ಮೊದಲ ಭಾರಿಗೆ ದಾಖಲೆಯ 500 ಜನಪದ ಕಲಾ ತಂಡಗಳಿಂದ ಕುಣಿಗಲ್ ಉತ್ಸವಕ್ಕೆಕುಣಿಗಲ್ ಉತ್ಸವಕ್ಕೆಜನಪ್ರಿಯ ಶಾಸಕಡಾ. ಎಚ್ ಡಿ ರಂಗನಾಥ್ ಅವರಿಂದವೈಭವದ ಚಾಲನೆ.!

ಐತಿಹಾಸಿಕ ತುಮಕೂರು ಜಿಲ್ಲೆಯ ಕುಣಿಗಲ್ ನಾಡಿನೆಲ್ಲ ಡೇ. ಕುಣಿಗಲ್ ಕೆರೆಯ ಜನಪದ ಹಾಡಿಗೆ ಮತ್ತು ಕುಣಿಗಲ್ ಕುದುರೆಗೆ ಹೆಸರುವಾಸಿಯಾದದ್ದು ಈ ಖ್ಯಾತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಜನಪದ ಜಾತ್ರೆಯ ಪ್ರಧಾನ ಸಂಚಾಲಕ ಮಂಡ್ಯದ ಕುಂತುರ ಕುಮಾರ್ ಅವರ ನೇತೃತ್ವದ ಮಂಡ್ಯ ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ.

ಮೊದಲ ಭಾರಿಗೆ ದಾಖಲೆಯ 500 ಜನಪದ ಕಲಾ ತಂಡಗಳಿಂದ ವೈವಿಧ್ಯಮಯ ಜನಪದ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದ ಕುಣಿಗಲ್ ಉತ್ಸವಕ್ಕೆ ಜನಪ್ರಿಯ ಶಾಸಕ ಡಾ. ಎಚ್ ಡಿ ರಂಗನಾಥ್ ಅವರು ಜನಪದ ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ವೇದಿಕೆಯಲ್ಲಿ ವೈಭವದ ಜನಪದ ಕಲಾತಂಡಗಳಿಂದ ಜಾನಪದ ಕಲಾ ಮೇಳಗಳ ಪ್ರದರ್ಶನ ನೆರೆದಿದ್ದ ಜನಮನವನ್ನು ರ೦ಚಿಸಿತು. ಡಾ. ಅಪ್ಪಗೆರೆ ತಿಮ್ಮರಾಜು ಅವರ ಜನಪದ ಗಾಯನದ ಸೊಬಗು ಕೆ ಎನ್ ನಾಗೇಶ್ ರವರ ಜನಪದ ಹಾಡುಗಾರಿಕೆ. ಸಬ್ಬನಹಳ್ಳಿ ರಾಜು ಅವರ ಮುಂದಾಳತ್ವ ಪ್ರಕಾಶ್ ಮಲ್ಲಿಗೆವಾಡ ಅವರ ಜಾನಪದ ನೃತ್ಯ ವೈಭವ ಇನ್ನುಳಿದ ವೈವಿಧ್ಯಮಯ ಜನಪದ ಕಲಾತಂಡಗಳ ಮಿಶ್ರಣದ ಜಾನಪದ ಕಲಾ ಮೇಳದ ಸೊಭಗು ನರೆದಿದ್ದ ಸಹಸ್ರಾರು ಪೇಕ್ಷಕರ ಮನಸ್ಸನ್ನು ಸೂರೆಗೊಂಡವು.

Leave a Reply

Your email address will not be published. Required fields are marked *