ಕಾರ್ತೀಕ ದೀಪೋತ್ಸವಗೌರಿ ಹುಣ್ಣಿಮೆಯ ದಿನ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾ।। ಕತ್ತಿಗೆ ಗ್ರಾಮದಲ್ಲಿ.

ಶ್ರೀ ವೇ॥ ಚನ್ನೇಶ್ವರ ಸ್ವಾಮಿಗಳವರ ನೇತೃತ್ವದಲ್ಲಿ ಕತ್ತಿಗೆ ಮಠದ ಓಂ ಶ್ರೀ ಗುರು ಚನ್ನಪ್ಪಸ್ವಾಮಿಗಳವರ ಕಾರ್ತೀಕ ದೀಪೋತ್ಸವ
ಗೌರಿ ಹುಣ್ಣಿಮೆಯ ದಿನ 24/11/2826 ಮಂಗಳವಾರ ಸಂಜೆಯಿಂದ ಶ್ರೀ ಮಠದಲ್ಲಿ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಿ 25/11/2026ಬುಧವಾರ ಬೆಳಗಿನ ಜಾವದಲ್ಲಿ ಗ್ರಾಮದ ಎಲ್ಲಾ ದೇವರುಗಳಾದ ಶ್ರೀ ಆಂಜನೇಯ ಸ್ವಾಮಿ ಶ್ರೀ ಬಸವೇಶ್ವರ ಸ್ವಾಮಿ, ಬೀರಲಿಂಗೇಶ್ವರ ದೇವರುಗಳ ಉತ್ಸವದೊಂದಿಗೆ ಶ್ರೀ ಚನ್ನಪ್ಪ ಸ್ವಾಮಿಯ ಕಾರ್ತಿಕೋತ್ಸವವೂ ಜರುಗಲಿದು ಸಕಲ ಸದ್ಭಕ್ತರಿಗೆ ಕಾರ್ತಿಕೋತ್ಸವದಲ್ಲಿ ಭಾಗಿಯಾಗಿ ಶ್ರೀ ಕೃಪೆಗೆ ಪಾತ್ರರಾಗಲು ಮಠದ ಸದ್ಭಕ್ತರು ಮತ್ತು ಗ್ರಾಮಸ್ಥರ ಪರವಾಗಿ ಮಠದ ಶಿಷ್ಯರಾದ ಶ್ರೀ ಪವನ್ ಶಾಸ್ತ್ರಿಗಳು ತಿಳಿಸಿದ್ದಾರೆ.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು.