ಸಂಡೂರಿನಲ್ಲಿ KRS. ಪಕ್ಷದ ನೂತನ ಕಚೇರಿ ಉದ್ಘಾಟನೆ.

ಸಂಡೂರಿನಲ್ಲಿ ಕೆ.ಆರ್.ಎಸ್. ಪಕ್ಷದ ನೂತನ ಕಚೇರಿ ಉದ್ಘಾಟನೆ,ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಹೊಸ ಹೆಜ್ಜೆ – ಭ್ರಷ್ಟಾಚಾರಮುಕ್ತ, ಜನಪರ ರಾಜಕಾರಣಕ್ಕೆ ಸಂಕಲ್ಪ—–ರವಿ ಕೃಷ್ಣಾರೆಡ್ಡಿ

ವೀರಮಾರ್ಗ ನ್ಯೂಸ್ : ಸಂಡೂರು : ಬಳ್ಳಾರಿ ಜಿಲ್ಲೆ: ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ಸಂಡೂರು ತಾಲೂಕು ಕಚೇರಿಯನ್ನು ಸಂಡೂರಿನಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು.

Oplus_131072

ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಮಾತನಾಡಿ ನಮ್ಮ ಪಕ್ಷವು ಸಂಡೂರು ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು,ರೈತರು, ಕಾರ್ಮಿಕರು,ಯುವಕರು, ಮಹಿಳೆಯರು ಹಾಗೂ ಸಾಮಾನ್ಯ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಮತ್ತು ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ.

Oplus_131072

ಕೆ.ಆರ್.ಎಸ್. ಪಕ್ಷವು ಪ್ರಾದೇಶಿಕ,ಪ್ರಾಮಾಣಿಕ ಹಾಗೂ ಜನಪರ ರಾಜಕಾರಣದ ಮೂಲಕ ಭ್ರಷ್ಟಾಚಾರಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಸಂಡೂರು ತಾಲೂಕಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು,ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಯುವಕರ ಸಮಸ್ಯೆಗಳು,ಮೂಲಭೂತ ಸೌಕರ್ಯಗಳ ಕೊರತೆ, ಸರ್ಕಾರಿ ಕಚೇರಿಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳು ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರದಲ್ಲೂ ಕೆ.ಆರ್.ಎಸ್. ಪಕ್ಷವು ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

Oplus_131072

ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಶ್ರೀ ರಘು ಜಾಣಗೆರೆ ಮಾತನಾಡಿ ನಮ್ಮದು ಅಧಿಕಾರಕ್ಕಾಗಿ ಜನರನ್ನು ಬಳಸಿಕೊಳ್ಳುವ ರಾಜಕಾರಣವಲ್ಲ; ಜನರಿಗಾಗಿ ಅಧಿಕಾರವನ್ನು ಬಳಸುವ ರಾಜಕಾರಣ ಎಂಬ ಆಶಯದೊಂದಿಗೆ ಸಂಡೂರಿನಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗುವುದು.
ಸಂಡೂರು ತಾಲೂಕಿನ ಪ್ರಜ್ಞಾವಂತ ನಾಗರಿಕರು, ಯುವಕರು,ರೈತರು, ಕಾರ್ಮಿಕರು ಹಾಗೂ ಮಹಿಳೆಯರು ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣಕ್ಕೆ ಕೈಜೋಡಿಸಿ ಕೆ.ಆರ್.ಎಸ್. ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯ ನಿರ್ವಾಹಕ ಸಮಿತಿ ಸದಸ್ಯ ಶ್ರೀನಿವಾಸ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಖಾದರ್ ಬಾಷಾ,ಜಿಲ್ಲಾ ಕಾರ್ಯದರ್ಶಿ ಜನಾರ್ಧನ ರೆಡ್ಡಿ,ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ಮೆಹಬೂಬ್ ಬಾಷಾ,ಸಂಡೂರು ತಾಲೂಕಾಧ್ಯಕ್ಷ ಮಂಜುನಾಥ್ ಗೌಳಿ,ಉಪಾಧ್ಯಕ್ಷರಾದ ಶರ್ಮಾಸ್ ಅಲಿ,ಪ್ರಧಾನ ಕಾರ್ಯದರ್ಶಿ ರವಿ ನಾಡಿಗೇರ,ರೈತ ಸಂಘದ ಅಧ್ಯಕ್ಷ ನಾಯ್ಡು,ಜನ ಸಂಗ್ರಾಮ್ ಪರಿಷತ್ ಮುಖ್ಯಸ್ಥರಾದ ಟಿ ಎಂ ಶಿವಕುಮಾರ್,ರಾಮು ನಾಯಕ,ಶಂಭುನಾಥ, ಪ್ರದೀಪ್,ಮಲ್ಲಿಕಾರ್ಜುನ, ಹುಚ್ಚುಸಾಬ್, ಎಂ ನಾಗರಾಜ್,ಸೂರ್ಯ, ಮಹಮದ್ ಗೌಸ್,ಶಾಂತ ವೀರಪ್ಪ,ಮಾರೆಪ್ಪ, ನಾಗವೇಣಿ ಸೇರಿಂದತೆ ಜಿಲ್ಲಾ ಸಮಿತಿ ಹಾಗೂ ವಿವಿಧ ತಾಲೂಕ ಸಮಿತಿ ಪದಾಧಿಕಾರಿಗಳು ಹಾಗೂ ಸೈನಿಕರು,ಮಹಿಳೆಯರು ಭಾಗವಹಿಸಿದ್ದರು.