ವೀರಮಾರ್ಗ ನ್ಯೂಸ್ : BENGALUR STATE NEWS : ರಾತ್ರಿ ವೇಳೆ ನಾನು ಪೊಲೀಸ್ ಅಂತ ಯುವತಿಯರ ರೂಂಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಹೋಂ ಗಾರ್ಡ್ ಸುರೇಶ್ ಕಿರುಕುಳ ಕೊಡ್ತಿದ್ದ.. ಪೊಲೀಸರು ಸ್ಥಳಕ್ಕೆ ಬರ್ತಿದ್ದಂತೆ ಹೋಂ ಗಾರ್ಡ್ ಬಣ್ಣ ಬಯಲು. ಕಳೆದ ಆರು ತಿಂಗಳಿನಿಂದ ಟಾರ್ಚರ್ ಕೊಡ್ತಿದ್ದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಸುರೇಶ್ ವಿರುದ್ಧ FIR ದಾಖಲು.
ಕೇರಳದಿಂದ ಬೆಂಗಳೂರಿಗೆ ಬಂದು ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಓದ್ತಿದ್ದ ವಿದ್ಯಾರ್ಥಿನಿ. 2ನೇ ವರ್ಷದ ಬಿಎಸ್ ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಂ ಮಾಡಿಕೊಂಡಿದ್ದಳು. ಜನವರಿ 25ರಂದು ಊಟ ಮಾಡಿ ಮಲಗಿದ್ದಾಗ ರಾತ್ರಿ ಯಾರೋ ಕದ ತಟ್ಟಿದ್ದಾರೆ ಬಾಗಿಲು ತೆಗೆದಾಗ ನಾನು ಪೊಲೀಸ್ ಅಂತ ಹೇಳಿ ಒಳಗಡೆ ಹೋಗಿದ್ದ ವ್ಯಕ್ತಿ.

ಯುವತಿ ಆಕೆಯ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದರೆಂದು ತಿಳಿಸ್ತಾಳೆ. ಆಗ ಏಕಾಏಕಿ ರೂಮಿನ ಒಳಗೆ ನುಗ್ಗಿ ವ್ಯಕ್ತಿ ಡೋರ್ ಲಾಕ್ ಮಾಡಿ ಎಲ್ಲರ ಮೊಬೈಲ್ ಹೆದರಿಸಿ ವಶಕ್ಕೆ. ಜೊತೆಗೆ ಯುವತಿ ಕರೆ ಮಾಡಿದ್ಲು ಅಂತ ಬಂದಿದ್ದ ಆಕೆಯ ಸ್ನೇಹಿತರಿಗೂ ಕಿರುಕುಳ. ಮೊಬೈಲ್ ವಶಕ್ಕೆ ಪಡೆದು ಮಂಡಿಕಾಲಿನಲ್ಲಿ ನಿಲ್ಲಿಸಿ ಯುವತಿರಿಗೆ ಟಾರ್ಚರ್.
ತಡರಾತ್ರಿ 1.30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ. ಹೋಂಗಾರ್ಡ್ ಒಬ್ಬ ನಾನು ಪೊಲೀಸರು ಅಂತ ಕಿರುಕುಳ ಕೊಡ್ತಿದ್ದ ಅನ್ನೋದು ಗೊತ್ತಾಗುತ್ತೆ. ಕಳೆದ 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಟಾರ್ಚರ್. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಸುರೇಶ್ ವಿರುದ್ಧ ಪ್ರಕರಣ ದಾಖಲು..!
ವರದಿ : ಚನ್ನೇಶ್ ಎಂ. ಬೆಂಗಳೂರು.