ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದೇ ಹೆಸರಾದ ಮಾಕನೂರು ಕ್ರಾಸ್ ಗೆ ರಾಣೇಬೆನ್ನೂರಿನಿಂದ ಹರಿಹರಕ್ಕೆ ಚಲಾಯಿಸುವ ಪ್ರತಿಯೊಂದು ಬಸ್ ಗಳನ್ನು ಮಾಕನೂರು ಕ್ರಾಸ್ ಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಬಸ್ ನಿಲುಗಡೆ ಹಾಗೂ ಸ್ಟೇಜ್ ಪಾಯಿಂಟ್ ಮಾಡಿಕೊಡಬೇಕೆಂದು ರಾಣೇಬೆನ್ನೂರು ಸ್ಥಳೀಯ ಶಾಸಕರಾದ ಪ್ರಕಾಶ ಕೆ ಕೋಳಿವಾಡ ಅವರ ಅನುಪ ಸ್ಥಿತಿಯಲ್ಲಿ ಅವರ ಕಚೇರಿಗೆ ಆಗಮಿಸಿ ಮಹೇಶ ರೆಡ್ಡಿ ಅವರಿಗೆ ಹಾಗೂ ರಾಣೇಬೆನ್ನೂರು ಬಸ್ ನಿಲ್ದಾಣಕ್ಕೆ ಆಗಮಿಸಿ ಡಿಪೋ ಮ್ಯಾನೇಜರ ಅವರ ಅನುಪ ಸ್ಥಿತಿಯಲ್ಲಿ ಕಚೇರಿಯಲ್ಲಿ ಇರುವ ಅಧಿಕಾರಿಗಳಿಗೆ ಹಾಗೂ ತಾಲೂಕ ಆಡಳಿತ ಕಚೇರಿಗೆ ಆಗಮಿಸಿ ತಹಶೀಲ್ದಾರ ಕಚೇರಿಯಲ್ಲಿ ಇರುವ ಅಧಿಕಾರಿಗಳಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮನವಿ ಪತ್ರ ನೀಡಲಾಯಿತು.
ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಅವರು ಮಾತನಾಡಿ ರಾಣೆಬೆನ್ನೂರು ತಾಲೂಕು ಮಾಕನೂರು ಕ್ರಾಸ್ ಗೆ ಟೆಜ್ ಪಾಯಿಂಟ್ ಮಾಡಿ ಬಸ್ ನಿಲುಗಡೆ ಬಗ್ಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಮೊನ್ನೆ ನೆಡೆದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾಗ ಬಸ್ ನಿಲುಗಡೆ ಮಾಡದೇ ಅವರನ್ನು ಕುಮಾರಪಟ್ಟಣದಲ್ಲಿ ಇಳಿಸಿರುವುದನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಇದರ ಬಗ್ಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿಯು ಸಹ ತಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ವೀಕ್ಷಣೆ ಮಾಡಿರುತ್ತಾರೆ ಕರ್ನಾಟಕ ಸರ್ಕಾರ ಸ್ತ್ರೀಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತ ಬಸ್ ಪ್ರಯಾಣ ಮಾಡಿರುವುದು ಒಳ್ಳೆಯ ವಿಚಾರವಾಗಿದೆ ಆದರೆ ಕೆಲವು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಅಥವಾ ಇಲಾಖೆಯ ಅಧಿಕಾರಿಗಳು ಗಮನಕ್ಕೆ ಬಾರದೆ ಕಂಡಕ್ಟರ್ ತಮ್ಮ ದರ್ಪದ ಮೇಲೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಮೊನ್ನೆ ಸುಮಾರು 8 ರಿಂದ 10 ಜನ ಮಹಿಳೆಯರು ಮಾಕನೂರ ಕ್ರಾಸ್ ಅಲ್ಲಿ ಇಳಿಯಬೇಕೆಂದು ಕಂಡಕ್ಟರಗೆ ಮನವಿ ಮಾಡಿಕೊಂಡರು ಬಸ್ ನಿಲ್ಲಿಸದೆ ಮಹಿಳೆಯರನ್ನು ಕುಮಾರಪಟ್ಟಣಕ್ಕೆ ಬಸ್ ನಿಲ್ಲಿಸಿ ಇಳಿಸಿದರು ಹಾಗೂ ಗಂಡು ಮಕ್ಕಳು ದುಡ್ಡು ಕೊಟ್ಟು ಟಿಕೇಟ್ ತೆಗೆದುಕೊಂಡ ಗಂಡು ಮಕ್ಕಳನ್ನು ಮಾತ್ರ ಮಾಕನೂರು ಕ್ರಾಸ್ ಗೆ ಇಳಿಸುತ್ತಾರೆ ಮಹಿಳೆಯರು ಇದರ ಬಗ್ಗೆ ಪ್ರಶ್ನೆ ಕೇಳಿದರೆ ಕಂಡಕ್ಟರ್ ದುಡ್ಡು ಕೊಟ್ಟರೆ ಮಾತ್ರ ಮಾಕನೂರು ಕ್ರಾಸ್ ಅಲ್ಲಿ ಇಳಿಯುವ ಅವಕಾಶ ಇದೆ ಇಲ್ಲ ಅಂದ್ರೆ ಕುಮಾರಪಟ್ಟಣಕ್ಕೆ ಇಳಿಸಲಾಗುವುದು ಎಂದು ಮಾಕನೂರು ಕ್ರಾಸ್ ಇಳಿಸದೇ ಮಹಿಳೆಯರನ್ನು ಮುಂದಿನ ಸ್ಟೇಜ್ ಗೆ ಕರೆದುಕೊಂಡು ಹೋಗಿರುತ್ತಾರೆ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಮಾತನಾಡಿ ಮಹಿಳೆಯರು ಪ್ರೀಯಾಗಿ ಬಸ್ ನಲ್ಲಿ ಪ್ರಯಾಣಮಾಡಲು ಸರ್ಕಾರ ಇಲಾಖೆಗೆ ಹಣ ತುಂಬುತ್ತದೆ ಅದು ಹೇಗೆ ಪ್ರೀಯಾಗಿ ಬಸ್ ಪ್ರಯಾಣ ಹಾಗುತ್ತದೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಪ್ರಯಾಣ ಮಾಡುವುದರಿಂದ ತಮ್ಮನ್ನು ಮಾಕನೂರ್ ಕ್ರಾಸ್ ಗೆ ಇಳಿಸಲು ಸಾಧ್ಯವಿಲ್ಲ ಗಂಡು ಮಕ್ಕಳು ದುಡ್ಡು ಕೊಟ್ಟು ಟಿಕೆಟ್ ಪಡೆದಿರುತ್ತಾರೆ ಅವರನ್ನು ಮಾಕನೂರು ಕ್ರಾಸ್ ಗೆ ಇಳಿಸುತ್ತೇವೆ ಇದನ್ನು ಪ್ರಶ್ನೆ ಮಾಡಿದರೆ ಹೆಚ್ಚಿಗೆ ಮಾತನಾಡಬೇಡಿ ಏನೇ ಕೇಳುವದಿದ್ದರೂ ಡಿಪೋ ಮ್ಯಾನೇಜರ್ ಗೆ ಕೇಳಿಕೊಳ್ಳಿ ನಾವು ವಿಡಿಯೋ ಮಾಡಿಕೊಳ್ಳುತ್ತೇವೆ ಎಂದು ಹೇಳಿದಾಗ ಮಾಡ್ಕೊಳ್ಳಿ ನಾವೂ ಹಿರಿಯ ಅಧಿಕಾರಿಗಳು ಹೇಳಿದ ಹಾಗೆ ನಾನು ಮಾಡೋದು ಇಲ್ಲಿ ಯಾವುದೇ ಸ್ಟಾಫ್ ಕೊಡುವುದಿಲ್ಲ ಅಂತ ಸಾರ್ವಜನಿಕವಾಗಿ ಹೇಳಿದ್ದಾರೆ ಗಂಡು ಮಕ್ಕಳಿಗೆ ಒಂದು ನ್ಯಾಯ ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಇನನ್ನು ಹೇಳೋರೋ ಕೇಳೋರು ಯಾರು ಇಲ್ಲಯೋ ಎಂದು ಬಸ್ ನಲ್ಲಿ ಮಹಿಳೆಯರು ಸರ್ಕಾರಕ್ಕೆ ಇಡಿ ಶ್ಯಾಪ ಹಾಕತೊಡಗಿದರು.
