ಉತ್ತರ ಕರ್ನಾಟಕ ಬಾಗದ ಅಭಿವೃದ್ಧಿ ಅಷ್ಟೇ ಸಾಕೆ,,,?

ಉತ್ತರ ಕರ್ನಾಟಕ ಬಾಗದ ಸವಿತಾ ಕ್ಷೌರಿಕರ ಅಭಿವೃದ್ಧಿ ಅಂದರೆ ಅಷ್ಟೇ ಸಾಕೇ…? ಅಧಿಕಾರ ಬೇಡವೇ…? ಹಮನಂತಪ್ಪ ರಾಂಪೂರ ಬೇಸರ…!

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಉತ್ತರ ಕರ್ನಾಟಕ ಹಾಗೂ ಈ ಭಾಗದ ಹಿಂದುಳಿದ ಶೋಷಿತ ಹಾಗೂ ಬಡ ಸವಿತಾ ಸಮಾಜದ ಕ್ಷೌರಿಕರ ಸಮಾನತೆ ಕುರಿತಾಗಿ ರಾಜಕಾರಣಿಗಳು ದೊಡ್ಡ ದೊಡ್ಡ ಭಾಷಣಗಳನ್ನೇ ಮಾಡುತ್ತಾರೆ. ಆದ್ರೆ, ರಾಜಕಾರಣದಲ್ಲಿ ಈ ಭಾಗದ ಸವಿತಾ ಸಮಾಜದ ಕ್ಷೌರಿಕರ ನಾಯಕರು ಎಷ್ಟಿದ್ದಾರೆ ಎಂದು ಕೇಳಿದರೆ ನಿಜಕ್ಕೂ ನಾಚಿಕೆಯಾಗುತ್ತೆ..! ಎಂದು ಕರ್ನಾಟಕ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ರಾಜ್ಯ ಕಾರ್ಯಧರ್ಶಿಗಳಾದ ಹನಮಂತಪ್ಪ ರಾಂಪೂರ ಹೇಳಿದರು.
ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಸವಿತಾ ಸಮಾಜದ ಉತ್ಸಾಹಿ ಯುವಕರು ಹಾಗೂ ಸಮಾಜಕ್ಕೆ ಅತ್ಯಂತ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ವಿನಾಯಕ ರಾಯಚೂರ ಅವರಿಗೆ ಸಮಾಜದ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆಗೊಂಡ ಅವರಿಗೆ ಸನ್ಮಾನಿಸಿ ಅಭಿನಂದಸಿ ಮಾತನಾಡಿ ಸುಮಾರು 26 ವರ್ಷಗಳಿಂದ ಸವಿತಾ ಸಮಾಜದ ಸೇವೆ ಸಲ್ಲಿಸುತ್ತಿರುವ ಹಾಗೂ ಉತ್ತರ ಕರ್ನಾಟಕ ಭಾಗದ ಗದಗ ನಲ್ಲಿ ಹುಟ್ಟಿ ಬೆಳೆದು ಇಲ್ಲಿನ ಬಡತನ ಹಾಗೂ ಕೆಟ್ಟ ಪರಿಸ್ತಿತಿ ಬಗ್ಗೆ ಅರಿವು ಇದ್ದು ಈ ಭಾಗದ ಸಮಘ್ರ ಅಭಿವೃದ್ಧಿಯ ಸಂಕಲ್ಪಗಾರ ಮತ್ತು ಕ್ಷೌರ ಕುಟೀರಗಳ ನಿರ್ಮಾಣದ ಕನಸುಗಾರ ಹಾಗೂ ಉತ್ತರ ಕರ್ನಾಟಕ ಭಾಗದ ಸವಿತಾ ಸಮಾಜದ ಏಕೈಕ ಯುವ ಮುಖಂಡರಾದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರಿಗೆ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಯಾದಾಗಿನಿಂದ ಗದಗ-ಬೆಟಗೇರಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕು ಮತ್ತು ಉತ್ತರ ಕರ್ನಾಟಕದ ಸಮಸ್ತ ಜಿಲ್ಲೆ ಮತ್ತು ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಹ ಹಿರಿಯ ಮಂತ್ರಿಗಳಾದ ಎಚ್ ಕೆ ಪಾಟೀಲ ಅವರ ಆದಿಯಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಉಪ.ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೇಸ್ ಪಕ್ಷದ ವರೀಷ್ಠರಿಗೆ ಮನವಿ ಸಲ್ಲಿಸಿ ಬೇಡಿಕೊಂಡರೂ ಸಹ ಸವಿತಾ ನಿಗಮ ಅಧ್ಯಕ್ಷ ಸ್ಡಾನ ನೇಮಕ ವಿಚಾರದಲ್ಲಿ ಕೇವಲ ಬೆಂಗಳೂರಿನವರಿಗೇ ಮಾತ್ರ ಮಿಸಲು ಎಂಬಂತೆ ನಾವುಗಳು ಬಹಳ ನಬಿಂದ ಎಲ್ಲ ರಾಜಕೀಯ ನಾಯಕರು ನಡೆದುಕೊಂಡು ಉತ್ತರ ಕರ್ನಾಟಕ ಭಾಗದ ಕ್ಷೌರಿಕ ನಾಯಕರ ಒಕ್ಕೂರಿನಿಂದ ಸಲ್ಲಿಸಿದ ಮನವಿಗೆ ಸ್ಪಂದಿಸದೆ ಹಿಡಿ ಉತ್ತರ ಕರ್ನಾಟಕಕ್ಕೆ ಮತ್ತು ಗದುಗಿಗೆ ಅನ್ಯಾಯ ಮಾಡಲಾಗಿದೆ. ಎಂದು ಬೇಸರ ವ್ಯಕ್ತ ಪಡಿಸಿ ಮಾತನಾಡಿದರು.
ಬೆಟಗೇರಿಯ ಶ್ರೀ ಸಂತಸೇನಾ ಮಹಾರಾಜ ನಾಭೀಕ ಮರಾಠ (ಸವಿತಾ) ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಮಾತನಾಡಿ ಸರಕಾರದ ಸಹಾಯ ಸಹಕಾರ ಮತ್ತು ಸೌಲಭ್ಯಗಳಿಂದ ವಂಚಿತವಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಸಮಸ್ಯಗಳನ್ನು ಅನುಭವಿಸುತ್ತಿರುವವರೇ ಉತ್ತರ ಕರ್ನಾಟಕ ಭಾಗದ ಸವಿತಾ ಸಮಾಜದ ಬಡ ಕ್ಷೌರಿಕರು. ಈವರೆಲ್ಲರ ನಿಜ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡು ಅವರುಗಳ ಸಮಘ್ರ ಅಭಿವೃದ್ಧಿಗೆ ಅನಕೂಲ ಮಾಡಿಕೊಡಲು ಸರಕಾರದ ಗಮನ ಸೆಳೆಯುವಂತಹ ಕೆಲಸಕ್ಕೆ ಇಲ್ಲಿಯವರಿಗೂ ಬೆಂಗಳೂರಿನ ಸವಿತಾ ಸಮಾಜದ ಯಾವ ಒಬ್ಬ ನಾಯಕರೂ ಮುಂದಾಗಿಲ್ಲ ಎಂಬುದು ಸರಕಾರವು ಅರೆತುಕೊಳ್ಳಬೇಕು ಎಂದರಲ್ಲದೆ ಬೆಂಗಳೂರಿನವರು ನಮ್ಮ ಭಾಗದ ಬಡ ಕ್ಷೌರಿಕರ ಅಭಿವೃದ್ಧಿಗಾಗಿ ಸ್ವತಂತ್ರ್ಯವಾಗಿ ಅಧಿಕಾರ ಚಲಾಯಿಸುವವರು ಕಡಿಮೆ.. ಕೆಲ ಸಮಾಜಕಾರಣಿಗಳ ಹಾಗೂ ರಾಜಕಾರಣಿಗಳ ಕೈಗೊಂಬೆಯಾಗಿ ಹೆಸರಿಗೆ ಮಾತ್ರ ಅಧಿಕಾರ ಹಿಡಿದು ಸಮಾಜಕ್ಕೆ ಅನ್ಯಾಯ ಮಾಡುವವರೇ ಜಾಸ್ತಿ ಇದ್ದಾರೆ.. ಹೀಗಾದ್ರೆ ಸವಿತಾ ಸಮಾಜ ಮತ್ತು ರಾಜಕಾರಣ ಬದಲಾಗೋದು ಹೇಗೆ ಸಾಧ್ಯ ಎಂದು ಅಸಮಾಧಾನ ಹೊರಹಾಕಿದರು
ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಅವರು ಮಾತನಾಡಿ ಉತ್ತರ ಕರ್ನಾಟಕ ಭಾಗಕ್ಕೆ ಮತ್ತು ಗದಗ ಸವಿತಾ ಸಮಾಜಕ್ಕೆ 50 ರಿಂದ 60 ವರ್ಷಗಳಿಂದ ರಾಜಕೀಯದಲ್ಲಿ ನಮ್ಮ ಸಮಾಜದ ನಾಯಕರಿಗೆ ಸಿಕ್ಕಿರುವ ಸ್ಥಾನಮಾನವೇನು ಅಂತಾ ನೋಡಿದ್ರೆ, ನಿಜಕ್ಕೂ ಬೇಸರವಾಗುತ್ತೆ.. ವೋಟ್ ಹಾಕೋ ವಿಚಾರಕ್ಕೆ ಬಂದರೆ ಎಲ್ಲ ರೀತಿ ಹಾಗೂ ರಂಗಗಳಿಂದ ಹಿಂದುಳಿದ ಉತ್ತರ ಕರ್ನಾಟಕಕ್ಕೆ ಸಂಬಂದಿಸಿದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸವಿತಾ ಸಮಾಜದ ಲಕ್ಷಾಂತರ ಪುರುಷರು ಹಾಗೂ ಮಹಿಳೆಯರು ಮತ್ತು ಯುವಕರು ಮತದಾರರು ಬೇಕು. ಆದ್ರೆ, ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರದ ಚುಕ್ಕಾಣಿ ಮಾತ್ರ ಬೆಂಗಳೂರಿನವರಿಗೆ ಮಾತ್ರ..! ಏಕೆ ಹೀಗೆ? ಈ ಭಾಗದ ನಾಯಕರಿಗೆ ಏಕೆ ರಾಜಕೀಯ ಪ್ರಾತಿನಿಧ್ಯ ಸಿಗ್ತಿಲ್ಲ? ಈ ಕುರಿತು ಉತ್ತರ ಕರ್ನಾಟಕದ ಎಲ್ಲಾ ರಾಜಕಾರಣಿಗಳು ಮತ್ತು ಸರಕಾರವು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೆಳಿದರು
ಜಿಲ್ಲಾ ಖಜಾಂಚಿಗಳಾದ ಅರೂಣ ರಾಂಪೂರ ಅವರು ಮಾತನಾಡಿ ಚುನಾವಣೆ ಸಂದರ್ಭಗಳಲ್ಲಿ ಉತ್ತರ ಕರ್ನಾಟಕದ ಸವಿತಾ ಸಮಾಜದ ಕ್ಷೌರಿಕ ಬಾಂಧವರು ಕೇವಲ ವೋಟ್ ಬ್ಯಾಂಕ್ ಆಗಿರುತ್ತಾರೆ. ಮತ ಹಾಕೋದಕ್ಕಷ್ಟೇ ಅವರು ಬೇಕು, ಅಧಿಕಾರ ಚಲಾಯಿಸೋದಕ್ಕೆ ಬೆಂಗಳೂರಿನವರೇ ಸಾಕು ಎನ್ನುವಂತಾಗಿದೆ. ಎಂದು ಅಸಮಾಧಾನ ವ್ಯಕ್ತ ಪಡಿಸಿ ಮಾತನಾಡಿದರು.


ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಜಿಲ್ಲಾ ಸವಿತಾ ಸಮಾಜದ ಯುವ ಘಟಕದ ನೂತನ ಉಪಾಧ್ಯಕ್ಷರಿಗೆ ಸಂಘಟನಾತ್ಮಕ ಸಲಹೆ ಸೂಚನೆ ನೀಡಿ ಗೌರವಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಹಿರಿಯರಾದ ಅಥಿತಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲಮುನಾಫ ಮುಲ್ಲಾ ಸಮಾಜದ ಹಿರಿಯರಾದ ಬಾಲರಾಜ ಕೊಟೇಕಲ್ಲ. ಪರಶುರಾಮ (ಬಜ್ಜು) ರಾಂಪೂರ. ಜಂಮ್ಮಣ್ಣ ಕಡಮೂರ. ಹೇಮಂತ ವಡ್ಡೆಪಲ್ಲಿ. ಕೀರಣ ರಾಂಪೂರ. ಶ್ರೀನಿವಾಸ ಕೊಟೇಕಲ್ಲ. ಸುರೇಶ ಬುದೂರ ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ತಿತರಿದ್ದರು.


ಸವಿತಾ ಸಮಾಜ ಸಂಘಟನೆ ಕ್ಷೇತ್ರದಲ್ಲಿ 26 ವರ್ಷಗಳ ಅಪಾರ ಅನುಭವ ಹೊಂದಿರುವ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜವನ್ನು ಸರ್ವರನ್ನು ಒಗ್ಗೂಡಿಸಿಕೊಂಡು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿದ ಸವಿತಾ ಸಮಾಜದ ಗದಗ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರಿಗೆ ಹಿರಿಯ ಸಚೀವರಾದ ಎಚ್ ಕೆ ಪಾಟೀಲರು ಹಾಗೂ ಹಿರಿಯರಾದ ಡಿ ಆರ್ ಪಾಟೀಲಜಿ ಅವರ ಆಶೀರ್ವಾದದಿಂದ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಸಿಗುವ ವಿಸ್ವಸವು ಉಸಿಯಾಗಿದೆ ಆದರೆ ಇನ್ನು ಮುಂದಿನ ದಿನಮಾನಗಳಲ್ಲಾದರು ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರು ತಮ್ಮ ತಂದೆ ಹಾಗೂ ದೊಡ್ಡಪ್ಪನವರ ಮೂಲಕ ಗದಗ ಕೃಷ್ಣಾ ಎಚ್ ಹಡಪದ ಅವರಿಗೆ ರಾಜಕೀಯ ಉನ್ನತ ಸ್ಥಾನವನ್ನು ಸಿಗುವ ವಿಸ್ವಾಸವಿದೆ

ಕುರುಮುರ್ತಿ ಬಾರಬಾರ್
ಜಿಲ್ಲಾ ಸಂಚಾಲಕರು
ಸಿರಹಟ್ಟಿ ತಾಲ್ಲೂಕ ಸವಿತಾ ಸಮಾಜ


ಅನೇಕ ವರ್ಷಗಳಿಂದ ಸವಿತಾ ಸಮಾಜದ ವತಿಯಿಂದ ಸಮಾಜ ಸೇವೆ, ಹೋರಾಟಗಳು ಮಾಡುವ ಜತೆಗೆ ಅವರಿವರೇನ್ನದೆ ಸಮಾಜ ಬಾಂಧವರ ಕಷ್ಟ ಸುಖಗಳಲ್ಲಿ ಭಾಗವಹಿಸಿದಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿರುವ ಸವಿತಾ ಕ್ಷೌಲಕ ಸಮಾಜ ಬಾಂಧವರ ಅತ್ಯಂತ ಕಡು ಬಡತನ ಹಾಗು ಹಿನಾಯ ಸ್ಥಿತಿಗತಿಗಳ ಬಗ್ಗೆ ಸಮಗ್ರ ಅನುಭವ ಹೊಂದಿರುವುದರಿಂದ ರಾಜಕೀಯ ಅತ್ಯೂನ್ನತ ಸ್ಥಾನಕ್ಕೆ ಗದಗ ಕೃಷ್ಣಾ ಎಚ್ ಹಡಪದ ಅರ್ಹ ವ್ಯಕ್ತಿ

ಹಿರಿಯ ಮುಖಂಡರು ಸವಿತಾ ಸಮಾಜದ ಲಕ್ಷ್ಮೇಶ್ವರಹನಮಂತಪ್ಪ ರಾಂಪೂರ…