Headlines
Home » Archives for ವೀರಾ ಮಾರ್ಗ

ವೀರಾ ಮಾರ್ಗ

ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ತಾಲೂಕಿನ ಶಾಲೆ ಕೇಂದ್ರ ಪುರಸ್ಕೃತ, ಪಿಎಂಶ್ರೀ ಶಾಲೆಯನ್ನಾಗಿ ಪರಿವರ್ತನೆ. ವೀರಮಾರ್ಗ ನ್ಯೂಸ್ : ಡಲಗಿ : ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೊಂದು ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು, ತಾಲ್ಲೂಕಿನ ಅರಳಿ ಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಪುರಸ್ಕೃತ ಪಿ ಎಂಶ್ರೀ ಶಾಲೆಯನ್ನಾಗಿ ಪರಿವರ್ತನೆ ಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ದೇಶದಲ್ಲಿನ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ರೀತಿಯಲ್ಲಿ ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು…

Read More

Hindu Vs Vedic ; “ಹಿಂದೂ Vs ವೈದಿಕ…”

ಸಿಂಧೂ ಕಣಿವೆಯ ಶಿವ-ದ್ರಾವಿಡ ಸಂಸ್ಚೃತಿಯ ೪೬೦೦ ವರ್ಷಗಳ ಹಿಂದೆ ಈ ನೆಲದಲ್ಲಿ…“ಇಂದ್ರ ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ…ರಾಮಚಂದ್ರನ ವಿಳಾಸವಿರಲಿಲ್ಲ…ಪಂಚ-ಪಾಂಡವರ ಹೆಸರು ಗೊತ್ತಿರಲಿಲ್ಲ… ಆಗ ಇಲ್ಲಿದ್ದದ್ದು ಒಂದೇˌ ಅದು… “ಶಿವಶಂಭೋ…” ಹಿಂದೂ ಬಹುಜನರ ಪೂರ್ವಜರ ಸಂಸ್ಕೃತಿಯಲ್ಲಿ ‘ಶಿವ’ ಅಥವಾ ‘ಶಂಕರ್’ ಬಹಳ ಮುಖ್ಯವಾದ ಹೆಸರು. ಇಂದ್ರ ವೈದಿಕರ ದೇವರು. ವೇದಗಳಿಗಿಂತ ಮೊದಲು ಇಂದ್ರನ ಅಸ್ತಿತ್ವಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ವೇದಕಾಲದ ನಂತರ ರಾಮಾಯಣ-ಮಹಾಭಾರತ ಕಥೆಗಳು ಸೃಷ್ಟಿಯಾದವು. ಅವೆಲ್ಲವುಕ್ಕಿಂತ ಮೊದಲು ಈ ನೆಲದಲ್ಲಿ ಇದ್ದದ್ದು ಶಿವಶಂಕರ ಮಾತ್ರ… ಹಿಂದೆ ಮತ್ತು…

Read More

ಮುಂದಿನ ವರ್ಷದಿಂದ ರಾಜ್ಯದಲ್ಲಿ ಹೆಚ್ಚುವರಿ ಅದಾಯದ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ ಭರವಸೆ

ವೀರಮಾರ್ಗ ನ್ಯೂಸ್ : ಬೆಂಗಳೂರು : ಮುಂದಿನ ವರ್ಷದಿಂದ ರಾಜ್ಯದಲ್ಲಿ ಹೆಚ್ಚುವರಿ ಅದಾಯದ (ರೆನ್ ಸರ್ ಪಾಸ್) ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ರಾಜ್ಯದ ಸಾಲದ ಕುರಿತು ಆರೋಪ ಪ್ರತ್ಯಾರೋಪಗಳು ಮಾತಿನ ಚಕಮಕಿ ನಡೆಯಿತು.ವಿರೋಧಪಕ್ಷದ ನಾಯಕ ಆ‌ರ್.ಅಶೋಕ್, 4.09 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ 3.11 ಲಕ್ಷ ಕೋಟಿ ರೂ. ರಾಜಸ್ವ ವೆಚ್ಚವನ್ನು ನಿಗದಿ ಮಾಡಲಾಗಿದೆ. ಇದು ಶೇ.76 ರಷ್ಟಿದ್ದರೆ ಬಂಡವಾಳ ವೆಚ್ಚಕ್ಕೆ ಕೇವಲ 17.4 ರಷ್ಟು ಮೀಸಲಿಡಲಾಗಿದೆ. 11.36…

