ಶ್ರೀ ದುರ್ಗಾದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಶ್ರೀಗಳಿಂದ ಚಾಲನೆ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ, ಶ್ರೀ ದುರ್ಗಾದೇವಿ ನೂತನ ಉತ್ಸವ ಮೂರ್ತಿ ಮೆರವಣಿಗೆಗೆ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ, ಕೆಂಡದಮಠದ ಶ್ರೀ ಶಿವಪುತ್ರಯ್ಯ ಸ್ವಾಮಿಜಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆ ಸಕಲ ವಾಧ್ಯವೈಭವಗಳೊಂದಿಗೆ ಹೊಂಡದ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಪಟ್ಟಣದ ರಾಜಬೀದಿಗಳಲ್ಲಿ ಸಾಗಿಬಂದಿತು. ಮೆರವಣಿಗೆಯನ್ನು ಭಕ್ತರೂ ತಳಿರು ತೋರಣಕಟ್ಟಿ, ರಂಗೋಲಿಹಾಕಿ ಬರಮಾಡಿಕೊಂಡು ಉತ್ಸವಮೂರ್ತಿಗೆ ಹೂವಿನಹಾರ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿನಮನ ಸಲ್ಲಿಸಿದರು. ಮೇರೌಣಿಗೆ ಉದ್ದಕ್ಕೂ ಬೆಂಡಬಾಜಾ, ಕೋಲಾಟ, ಡೊಳ್ಳುಮೇಳ ಸೇರಿದಂತೆ ವಿವಿಧ ವಾಧ್ಯಮೇಳಗಳು ಗಮನ ಸೇಳೆದವು. ಜಾತ್ರೋತ್ಸವ ನಿಮಿತ್ಯ ಪಟ್ಟಣವೇಲ್ಲಾ ವಿದ್ಯುತ್ ದೀಪ್, ಸ್ವಾಗತ ಕೊರುವ ಕಟೌಟ್, ತಳಿರು, ತೋರಣ, ಕೇಸರಿ ಭಾವುಟಗಳಿಂದ ಶ್ರೀಂಗಾರಗೊಂಡು ಜಾತ್ರೋತ್ಸವದ ಮೇರಗನ್ನು ಇಮ್ಮಡಿಗೊಳಿಸುವಂತಿತ್ತು. ಮೇರವಣಿಗೆ ಸಾಗಿಬಂದು ಪುನ: ಹೊಂಡದ ದುರ್ಗಾದೇವಿ ಆವರಣಕ್ಕೆ ಬಂದು ಸಮಾರೊಪಗೋಂಡಿತು.

ತನ್ನಿಮಿತ್ಯ ಪ್ರಾಥ:ಕಾಲ ಪುಟ್ಟಯ್ಯಸ್ವಾಮಿ ಹುಚ್ಚಯ್ಯನಮಠ ರವರಿಂದ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ದೇವಿಗೆ ಉಡಿತುಂಬವ ಕಾರ್ಯಕ್ರಮ ನಡೆಯಿತು. ನಂತರ ಫಲ್ಲಕ್ಕಿ ಮಹೋತ್ಸವ ಜರುಗಿತು.

ಮೂರ್ತಿದಾನಿಗಳಾದ ದಿವಾಕರ ವೇರ್ಣೇಕರ, ಅನ್ನಪ್ರಸಾದ ಸೇವಾರ್ಥಿ ಪಿ.ಎಸ್.ಐ.ಪರಸುರಾಮ ನಿರೋಳ್ಳಿ, ಜಾತ್ರೋತ್ಸವ ಸೇವಾ ಸಮೀತಿ ಅಧ್ಯಕ್ಷ ವೀರುಪಾಕ್ಷಪ್ಪ ಹುರಳಿ, ಕ.ಸಾ.ಪ ಹೊಬಳಿ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ, ನ್ಯಾಯವಾದಿ ಬಿ.ಎಂ.ಸುಂಕದ, ಸತೀಷ ಆಲದಕಟ್ಟಿ, ಸೋಮು ಕುರಿ, ನಿಂಗನಗೌಡ್ರ ಪಾಟೀಲ, ಸುರೇಶ ರಾಣೋಜಿ, ನೀಲಪ್ಪ ಕುರಿ, ಮಹಬಳೇಶ ಹೊನಕೇರಿ, ವಿಜಯ್ ರಾಣೋಜಿ, ರಾಮಕೃಷ್ಣ ಆಲದಕಟ್ಟಿ, ಬಿ.ಎಸ್.ಗಿಡ್ಡಣ್ಣವರ ಸೇರಿದಂತೆ ಇತರರು ಇದ್ದರು.