಗಪ್ಪ ಬಾಲೆಹೊಸೂರ ನಿಂಗಪ್ಪ ತಿಪ್ಪಕ್ನವರ ಕುಮಾರ ಹೊಸಳ್ಳಿ. ಹಾಗೂ ಊರಿನ ಗ್ರಾಮಸ್ಥರು ಇದ್ದರು.

ಶ್ರೀ ನೈಘಂಟಿನ
ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಜಯಂತಿ

ಹಾವೇರಿ : ಶರಣರ ಚಳುವಳಿಯ ಮುಂದುವರಿಕೆಯಾಗಿ ಈ ಪುಣ್ಯ
ನೆಲದಲ್ಲಿ ಅನೇಕರು ಮಹಾಂತರು
ಅಲ್ಲಲ್ಲಿ ಅವತರಿಸಿ ಜಗದ್ದೋದಾರ
ಕಾರ್ಯ ಮಾಡಿದರು ಅಂಥವರಲ್ಲಿ ಎಡೆಯೂರು ಸಿದ್ದಲಿಂಗೇಶ್ವರರು, ಷಣ್ಮಖ ಶಿವಯೋಗಿಗಳು, ಹಾಗೂ
ಮುರಘೇಂದ್ರ ಶಿವಯೋಗಿಗಳು,
ಘನವೈರಾಗ್ಯ ಜಂಗಮ ಜ್ಯೋತಿ,
ಯೋಗಿಗಳ ಪರಂಪರೆಯಲ್ಲಿ ಮುಂಚೂಣಿಯಲ್ಲಿರುವ ಮುರುಘೇಂದ್ರ ಶ್ರೀಗಳು ಶಿವಪಥದಲ್ಲಿದ್ದು ಲೋಕಪಥದತ್ತ ಸಾಗಿದವರು,ಉತ್ತರ ಕರ್ನಾಟಕದ
ಪ್ರಸಿದ್ದ ಸಿದ್ದಪುರುಷರು, ಜ್ಞಾನ, ಯೋಗ, ಹಾಗೂ ಅದ್ಬುತ ವಾಕ್
ಸಿದ್ದಿಯಿಂದ ಲಕ್ಷಂತರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದ
ಮಹಾನ್ ದಾರ್ಶಿನಿಕರು, ಶಿವಯೋಗಿಗಳು ಮಹಾತಸ್ವಿಗಳಾಗಿ, ಅಂತರ ಜ್ಞಾನಿಗಳಾಗಿ, ತ್ರಿಕಾಲ ಜ್ಞಾನಿಗಳಾಗಿ ಆದರ್ಶ ಜೇವನಗೈದು ತಮ್ಮ ಶಿವಪೂಜಾನುಷ್ಠಾನದ ಪ್ರಭಾವಮಯ ಪ್ರಕಾಶದ ಜ್ಯೋತಿಯನ್ನು ದಯಪಾಲಿಸುತ್ತ ಜೀವನ್ಮಕ್ತಗೊಂಡರು, ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಶ್ರೀಹೊಸಮಠ ವತಿಯಿಂದ ಶ್ರೀ ಮಠದಲ್ಲಿ ಜರುಗಿದ ಲಿಂಗೈಕ್ಯ ಜಗದ್ಗುರು ಶ್ರೀ ನೈಘಂಟಿನ
ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಲೋಕಮಾನ್ಯ ತಿಲಕರು ೧೯೧೫ರಲ್ಲಿ ಅಥಣಿಗೆ ಬಂದಾಗ ಪೂಜ್ಯರ ದರುಶಕ್ಕೆ ಬಂದು ಭಾರತದ ಸ್ವಾತಂತ್ರ್ಯದ ಕುರಿತು ಶಿವಯೋಗಿಗಳಿಗೆ ಸ್ವಾತಂತ್ರ್ಯ ಸಿಗುವದನ್ನ ಗುರಿ ಈಡೇರುವುದೇ” ಎಂದಾಗ,ಶಿವಯೋಗಿಗಳು –
ಸ್ವಾತಂತ್ರ್ಯ ಸಿಗುತ್ತದೆ, ಆದರೆ ಅದನ್ನು ನೋಡಲಾರರಿರಿ, ಎಂದಿದ್ದರಂತೆ ಹಾಗೆಯೇ ಆಯಿತು ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕರು ನಿಧನರಾಗಿದ್ದರು, ಉಭಯ ಶ್ರೀಗಳು ಶ್ರೀ ಮಠಕ್ಕೆ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ಮಹಾನ್ ಯೋಗಿಗಳು.
ಅವರ ಸ್ಮರಣೆಯಿಂದ ಒಳ್ಳೆಯದು ಆಗುತ್ತದೆ ಎಂಬ ಕಾರಣಕ್ಕೆ ಇಬ್ಬರು ಮಹಾಪುರುಷರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಹಿರೇಮಠ ಮಾತನಾಡಿ, ನಾನು ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಪವಾಡ ತಿಳಿದಿರುವೆ. ಅವರ ಆದರ್ಶಗಳು ನಮಗೆ ಮಾದರಿ. ನಮ್ಮ ಇಲಾಖೆ ದಾರ್ಶನಿಕರನ್ನು ಸ್ಮರಿಸುವ ಕಾರಗಯ ಮಾಡುತ್ತಿದೆ. ಜೊತೆಗೆ ಶ್ರೀಮಠವೂ ಕೂಡ ಸ್ಮರಿಸುತ್ತಿರುವುದು ಅಭಿನಂದನೀಯ ಎಂದರು.

ನಿವೃತ್ತ ಶಿಕ್ಷಕಿ ರುದ್ರಮ್ಮ ನೆಲವಿಗಿ ಮಾತನಾಡಿ, ಮಹಾನ್ ಸಾಧಕರ
ಜೀವನ ಸಾಧನೆಯನ್ನು
ಎಲ್ಲರೂ ಅವಲೋಕಿಸಬೇಕು.
ಶ್ರಮಿಸಿದರು ಎಂದು ಉಪನ್ಯಾಸ ನೀಡಿದರು,

ಇದೇ ಸಂದರ್ಭದಲ್ಲಿ ಉಭಯ
ಶ್ರೀಗಳ ಭಾವಚಿತ್ರ ಹೊತ್ತ ಪಲ್ಲಕ್ಕಿ ಉತ್ಸವ ಜರುಗಿತು. ಶಿವಲೀಲಾ ಮರಗಾಲ, ವೀರಯ್ಯ ಹಿರೇಮಠ, ಎ.ಸಿ.ಹಿರೇಮಠ ಹಾಗೂ ರುದ್ರಮ್ಮ ನೆಲವಿಗಿ ಅವರನ್ನು ಶ್ರೀ ಮಠದಿಂದ ಗೌರವಿಸಲಾಯಿತು.

ಮುರುಗೆಪ್ಪ ಕಡೆಕೊಪ್ಪ, ದಯಾನಂದ ಯಡ್ರಾವಿ, ರುದ್ರೇಶ ಚನ್ನಣ್ಣನವರ ಉಪಸ್ಥಿತರಿದ್ದರು.

ಲಕ್ಕಣ್ಣವರ ಸೋದರಿಯರು ವಚನ ಗಾಯನ ಮಾಡಿದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿದರು. ವಿ.ಜಿ.ಯಳಗೇರಿ ಸ್ವಾಗತಿಸಿದರು. ನಿಂಗಪ್ಪ ಆರೇರ ವಂದಿಸಿದರು.

ವರದಿ : H ಭಜಂತ್ರಿ, ಹಾವೇರಿ.l