Read More

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ

ವೀರಮಾರ್ಗ ನ್ಯೂಸ್ : ಬೆಂಗಳೂರು : ದಿನದಿಂದ ದಿನಕ್ಕೆ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ನ್ಯೂಸ್‌‍ (ಸುಳ್ಳು ಸುದ್ದಿ) ಹಬ್ಬಿಸುವವರ ಕಟ್ಟು ನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ನವೀನ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ 22 ಸಾವಿರ ಸೈಬರ್‌ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಇದರ…

Read More

1032 ಔಷಧಿಗಳ ಉಚಿತ ಪೂರೈಕೆಗೆ ಕ್ರಮ : ದಿನೇಶ್‌

ವೀರಮಾರ್ಗ ನ್ಯೂಸ್ :ಬೆಂಗಳೂರು : ರಾಜ್ಯದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ 1,032 ಔಷಧಿಗಳನ್ನು ಖರೀದಿಸಿ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿಯ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಪ್ರಶ್ನೆ ಕೇಳಿ, ರಾಜ್ಯಸರ್ಕಾರ ನಿಯಮಾನುಸಾರ 761 ಔಷಧಿಗಳು ಲಭ್ಯವಿರಬೇಕಿತ್ತು. ಆದರೆ ವಾಸ್ತವವಾಗಿ 231 ಮಾತ್ರ ಇದೆ.ನಾಲ್ಕು ವರ್ಷಗಳಿಂದಲೂ ಔಷಧಿ ಖರೀದಿಗೆ ಟೆಂಡರ್‌ ಆಗಿಲ್ಲ. ರಾಷ್ಟ್ರೀಯ ಆರೋಗ್ಯ ಕಾರ್ಯ ಯೋಜನೆಯಡಿ 2024-25ನೇ…

Read More

ಜೈಲಿನೊಳಗಿನ ಅಪರಾಧ ಹಾಗೂ ಅಕ್ರಮಗಳ ತಡೆಗೆ ಆಧುನಿಕ ತಂತ್ರಜ್ಞಾನ ಬಳಕೆ : ಪರಮೇಶ್ವರ್‌

ವೀರಮಾರ್ಗ ನ್ಯೂಸ್ : ಬೆಂಗಳೂರು: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜೈಲಿನೊಳಗಿನ ಅಪರಾಧ ಹಾಗೂ ಅಕ್ರಮಗಳ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ವಿಧಾನಪರಿಷತ್‌ನಲ್ಲಿ ಹೇಳಿದರು.ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಅವರ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್‌ ಅವರು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜೈಲಿನಲ್ಲಿ ನಡೆಯುತ್ತಿರುವ ಆಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಜೊತೆಗೆ ಹೈ ರೆಸ್ಯೂಲೂಷನ್‌ ಜಾಮರ್‌ ಗಳ ಅಳವಡಿಕೆ ಮಾಡಿ ಅಪರಾಧಿಗಳ ನಡುವಿನ ಸಂವಹನಕ್ಕೆ ಕಡಿತ…

Read More

ಸಾಮಾನ್ಯ ಸಭೆಯ ನಡಾವಳಿಗೆ ಧಕ್ಕೆ: ವಿರೋಧಕ್ಕೆ-ಉಪಸೂಚನೆಗೆ ಬೆಲೆ ಕೊಡದೇ.

