ನಕಲಿ PHD ಪದವೀಧರರ ವಿರುದ್ಧ ಸರ್ಕಾರ ಸಮರ…

ನಕಲಿ PHD ಪದವೀಧರರ ವಿರುದ್ಧ ಸರ್ಕಾರ ಸಮರ : ಕ್ರಿಮಿನಲ್ ಪ್ರಕರಣ..

ವೀರಮಾರ್ಗ ನ್ಯೂಸ್ : ಬೆಂಗಳೂರು : ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಕಲಿ ಪಿಹೆಚ್ಚಿ ಪದವಿ ಪ್ರಮಾಣಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರ ಹುದ್ದೆ ಗಿಟ್ಟಿಸಿಕೊಂಡ 249 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಆನ್ಸೆನ್ ಕೌನ್ಸಲಿಂಗ್‌ ಮೂಲಕ ನೇಮಕಗೊಂಡಿದ್ದ ಉಪನ್ಯಾಸಕರ ದಾಖಲೆಗಳನ್ನು ಇಲಾಖೆಯ ನಿರ್ವಹಣಾ ವ್ಯವಸ್ಥೆ ಮೂಲಕ ಪರಿಶೀಲನೆ ನಡೆಸಿದ ವೇಳೆ ಅಕ್ರಮ ಬಯಲಾಗಿದೆ ಎಂದು ತಿಸಿಸಿದರು.

ಈ ಕುರಿತು ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರೆಡ್ಡಿ ಶಿಕ್ಷಣ ಇಲಾಖೆ ಗುಣಮಟ್ಟ ಹಾಗೂ ನಂಬಿಕೆ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಪಾವಿತ್ರ್ಯತೆ ಹಾಳು ಮಾಡುವ ಇಂತಹ ಜಾಲಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮುಂದೆ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಡಿಜಿಟಲ್ ಪರಿಶೀಲನಾ ವ್ಯವಸ್ಥೆ ಬಲಪಡಿಸಲಾಗುತ್ತದೆ ಎಂದರು.

ವರದಿ : ಚನ್ನೇಶ್ ಬೆಂಗಳೂರು.