ವೀರಮಾರ್ಗ ನ್ಯೂಸ್ : ಬೆಳಗಾವಿಯ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹೋಬಳಿಯ ಕಿತ್ತೂರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಂಪಗಾಂವ ಗ್ರಾಮದ ಗಣ್ಯ ಮನೆತನದ, ಗ್ರಾಮ ಪಂಚಾಯಿತಿಯ ಸದಸ್ಯರು, ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದ ನಿರ್ದೇಶಕರು, ಶಿಕ್ಷಣ ಪ್ರೇಮಿಗಳು, ಸೋಲಿಲ್ಲದ ಸರದಾರ ಶ್ರೀ ಮಂಜುನಾಥ ಶಿಡ್ಲವ್ವಗೋಳ ಅವರಿಗೆ 46ನೆಯ ಹುಟ್ಟುಹಬ್ಬದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲರು ಸಂಪಗಾಂವ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸನ್ಮಾನಿಸಿ,ಅಭಿನಂದಿಸಿ,ಶುಭ ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಶ್ರೀ ಎಸ್.ಡಿ. ಗಂಗಣ್ಣವರ,ಆರ್.ಇ.ಎಸ್.ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶ್ರೀಕಾಂತ ಎಸ್.ಉಳ್ಳೇಗಡ್ಡಿ , ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಈಶಾ ಆಸ್ಪತ್ರೆಯ ವೈದ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.