ವೀರಮಾರ್ಗ ನ್ಯೂಸ್ : ಸಾಮಾನ್ಯ ಸಭೆಯ ನಡಾವಳಿಗೆ ಧಕ್ಕೆ: ವಿರೋಧಕ್ಕೆ-ಉಪಸೂಚನೆಗೆ ಬೆಲೆ ಕೊಡದೇ 87 ವಿಷಯಗಳು ಅನುಮೋದನೆಗೊಂಡಿವೆಂದು ಠರಾವು; ನ್ಯಾಯಾಲಯಕ್ಕೆ ಹೋಗದಂತೆ ಕೇವಿಯಟ್..! ನ್ಯಾಯ ಎಲ್ಲಿದೆ ಎಂದ ಬಿಜೆಪಿಯ 11 ನಗರಸಭಾ ಸದಸ್ಯರು..! ರಾಣೆಬೆನ್ನೂರ :- ಕಳೆದ ತಿಂಗಳು ಫೆ.20ರಂದು ನಗರ ಸಭೆಯ ಸಭಾಂಗಣದಲ್ಲಿ ಜರುಗಿದ ಸರ್ವ ಸದಸ್ಯರ ಸಾಮಾನ್ಯ ಸಭೆ -ಯಲ್ಲಿ ಒಟ್ಟು 87 ವಿಷಯಗಳು ಪ್ರಸ್ತಾಪಗೊಂಡಿದ್ದು, ಎಲ್ಲಾ ವಿಷಯ ಗಳು ಅನುಮೋದನೆ ಗೊಂಡಿವೆ. ಎಂದು ಅಧ್ಯಕ್ಷೆ ಚಂಪಕಾ ಬಿಸಲಳ್ಳಿ ಸೇರಿ ಆಡಳಿತ ಪಕ್ಷದವರು ಠರಾವು…

Read More

ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು : ಡಾ. ವಿಜಯ ಸಂಕೇಶ್ವರ

ವೀರಮಾರ್ಗ ನ್ಯೂಸ್ : ಬಾಳೆಹೊನ್ನೂರು : ಭಾವೈಕ್ಯತೆ ಮತ್ತು ಆಧ್ಯಾತ್ಮ ಭಾರತದ ಉಸಿರು. ಸಾತ್ವಿಕ ತಾತ್ವಿಕ ಹಿತ ಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆಯನ್ನು ಕಟ್ಟಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಾಂತಿ ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಬುಧವಾರ ಬೆಳಿಗ್ಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಂದರ್ಭದಲ್ಲಿ ಜರುಗಿದ…

Read More

ನಾಲ್ಕು ಸಾರಿಗೆ ನಿಗಮಗಳಿಗೆ ೫,೨೦೦ ಕೋಟಿ ನಷ್ಟ

ನಾಲ್ಕು ಸಾರಿಗೆ ನಿಗಮಗಳಿಗೆ ೫,೨೦೦ ಕೋಟಿ ನಷ್ಟ ಬೆಂಗಳೂರು : ತೈಲಬೆಲೆ ಏರಿಕೆ, ಸಿಬ್ಬಂದಿ ವೇತನ,ಬಸ್ ಗಳ ನಿರ್ವಹಣೆ ಇನ್ನಿತರ ಕಾರಣಗಳಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳು ೫೨೦೦ ಕೋಟಿ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ವಿಧಾನಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಳೆದ ೫ ವರ್ಷಗಳಲ್ಲಿ ಕೆಎಸ್‌ಆರ್‌ಟಿಸಿಗೆ ೧೫೦೦ ಕೋಟಿ, ಬಿಎಂಟಿಸಿಗೆ ೧೫೪೪ ಕೋಟಿ. ಕೆಕೆಆರ್‌ಟಿಸಿಗೆ ೭೭೭…

Read More

ಗ್ಯಾರಂಟಿ ಸಮಿತಿ ವಿರುದ್ಧ ರಾಜ್ಯಪಾಲರಿಗೆ ವಿಪಕ್ಷಗಳಿಂದ ದೂರು

ಗ್ಯಾರಂಟಿ ಸಮಿತಿ ವಿರುದ್ಧ ರಾಜ್ಯಪಾಲರಿಗೆ ವಿಪಕ್ಷಗಳಿಂದ ದೂರುವೀರಮಾರ್ಗ ನ್ಯೂಸ್ : ಬೆಂಗಳೂರು: ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಗ್ಯಾರಂಟಿಗಳ ಅನುಷ್ಠಾನ ಸಮಿತಿಗೆ ಕಾಂಗ್ರೆಸ್‌‍ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್‌‍ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎರಡೂ ಪಕ್ಷಗಳ ಶಾಸಕರು, ವಿಧಾನಪರಿಷತ್‌ ಸದಸ್ಯರು ರಾಜಭವನಕ್ಕೆ ತೆರಳಿ ದೂರು ನೀಡಿದ್ದಾರೆ.ರಾಜ್ಯಪಾಲ ಥಾವರ್‌ಚಂದ್‌…

Read More