ವಸತಿ ನಿಲಯವೊಂದರ ಬಾಲಕಿ ಹೆರಿಗೆಯಾದ ಘಟನೆ ನಡೆದಿದೆ.

ಯಾದಗಿರಿ : ಜಿಲ್ಲೆಯ ಶಹಪುರ ಪಟ್ಟಣದ ವಸತಿ ನಿಲಯವೊಂದರ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ.

ಯಾದಗಿರಿ ಹಾಸ್ಟೆಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹೈಸ್ಕೂಲ್ ವಿದ್ಯಾರ್ಥಿನಿ : ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದ ವಾರ್ಡನ್ದಗ ಜಿಲ್ಲೆಯ ಶಹಪುರ ವಸತಿ ನಿಲಯವೊಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿಯೇ ಹೆರಿಗೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನವನ್ನು ಹಾಗೂ ಹಾಸ್ಟೆಲ್‌ ವತಿಯ ನಿರ್ಲಕ್ಷ್ಯ ಮನೋಭಾವವನ್ನು ಎತ್ತಿ ತೋರಿಸಿದೆ. ಹೆರಿಗೆಯಾದ ವಿದ್ಯಾರ್ಥಿನಿ ಮತ್ತು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ. ಬಾಲಕಿ ಗರ್ಭಿಣಿಯಾಗಲು ಕಾರಣ ಯಾರು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ ಎನ್ನಲಾಗಿದೆ

ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ಗರ್ಭ ಧರಿಸಲು ಕಾರಣ ಏನು ಎಂಬುದರ ಪತ್ತೆಗೆ ಕ್ರಮ

ಗರ್ಭಿಣಿಯಾಗಿದ್ದು ತಿಳಿದಿರಲಿಲ್ಲ ಎಂದ ವಾರ್ಡನ್ ಮತ್ತು ಪ್ರಾಂಶುಪಾಲರು

ಯಾದಗಿರಿ ಹಾಸ್ಟೆಲ್‌ವೊಂದರ ಶೌಚಾಲಯದಲ್ಲೇ ಹೈಸ್ಕೂಲ್ ವಿದ್ಯಾರ್ಥಿನಿಗೆ ಹೆರಿಗೆ.

ಶಹಪುರದಲ್ಲಿರುವ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಬುಧವಾರ ಶೌಚಕ್ಕೆ ಹೋದಾಗ 2:30ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಇದು ಶಿಕ್ಷಣ ಇಲಾಖೆ ಸೇರಿದಂತೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಜೊತಗೆ ವಸತಿ ನಿಲಯದಲ್ಲಿರುವ ಇನ್ನಷ್ಟು ವಿದ್ಯಾರ್ಥಿನಿಯರ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.

ಯಾದಗಿರಿ : ಜಿಲ್ಲೆಯ ಶಹಪುರ ಪಟ್ಟಣದ ವಸತಿ ನಿಲಯವೊಂದರ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ.