ಗಾನಕೋಗಿಲೆ ಎಸ್ ಜಾನಕಿ ಅಮ್ಮನವರ ಇವರಿಗೆ ನಗರದ ಪೋಸ್ಟ್ ಸರ್ಕಲ್ ಎಲ್ಲಾ ಕಲಾವಿದರು ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕಿನ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ತು ಅಭಿರುಚಿ ಕಲಾ ಸಂಸ್ಥೆ ಯಂಗ್ ಸ್ಟಾರ್ ಮೆಲೋಡಿ ಶ್ರೀ ಬಸವರಾಜ್ ಸಾವಕನವರ ಕಲಾತಂಡ ಕಾಕಿ ಜನಸೇವಾ ಸಂಸ್ಥೆ ರಿ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಕನ್ನಡ ಚಿತ್ರರಂಗದ ಅನೇಕ ರಾಜ ಪ್ರಶಸ್ತಿಗಳು ರಾಷ್ಟ್ರ ಪ್ರಶಸ್ತಿಗಳು ಪಡೆದಿರುವ ಕನ್ನಡದ ಗಾನಕೋಗಿಲೆ ಎಸ್ ಜಾನಕಿ ಅಮ್ಮನವರ ಇವರಿಗೆ ನಗರದ ಪೋಸ್ಟ್ ಸರ್ಕಲ್ ಎಲ್ಲಾ ಕಲಾವಿದರು ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ದಕ್ಷಿಣ ಭಾರತದ ಗಾನಕೋಗಿಲೆ, ಕೋಟ್ಯಂತರ ಹೃದಯಗಳನ್ನು ತಮ್ಮ ಅಮೃತಮಯ ಕಂಠದಿಂದ ಗೆದ್ದಿದ್ದ ಎಸ್. ಜಾನಕಿ ಅಮ್ಮ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಟಲ ಗ್ರಾಮದಲ್ಲಿ ಜನಿಸಿದ ಜಾನಕಿ ಅಮ್ಮ, ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ತಮ್ಮ ಅಪರೂಪದ ಧ್ವನಿಯನ್ನು ಅರ್ಪಿಸಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಸಂಗೀತ ಲೋಕದಲ್ಲಿ ಅಳಿಸಲಾಗದ ಗುರುತು ಮೂಡಿಸಿದರು.
ಅವರ ಪತಿ ವಿ. ರಾಮಪ್ರಸಾದ್. ಅವರಿಗೆ ಮುರಳಿ ಕೃಷ್ಣ ಎಂಬ ಒಬ್ಬ ಪುತ್ರನಿದ್ದಾರೆ. ಕುಟುಂಬದ ಜೊತೆಗೆ ಸಂಗೀತವನ್ನೇ ಜೀವನವಾಗಿಸಿಕೊಂಡ ಜಾನಕಿ ಅಮ್ಮ, ಸರಳತೆ ಮತ್ತು ವಿನಯದಿಂದ ಎಲ್ಲರ ಪ್ರೀತಿಯನ್ನು ಗಳಿಸಿದ್ದರು.
ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಅವರಿಗೆ ಲಭಿಸಿದ್ದವು. ಆದರೆ ಅವರ ದೊಡ್ಡ ಪ್ರಶಸ್ತಿ ಎಂದರೆ, ಅಭಿಮಾನಿಗಳ ಹೃದಯದಲ್ಲಿ ಅವರು ಪಡೆದ ಶಾಶ್ವತ ಸ್ಥಾನ.
88ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದು, ಭಾರತೀಯ ಸಂಗೀತ ಲೋಕಕ್ಕೆ ಇದು ಎಂದಿಗೂ ತುಂಬಲಾರದ ನಷ.
ಎಸ್ ಜಾನಕಿ ಹಾಡಿರುವ ಹಾಡುಗಳನ್ನು ಕೇಳುವ ಕಿವಿಗಳಲ್ಲಿ ಅವರು ಬದುಕಿರುತ್ತಾರೆ; ಉದಂತ ಶಿವಕುಮಾರ್
23 ಏಪ್ರಿಲ್ 1938 ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಫಲ್ಲೇ ಗ್ರಾಮದಲ್ಲಿ ಜನಿಸಿದರು ಎಸ್ ಜಾನಕಿಯವರು ಜನಿಸಿದರು. ಯಾವುದೇ ಔಪಚಾರಿಕ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆಯದಿದ್ದರೂ ತಮ್ಮ ಸುಮಧುರ ಕಂಠದಿಂದ ದಂತಕತೆಯಾದವರು. ಸ್ವಲ್ಪಕಾಲ ನಾದಸ್ವರ ವಿದ್ವಾನ್ ಪೈಡಿಸ್ವಾಮಿ ಅವರ ಬಳಿ ಸಂಗೀತ ಕಲಿತರು.
1957ರಲ್ಲಿ ಬಿಡುಗಡೆಯಾದ ತಮಿಳಿನ “ವಿಧಿಯನ್ ವಿಳಯಾಟ್ಟು” ಸಿನಿಮಾದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪಾದರ್ಪಣೆ ಮಾಡಿದವರು. ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಭಾವನಾತ್ಮಕ ಮತ್ತು ಮಧುರ ಗೀತೆಗಳಿಗೆ ಇವರ ಧ್ವನಿ ಅತ್ಯಂತ ಪ್ರಸಿದ್ಧವಾಗಿತ್ತು.
ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸರ್ಕಾರಗಳಿಂದ ಸುಮಾರು 28ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2013ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಕನ್ನಡ, ಹಿಂದಿ, ಮರಾಠಿ, ಒಡಿಯ, ಉರ್ದು, ಸಿಂಹಳ, ಪಂಜಾಬಿ, ಕೊಂಕಣಿ, ತಮಿಳು, ತೆಲುಗು, ಮಲಯಾಳಂ, ಬಡಗ, ತುಳು , ಹೀಗೆ 17 ಹೆಚ್ಚು ಭಾರತೀಯ ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಚಂದನದ ಗೊಂಬೆ, ಸಿಪಾಯಿ, ಪಾವನಗಂಗಾ, ಮುದುಡಿದ ತಾವರೆ ಅರಳಿತು, ಭಕ್ತ ಸಿರಿಯಾಳ, ಗಲಾಟೆ ಸಂಸಾರ, ಬಯಲುದಾರಿ, ಆಟೋರಾಜ, ಕನ್ಯಾರತ್ನ, ಹೊಂಬಿಸಲು, ಗಂಧದಗುಡಿ, ಮುಗಿಯದ ಕಥೆ, ಧರ್ಮಸೇರೆ, ಹುಡುಗಾಟದ ಹುಡುಗಿ, ವಿಜಯವಾಣಿ, ಶ್ರೀನಿವಾಸ ಕಲ್ಯಾಣ, ಬಂಗಾರದ ಹೂವು, ಮರೆಯದ ಹಾಡು, ಗೆಜ್ಜೆಪೂಜೆ, ಕಾವೇರಿ, ಮಧುರ ಸಂಗಮ ಹೀಗೆ ಅನೇಕ ಮನಮೋಹಕ ಚಿತ್ರಗಳಲ್ಲಿ ಮನಮೋಹಕ ಗೀತೆಗಳನ್ನು ಯುಗಳ ಗೀತೆಗಳನ್ನು ಹಾಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ 2014ರಲ್ಲಿ ನೀಡಿ ಗೌರವಿಸಿದೆ. ಇಂದು ದಿನಾಂಕ 11.07.2026ರ ಶನಿವಾರ ಅವರು ಮೈಸೂರಿನಲ್ಲಿ ಹೃದಯಘಾತದಿಂದ ನಮ್ಮನ್ನು ಬಿಟ್ಟು ಅಗಲಿದ್ದಾರೆ ಆದರೆ ಅವರು ಹಾಡಿರುವ ಹಾಡುಗಳಲ್ಲಿ, ಹಾಡುಗಳನ್ನು ಕೇಳುವ ನಮ್ಮ ಕಿವಿಗಳಲ್ಲಿ ಜಾನಕಮ್ಮ ಇನ್ನೂ ಬದುಕಿದ್ದಾರೆ. ಮುಂದೆಯೂ, ಎಂದೆಂದಿಗೂ ಬದುಕಿರುತ್ತಾರೆ.