ಸಸಿಗಳನ್ನು ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡು ಅಕ್ಸಿಜನ್ ಕ್ರಾಂತಿ ಯೋಜನೆಗೆ ಬೆಂಬಲ ನೀಡುವ ಕಾರ್ಯ ಶ್ಲಾಘನೀಯ ….. ಪಂಪಾಪತಿ ಕೆ.ಎಸ್.
ಸಿಂಧನೂರು ನಗರದ ಜನತಾ ಕಾಲೋನಿಯ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶನಿವಾರ ವನಸಿರಿ ಪೌಂಡೇಷನ್(ರಿ). ರಾಯಚೂರು ರಾಜ್ಯ ಘಟಕದ ವತಿಯಿಂದ ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಕಾರ್ಯಕ್ರಮ ಹಾಗೂ ಪರಿಸರ ಪ್ರೇಮಿಗಳು,ಶಿಕ್ಷಣ ಪ್ರೇಮಿಗಳು ಹಾಗೂ ವನಸಿರಿ ಪೌಂಡೇಷನ್ ಮಾರ್ಗದರ್ಶಕರಾದ ಶಂಕರಗೌಡ ಎಲೆಕೊಡ್ಲಿಗಿ ಅವರ 41ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಪಂಪಾಪತಿ ಮಾತನಾಡಿ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ…