ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು : 26.4.25 ರಂದು ಬಿ ಎ ಜೆ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ರಾಣಿಬೆನ್ನೂರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಜಿಲ್ಲಾ ಪಂಚಾಯತಹಾವೇರಿ ತಾಲೂಕುಪಂಚಾಯತ್ ರಾಣೇಬೆನ್ನೂರ ಗ್ರಾಮಪಂಚಾಯತ್ ಗುಡುಗುರು ಹಾಗೂ ಗ್ರಾಮಸ್ಥರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25ರ ಸಾಲಿನ ದಿನಾಂಕ 26-04-2025 ರಿಂದ ದಿನಾಂಕ 02-05-2025ರ ವರೆಗೆ ದತ್ತು ಗ್ರಾಮ ಗುಡುಗೂರು ಇಲ್ಲಿ ಉದ್ಘಾಟನಾ ಸಮಾರಂಭ ದಿನಾಂಕ 26-04-2025 ರಂದು ಜರುಗಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಪ್ರಕಾಶ್ ಕೆ. ಕೋಳಿವಾಡ, ಶಾಸಕರು ರಾಣೆಬೆನ್ನೂರು ಉದ್ಘಾಟಿಸಿ,

ಎನ್.ಎಸ್.ಎಸ್ ಉಗಮ ಮತ್ತು ಅದರ ಮಹತ್ವ ಬಗೆಗೆ ಮಾತನಾಡಿದರು,ಕಾರ್ಯಕ್ರಮದ ಘನ ಉಪಸ್ಥಿತಿಯಾಗಿ ಡಾ.ಆರ್.ಎಂ. ಕುಬೇರಪ್ಪ ಮುಖ್ಯ ಸಂಯೋಜಕರು ಬಿ.ಎ.ಜೆ.ಎಸ್.ಎಸ್.ಸಂಸ್ಥೆ, ನವದೆಹಲಿ, ಆಡಳಿತ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು,ಇವರು ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ 2024-25ರ ಧ್ಯೇಯವಾಕ್ಯ “ನನ್ನ ಭಾರತಕ್ಕೆ ಯುವ ಜನತೆ” ಇಲ್ಲಿ ಯುವಕರ ಪಾತ್ರದ ಬಗೆಗೆ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ವೆಂಕಪ್ಪ ಕೆಂಚರೆಡ್ಡಿ ಶ್ರೀ.ಗೋಪಾಲ್ ರೆಡ್ಡಿ, ಶ್ರೀ.ಬಸಪ್ಪ ಸಿಡಗನಾಳ, ಶ್ರೀ.ಎಸ್ ಹೆಚ್ ಹುಚ್ಚುಗೌಡ,ಶ್ರೀ.ಬಸಪ್ಪ ಕರಬಸಪ್ಪ ಬರಡಿ, ಶ್ರೀನಿವಾಸ್ ಕುಪ್ಪೇಲೂರ್, ಶ್ರೀ.ಜಯಪ್ಪ ಸುಲಭ ನಿನ್ನ ನವರ್ ಪ್ರೊ.ಕೆ.ಕೆ. ಹಾವಿನಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ್ ಬಣಕಾರ ಸ್ವಾಗತ ಭಾಷಣವನ್ನು ಪ್ರೊ.ಬಿ.ಯು. ಬಾಳೆನಹಳ್ಳಿ, ಪ್ರಾಸ್ತಾವಿಕ ನುಡಿಯನ್ನು ಡಾ.ದೇವರಾಜ್ ಹಂಚಿನಮನಿ ನೆರವೇರಿಸಿ ಕೊಟ್ಟರು,ಎನ್.ಎಸ್.ಎಸ್ ಘಟಕ-2ರ ಕಾರ್ಯಕ್ರಮಾಧಿಕಾರಿ ಪ್ರೊ. ಸಂತೋಷ ಜಜಂತ್ರಿ ಕಾರ್ಯಕ್ರಮದ ನಿರೂಪಿಸಿ, ಎನ್.ಎಸ್.ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ.ಪುಷ್ಪಾಂಜಲಿ ಎನ್.ಕಾಂಬಳೆ ಉದ್ಘಾಟನಾ ಸಮಾರಂಭಕ್ಕೆ ವಂದಿಸಿದರು.