ಕೃಷ್ಣಗೌಡ್ರ ಪಾಟೀಲರಿಂದ ಸವಿತಾ ಸಮಾಜದ ಪತ್ತೀನ ಸಹಕಾರ ಸಂಘದ ಕಾರ್ಯಾಲಯ ಉದ್ಘಾಟನೆ.
ಸವಿತಾ ಸಮಾಜದ ಸಮಘ್ರ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ : ಕೃಷ್ಣಗೌಡ್ರ ಪಾಟೀಲ.
ವೀರಮಾರ್ಗ ನ್ಯೂಸ್ : ಗದಗ ಜಿಲ್ಲೆಯಲ್ಲಿ, ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಆರ್ಥಿಕವಾಗಿ ಬಲಾಡ್ಯರಾಗಲು ಹಿರಿಯರ ಆಶೆಯದಂತೆ ಮತ್ತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ನೆತೃತ್ವದ ನಿಯೋಗದ ಸಂಕಲ್ಪದಂತೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘ ಸ್ಥಾಪನೆಗೊಂಡಿದ್ದು ಅದರ ಜತೆಗೆ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯವು ಸಹ ಉದ್ಘಾಟಣೆ ಗೊಂಡಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಗದಗ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ಘಟಕದ ಚುನಾಯತ ಅಧ್ಯಕ್ಷರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರು ಹರ್ಷ ವ್ಯಕ್ತಪಡಿಸಿ ಮಾತನಾಡಿದರು
ಅವರು ವಿವೇಕಾನಂದ ರೋಡ ನಾಲ್ಕನೆ ಕ್ರಾಸ್ ಮಾಲಿಪಾಟೀಲ ಆಸ್ಪತ್ರೆ ಹತ್ತಿರ ಕಮೀತ್ಕರ ಕಾಂಪ್ಲೇಕ್ಷನಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸ್ಥಾಪನೆಗೊಂಡ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತೀನ ಸಹಕಾರ ಸಂಘ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಾಲಯ ಉದ್ಘಾಟಿಸಿ ಪೂಜೆ ಸಲ್ಲಿಸಿ ಶುಭಕೋರಿ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ಸವಿತಾ ಸಮಾಜವು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಉತ್ಸಾಹಿ ಯುವ ಸೇವಕರಾದ ಕೃಷ್ಣಾ ಎಚ್ ಹಡಪದ ಅವರು ಮಾಡುತ್ತಿರುವ ಅನೇಕ ರೀತಿಯಲ್ಲಿ ಸಮಾಜ ಪರ ರಚನಾತ್ಮಕ ಸೇವಾ ಕಾರ್ಯಕ್ಕೆ ಸಮಸ್ತ ಸವಿತಾ ಕ್ಷೌರಿಕ ಬಾಂಧವರು ಕೈಜೋಡಿಸುವ ಮೂಲಕ ಅವರ ಶಕ್ತಿ ತುಂಬಲು ಮಾಂದಾಗಬೇಕು ಎಂದು ಕರೆ ನೀಡಿದರಲ್ಲದೆ ಗದಗ ಜಿಲ್ಲಾ ಸವಿತಾ ಸಮಾಜದ ಹಲವು ಜ್ವಲಂತ ಸಮಸ್ಯೆಗಳ ನಿವಾರಣೆ ಬಗ್ಗೆ ಮತ್ತು ತಮ್ಮೇಲ್ಲರ ಬಹು ದೊಡ್ಡ ಅಪೇಕ್ಷೆಯಂತೆ ಗದಗ ಸವಿತಾ ಸಮಾಜದ ಉತ್ಸಾಹಿ ಮುಕಂಡರಾದ ಕೃಷ್ಣಾ ಎಚ್ ಹಡಪದ ಅವರಿಗೆ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ನಮ್ಮ ಪೂಜ್ಯ ತಂದೆಯವರು ಹಾಗೂ ಸಚಿವರಾದ ಎಚ್ ಕೆ ಪಾಟೀಲಜಿ ಅವರ ಗಮನ ಸೆಳೆಯುವ ಜತೆಗೆ ಸವಿತಾ ಸಮಾಜದ ಕ್ಷೌರಿಕ ಕಾರ್ಮಿಕರ ಹಾಗೂ ಸೇವಕರ ಪರವಾಗಿ ಮತ್ತು ತಮ್ಮ ಸವಿತಾ ಸಮಾಜದ ಸಮಘ್ರ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ ಎಂದು ಕೃಷ್ಣಗೌಡ್ರ ಎಚ್ ಪಾಟೀಲರು ಭರವಸೆ ನೀಡಿ ಮಾತನಾಡಿದರು.

ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ಗಂಗಿಮಡಿಯಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಶ್ರೀ ನಾಗದೇವರ ದೇವಸ್ಥಾನಕ್ಕೆ 10. ಲಕ್ಷ ರೂ ಹಾಗೂ ಮರಾಠ ಕ್ಷೌರಿಕ ಸಮಾಜದ ಸಮುಧಾಯ ಭವನ ನಿರ್ಮಾಣಕ್ಕೆ 5. ಲಕ್ಷ ರೂ ಅನೂಧಾನವು ಸೇರಿದಂತೆ 52 ಬಡ ಕುಟುಂಭಗಳಿಗೆ ಆಶ್ರಯ ಮನೆಗಳು ಇಗಾಗಲೆ ಮಂಜೂರಾಗಿದ್ದು ಸಮಾಜಕ್ಕೆ ಕೂಡಲೆ ದೊರಕಿಸಿ ಕೊಡಬೇಕು ಮತ್ತು ಬಹುದಿನಗಳ ಬೇಡಿಕೆಯಾದ 29 ನೇ ವಾರ್ಡಿನಲ್ಲಿ ಇಗಾಗಲೆ ಗುರುತಿಸಿದ 2 ವೃತ್ತದಲ್ಲಿ ಒಂದಕ್ಕೆ ಮರಾಠ ಕ್ಷೌರಿಕರ ಆರಾಧ್ಯ ದೈವ ಶ್ರೀ ಸಂತಸೇನಾ ಮಹಾರಾಜ ಗುರುಗಳ ಹೆಸರು ನಾಮಕರಣದ ಜತೆಗೆ ಸವಿತಾ ಸಮಾಜದ ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ಸಲೂನ ಕುರ್ಚಿಗಳು ಹಾಗೂ ಸಲಕರಣೆಗಳು ಮತ್ತು ನಗರಸಭೆ. ಜಿಲ್ಲಾಡಳಿತ. ಮತ್ತು ಶಾಸಕರು/ಸಚೀವರಿಂದ ವಿವಿಧ ಸೌಲಭ್ಯ ಹಾಗೂ ಅನೂಧಾನಗಳನ್ನು ಬೆಡುಗಡೆ ಮಾಡಿಸಿಕೊಡಬೆಕೇಂದು ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ವಿನಂತಿಸಿ ಮನವಿ ಮಾಡಿ ಅವರ ಮೂಲಕ ಸಚಿವರಾದ ಎಚ್ ಕೆ ಪಾಟೀಲಜಿ ಅವರಗೆ ಮನವಿ ಮಾಡಿ ಮಾತನಾಡಿದರು
ಕರ್ನಾಟಕ ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಹಿರಿಯರಾದ ಹನಮಂತಪ್ಪ ರಾಂಪೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪ್ರಮುಖ ನಾಯಕರಾದ ರವಿಕುಮಾರ ರಡ್ಡಿ. ಅಬ್ದುಲಮುನಾಫ ಮುಲ್ಲಾ. ಹಿರಿಯರಾದ ಪರಶುರಾಮ (ಬಜ್ಜು) ರಾಂಪೂರ. ವೆಂಕಟೇಶ ರಾಂಪೂರ ಯಲ್ಲಪ್ಪ ರಾಯಚೂರ. ಅಶೋಕ ಮಾನೆ. ಪಾಂಡು ಕಾಳೆ. ಕೀರಣ ರಾಂಪೂರ.

ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಉಪಾಧ್ಯಕ್ಷರಾದ ಜಂಮ್ಮಣ್ಣ ಕಡಮೂರ ಮಾಜಿ ಅಧ್ಯಕ್ಷರಾದ ಹೇಮಂತ ವಡ್ಡೆಪಲ್ಲಿ. ಜಿಲ್ಲಾ ಪ್ರ ಕಾರ್ಯದರ್ಶಿ ಮಂಜುನಾಥ ಮಾನೆ. ಜಿಲ್ಲಾ ಕಜಾಂಚಿ ಅರೂಣ ರಾಂಪೂರ. ಶ್ರೀ ಸಂತಸೇನಾ ಮಹಾರಾಜ ನಾಭೀಕ್ ಮರಾಠ (ಸವಿತಾ) ಸಮಾಜದ ಜಿಲ್ಲಾಧ್ಯಕ್ಷರಾದ ರಾಜು ಮಾನೆ. ನಗರ ಅಧ್ಯಕ್ಷರಾದ ವಿಕಾಸ್ ಕ್ಷೀರಸಾಗರ. ಬೆಟಗೇರಿ ಬಾಗದ ರಮೇಶ ರಾಂಪೂರ. ಪರಶುರಾಮ ಬಳ್ಳಾರಿ. ಆನಂದ ಮಾನೆ. ಸುರೇಶ ಬುದೂರ ತುಕಾರಾಮ ಮಾನೆ. ಶ್ರೀನಿವಾಸ ಕೊಟೇಕಲ್ಲ. ಸೂನೀಲ ರಾಯಚೂರ. ಕೃಷ್ಣಾ ಬುದೂರ. ಬಸವರಾಜ ಗೌಡರ್. ರಾಮು ವಡ್ಡೆಪಲ್ಲಿ. ವೆಂಕಟೇಶ ಕೊಟೇಕಲ್ಲ. ಪರಶುರಾಮ ಕೊಲ್ಪೂರ. ಪರಶುರಾಮ ಮಾರ್ಲಬೇಡ್. ಗಣೇಶ ಕಡಮೂರ. ಪ್ರಕಾಶ ಬುದೂರ. ಸಾಗರ ಹಡಪದ. ಕಾರ್ತಿಕ ಆಗಲಾವೆ. ಶ್ರೀಧರ ಕಡಬೂರ. ವಿನಾಯಕ ರಾಯಚೂರ ರಾಜು ರಾಮ್ ಮಾನೆ. ಹಾಗೂ ವಿಷೇಶವಾಗಿ ನಿರ್ದೇಶಕರು ಸಮಾಜ ಬಾಂಧವರು ಉಪಸ್ತಿತರಿದ್ದರು.