ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಚರಿಸೋಣ.!

ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿ ದೇಶದಲ್ಲಿಯೆ ಮೊದಲು ಸೋಲಿನ ರುಚಿ ತೋರಿಸಿದ ಪ್ರಥಮ ಸ್ವಾತಂ ತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು,ಅರ್ಥಪೂರ್ಣವಾಗಿ ಆಚರಿ ಸೊಣ ಎಂದು ಕೂಡಲಸಂಗಮ ಪಂಚಮ ಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.ಅವರು ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಅನೇಕ ಹೋರಾ ಟಗಾರರ ನಾಡಿನಲ್ಲಿ ಅವರ ಸ್ಮರಣೆ ಸದಾ ನಡೆಯುತ್ತಿರಬೇಕು ಎಂದರು.

ಮಾಜಿ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಶಂಕರ ಮಾಡಲಗಿ, ಮಹಾಂತೇಶ ತುರಮರಿ, ಮಹಾಂತೇಶ ಹೊಸಮನಿ, ಬಸವ ರಾಜ ತಿಗಡಿ ಮಾತನಾಡಿ 18 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಚನ್ನಮ್ಮನವರ ಸ್ಮರಣೋತ್ಸವದಲ್ಲಿ ನಾಡಿನ ಚನ್ನಮನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಯಶಸ್ವಿಗೊಳಿ ಸೊಣ ಎಂದರು. ಮಾಜಿ ಶಾಸಕ ಡಾ.ವಿ. ಆಯ್.ಪಾಟೀಲ, ನ್ಯಾಯವಾದಿ ಶ್ರೀಶೈಲ ವ ಮಾತನಾಡಿದರು. ಇದೆ ಸಂದರ್ಭದಲ್ಲಿ ನೈರುತ್ಯ ರೈಲ್ವೆ ವಿಭಾಗದ ಬಳಕೆ ದಾರರ ಹಿತರಕ್ಷಣಾ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಎಪ್.ಎಸ್. ಸಿದ್ದನಗೌಡರ, ಗುರು ಮೆಟಗುಡ್, ಸವದತ್ತಿ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ಉಮೇಶ ಬೋಳೆತ್ತಿನ ಹಾಗೂ ದಡವಾಡ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಅವರನ್ನು ಶ್ರೀಗಳು ಮತ್ತು ಸ್ಮರಣೋತ್ಸವ ಸಮಿತಿಯಿಂದಸತ್ಕರಿಸಲಾಯಿತು.

ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಬಿ.ಬಿ.ಗಣಾಚಾರಿ, ಗುರು ಮೆಟಗುಡ್, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಸ್ಮರಣೋತ್ಸವದ ಕುಮಾರ ದಳವಾಯಿ ಇದ್ದರು. ಪೂರ್ವಭಾವಿ ಸಭೆಯಲ್ಲಿ, ಹಿರಿಯ ನ್ಯಾಯವಾದಿ, ನುರಾರು ಜನ ಇದ್ದರು.

Leave a Reply

Your email address will not be published. Required fields are marked *