ಇ ಖಾತೆ ಮಾಡಿಕೊಡಲು 50ಲಂಚ…ಪಾಲಿಕೆ ಆಯುಕ್ತೆ ಸಸ್ಪೆಂಡ್ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ವೀರಮಾರ್ಗ ನ್ಯೂಸ್ : ಮೈಸೂರು : ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50 ಸಾವಿರ ಲಂಚ ಪಡೆದ ಆರೋಪ ಸಾಬೀತಾದ ಹಿನ್ನಲೆ ವಲಯ ಕಚೇರಿ 2 ರ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿಎಂ ಮಂಜುನಾಥ್ ಅಮಾನತಾಗಿದ್ದಾರೆ.ಗೂಗಲ್ ಪೇ ಮೂಲಕ ಹಣ ಪಡೆದಿದ್ದು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ ಹೊರಡಿಸಿದ್ದಾರೆ.ವಾರ್ಡ್ ನಂ 62 ರ ನಿವಾಸಿ ಪವಿತ್ರ ಎಂಬುವರು ಇ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.ಎರಡು ತಿಂಗಳಾದರೂ ಇ ಖಾತೆ ಮಾಡಿಕೊಡದೆ ಮಂಜುನಾಥ್ ಸತಾಯಿಸಿದ್ದರು.ಪವಿತ್ರ ರವರ ಪರವಾಗಿ ವಕೀಲರಾದ ಲೋಕೇಶ್ ರವರು ಖಾತೆ ಮಾಡಿಕೊಡುವಂತೆ ಮನವಿ ಮಾಡಿದಾಗ ಮಂಜುನಾಥ್ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಮುಂಗಡವಾಗಿ ಗೂಗಲ್ ಪೇ ಮೂಲಕ 50 ಸಾವಿರ ಪಾವತಿಸಲಾಗಿತ್ತು.ಉಳಿದ 50 ಸಾವಿರಕ್ಕೆ ಒತ್ತಾಯಿಸಿದ ಹಿನ್ನಲೆ ಲೋಕೇಶ್ ದಾಖಲೆ ಸಮೇತ ದೂರು ಸಲ್ಲಿಸಿದ್ದರು.ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಮಂಜುನಾಥ್ ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ…

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು