Home » ರಂಗುರಂಗಿನ ಬಣ್ಣ ದಾಟದಲ್ಲಿ ಮಿಂದೆದ್ದ ಪತ್ರಕರ್ತರು

ರಂಗುರಂಗಿನ ಬಣ್ಣ ದಾಟದಲ್ಲಿ ಮಿಂದೆದ್ದ ಪತ್ರಕರ್ತರು

ವೀರಮಾರ್ಗ ನ್ಯೂಸ್ ಗದಗ : ದಿನ ಬೆಳಗಾದರೆ ಸಾಕು ಒಂದಿಲ್ಲೊಂದು ಸುದ್ದಿ ಹುಡುಕುತ್ತ ಪಟ್ಟಣ. ಹಾಗೂ ಗ್ರಾಮಗಳಿಗೆ ತೆರಳಿ ಸುದ್ದಿ ಹುಡುಕುವ ಪತ್ರಕರ್ತರು ಒತ್ತಡ ಜೀವನ ನಡೆಸುತ್ತಾರೆ.
ಅಂತಹ ಒತ್ತಡದಲ್ಲು ತಾಲೂಕಿನ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಮಂಗಳವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಒಂದಾಗಿ ಸೇರಿ ಹೋಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಪರಸ್ಪರ ಬಣ್ಣ ಹಚ್ಚುವ ಮೂಲಕ ರಂಗಪಂಚಮಿಗೆ ಮೆರಗು ತಂದರು.
ಈ ಸಂತಸದ ಸಮಯವನ್ನು ಕಳೆದು ಎಲ್ಲಾ ಒತ್ತಡಗಳನ್ನು ಮರೆತು ರಂಗುರಂಗಿನ ಬಣ್ಣ ದಾಟದಲ್ಲಿ ಮಿಂದೆದ್ದು ಸಾರ್ವಜನಿಕರ ಗಮನ ಸೆಳೆದರು ಪಟ್ಟಣದ ತುಂಬೆಲ್ಲಾ ಪತ್ರಕರ್ತರು ಒಂದುಗೂಡಿ ಬೈಕ್ ಮೇಲೆರಿ,ತಮ್ಮ ಸ್ನೇಹಿತರಿಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ,ರಾಜಕೀಯ ಮುಖಂಡರಿಗೆ, ಯುವಕರಿಗೆ ಮತ್ತಿತರರಿಗೆ ಪರಸ್ಪರ ಬಣ್ಣ ಎರೆಚಿ ಅಲ್ಲಲ್ಲಿ ಹೋಳಿ ಹಬ್ಬದ ಫೋಟೋವನ್ನು ಕ್ಲಿಕ್ಕಿಸಿದರು.

ಬಹುತೇಕ ರಂಗ ಪಂಚಮಿ ಯನ್ನು ಒರತು ಪಡಿಸಿದರೆ ವರ್ಷದುದ್ದಕ್ಕೂ ದಿನ ಒಂದಿಲ್ಲೊಂದು ಸುದ್ದಿ, ವಿಶೇಷ ಸ್ಟೋರಿ, ಕಥೆ ಕವನ, ಬರೆಯುವುದು ಮತ್ತು ಕಾರ್ಯಕ್ರಮಗಳ ಒತ್ತಡ ದಲ್ಲಿರುವ ಪತ್ರಕರ್ತರಿಗೆ ರಂಗ ಪಂಚಮಿ ವಿಶೇಷವಾಗಿತ್ತಾದರು ಮತ್ತೆ ಸಂಜೆ ಆಗುತ್ತಲೆ, ರಂಗ ಪಂಚಮಿ ಸುದ್ದಿಯನ್ನು ಕಳಿಸಲಿಕ್ಕೆ ಲಗು ಬಗೆಯಿಂದ ನಡೆದರು.
ಈ ಸಂದರ್ಭದಲ್ಲಿ ಕಾನಿಪ ಸಂಘ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ, ನಾಗರಾಜ ಹಣಗಿ, ಅಶೋಕ ಸೋರಟೂರ, ದಿಗಂಬರ ಪೂಜಾರ, ಮಹಾಳಿಂಗರಾಯ ಪೂಜಾರ ಸುರೇಶ ಲಮಾಣಿ, ಶಿವಲಿಂಗಯ್ಯ ಹೊತಗಿಮಠ ಇದ್ದರು.

Leave a Reply

Your email address will not be published. Required fields are marked *