ಕಬ್ಬುಸುಟ್ಟಹೊಲಕ್ಕೆ ಹೆಸ್ಕಾಂ 1 ಲಕ್ಷಪರಿಹಾರ ತಕ್ಷಣವೇ ಕೊಡಲಿ.

ಹಾವೇರಿ ತಾಲೂಕು ಸಂಗೂರ ಗ್ರಾಮದಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಇಪ್ಪತ್ತು ಎಕರೆ ಕಬ್ಬು ಸುಟ್ಟು ಹೋಗಿದೆ. ಕಬ್ಬು ಸುಟ್ಟ ಹೊಲಕ್ಕೆ ಹೆಸ್ಕಾಂ 1 ಲಕ್ಷ ಪರಿಹಾರ ತಕ್ಷಣವೇ ಕೊಡಲಿ. ಸಿಹಿ ಕೊಡುವ ರೈತರಿಗೆ ವಿಷ ಕೊಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ

ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಈ ಒಂದು ವಾರದಲ್ಲಿ 80ಕ್ಕೂ ಹೆಚ್ಚು ಎಕರೆ ಕಬ್ಬಿನ ಬೆಳೆ ವಿದ್ಯುತ್ ಸ್ಪರ್ಶದಿಂದ ಸುಟ್ಟು ಹೋಗಿವೆ ರೈತರ ಬದುಕು ಬೆಂಕಿಯಲ್ಲಿ ಸುಟ್ಟು ಬೆಂದು ಹೋಗಿದೆ ಆದ ಕಾರಣ ಇದಕ್ಕೆ ನೇರವಾಗಿ ಎಸ್ಕಾಂ ಇಲಾಖೆ ತಕ್ಷಣವೇ ಒಂದು ಎಕರೆಗೆ ಒಂದು ಲಕ್ಷ ರೂಪಾಯಿಯಂತೆ ಪರಿಹಾರ ಕೊಡಬೇಕು ಹೊಲಗಳಲ್ಲಿ ಮೂವತ್ತು ನಲವತ್ತು ವರ್ಷಗಳಿಂದ ಕರೆಂಟ್ ಕಂಬ ಹಾಗೂ ತಂತಿಗಳನ್ನು ಹಾಕಿದ್ದು ಅವು ಜೊತು ಬಿದ್ದು ಗಾಳಿ ಬಿಟ್ಟಾಗ ಒಂದಕ್ಕೊಂದು ಸ್ಪರ್ಶವಾಗಿ ಕಬ್ಬಿನ ಹೊಲಗಳಿಗೆ ಬೆಂಕಿ ಹತ್ತಿ ಅನಾಹುತವಾಗಿವೆ ತಕ್ಷಣವೇ ಇಲಾಖೆಯವರು ಎಲ್ಲ ಲೈನ್ ಗಳನ್ನು ಸರಿಪಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲವಿದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲ ಬೋರ್ವೆಲ್ ಗಳು ಬಂದ್ ಆಗುವ ಸ್ಥಿತಿಗೆ ಬಂದಾಗಿವೆ ಆದ ಕಾರಣ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿ ರೈತರು ಕೇಳುವ ದರ ನ್ಯಾಯತವಾಗಿದೆ ಆ ದರವನ್ನು ಕೊಡಬೇಕೆಂದು ವಿನಂತಿಸಲಾಗಿದೆ ರಾಜ್ಯ ಸರ್ಕಾರ ಎಸ್ಎಪಿ ಒಂದು ಸಾವಿರ ಕೊಡಬೇಕು ಬರ ಪರಿಹಾರ ಒಂದು ಎಕರೆಗೆ 30 ಸಾವಿರ ಘೋಷಣೆ ಮಾಡಬೇಕು ಬೆಳೆ ವಿಮೆ ತುಂಬಿದ ರೈತರಿಗೆ ತಕ್ಷಣವೇ ಬೆಳೆವಿಮೆ ಬಿಡುಗಡೆಗೊಳಿಸಬೇಕು ಕೇಂದ್ರದ ಮೇಲೆ ರಾಜ್ಯ ರಾಜ್ಯದ ಮೇಲೆ ಕೇಂದ್ರ ಹೇಳುತ್ತಾ ಕಾಲಹರಣ ಮಾಡಬಾರದು ಕೇಂದ್ರ ಸರ್ಕಾರ ಎಂ ಎಸ್ ಪಿ ಯನ್ನು 60 ರೂಪಾಯಿ ಮಾಡಬೇಕು ಎಂಎಸ್‌ಪಿ ಹೆಚ್ಚು ಮಾಡಿದರೆ ಎಫ್ ಆರ್ ಪಿ ಯಲ್ಲಿ ನಮಗೆ ಹೆಚ್ಚು ಸಿಗುತ್ತೆ ಕಬ್ಬು ಬೆಳೆಗಾರರು ರೈತರು ಸಂಕಷ್ಟದಲ್ಲಿದ್ದಾರೆ ಅದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಾತುಕತೆ ನಡೆಸಿ ತಕ್ಷಣವೇ ಒಣಗುತ್ತಿರುವ ಕಬ್ಬಿನ ಬೆಳೆಗೆ ಸರಿಯಾದ ದರ ಸಿಗುವಂತೆ ಮಾಡಿಕೊಡಬೇಕು ದೇಶದ ಆಹಾರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಯವರು ಹೋರಾಟ ಮಾಡುತ್ತಿರುವ ರೈತರ ಬಳಿ ಬಂದು ರೈತರ ಕಷ್ಟವನ್ನು ಆಲಿಸಿ ಎಂ ಎಸ್ ಪಿ ಯನ್ನು ಹೆಚ್ಚು ಮಾಡಿಕೊಡುತ್ತೇನೆ ಅಂತ ಆಶ್ವಾಸನೆ ಕೊಡಬೇಕು ದೇಶಕ್ಕೆ ಅನ್ನ ಹಾಕುವ ಅನ್ನದಾತ ಬೀದಿಯಲ್ಲಿ ಬದುಕಲು ಸರಕಾರಗಳು ಬಿಡಬಾರದು ರೈತರಿಗೆ ನ್ಯಾಯಯುತವಾದ ಬೆಲೆಯನ್ನು ಕೊಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ವಿನಂತಿಸಿಕೊಂಡಿದ್ದಾರೆ.