ಮಾಕನೂರು ಕ್ರಾಸ್ ಇವತ್ತು ಸುಮಾರು 15 ಹಳ್ಳಿಯ ಸಂಪರ್ಕ ಹೊಂದಿರುವ ಸ್ಥಳವಾಗಿದೆ ಈ ಭಾಗದಿಂದ ದಾವಣಗೆರೆ ಚಿಗಟೇರಿ ಆಸ್ಪತ್ರೆ ಶಿವಮೊಗ್ಗ ಮಂಗಳೂರು ಮಣಿಪಾಲ್ ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗೆ ಹೋಗುವ ಸಾರ್ವಜನಿಕರು ರೈತರು ವಿದ್ಯಾರ್ಥಿಗಳು ಸ್ಕೂಲ್ ಕಾಲೇಜ್ ಮಾರುಕಟ್ಟೆಗೆ ವಿವಿಧ ಇಲಾಖೆಗೆ ತೆರಳುವ ಸೂಕ್ತ ಜಾಗವಾಗಿದೆ ಹಾಗೂ ಈ ಕಡೆ ಭಾಗವದ ರಾಣೇಬೆನ್ನೂರ ಹಾವೇರಿ ಹುಬ್ಬಳಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸರಕಾರಿ ಕಚೇರಿಗೆ ವಿದ್ಯಾರ್ಥಿಗಳು ಸ್ಕೂಲ್ ಕಾಲೇಜ್ ಕೋರ್ಟ್ ಕಛೇರಿಗೆ ತೆರಳಲು ಸಾಕಷ್ಟು ಪ್ರಯಾಣಿಕರು ಕೂಲಿ ಕಾರ್ಮಿಕರು ತೆರಳುವ ಸೂಕ್ತ ಜಾಗ ವಾಗಿರುವದರಿಂದ ಮಹಿಳೆಯರು ಮಕ್ಕಳು ವಯಸ್ಸಾದ ವೃದ್ಧರು ಬರುತ್ತಾರೆ ಮಾನ್ಯ ಶಾಸಕರು ದಯವಿಟ್ಟು ಡಿಪೋ ಮ್ಯಾನೇಜರಗೆ ತಿಳಿಸಿ ಮಾಕನೂರು ಕ್ರಾಸ್ ಗೆ ಬರುವಂತ ರಾಣೇಬೆನ್ನೂರು ಡಿಪೋ ಹಾವೇರಿ ಡಿಪೋ ಹುಬ್ಬಳ್ಳಿ ಡಿಪೋ ಮತ್ತು ದಾವಣಗೆರೆ ಡಿಪೋ ಹರಿಹರ ಡಿಪೋದಿಂದ ಬರುವಂತಹ ಬಸ್ಸುಗಳಿಗೆ ಮಾಕನೂರು ಕ್ರಾಸ್ ಗೆ ನಿಲ್ಲಿಸಲು ಸೂಚನೆ ನೀಡಿ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ ಈ ಹಿಂದೆ ಎಲ್ಲಾ ಬಸ್ಸುಗಳು ಕೂಡ ನಿಲ್ಲುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಬಹಳ ಬಸುಗಳು ನಿಲ್ಲುವುದು ಕಡಿಮೆಯಾಗಿದೆ ಆದ್ದರಿಂದ ತಾವು ಇದನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ದಯವಿಟ್ಟು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಸಿದ್ದರೋಡ ಗುರುo ಮರಡೆಪ್ಪ ಚಳಗೇರಿ ಆನಂದ ಲಮಾಣಿ ರಾಜು ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.